عَنْ أَبِي هُرَيْرَةَ رضي الله عنه عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«لَا يَسْتُرُ عَبْدٌ عَبْدًا فِي الدُّنْيَا إِلَّا سَتَرَهُ اللهُ يَوْمَ الْقِيَامَةِ».
[صحيح] - [رواه مسلم] - [صحيح مسلم: 2590]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಇಹಲೋಕದಲ್ಲಿ ಒಬ್ಬ ದಾಸನು ಇನ್ನೊಬ್ಬ ದಾಸನನ್ನು ಮುಚ್ಚಿಡುವುದಾದರೆ, ಪುನರುತ್ಥಾನ ದಿನ ಅಲ್ಲಾಹು ಅವನನ್ನು ಮುಚ್ಚಿಡುತ್ತಾನೆ."
[صحيح] - [رواه مسلم] - [صحيح مسلم - 2590]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಒಬ್ಬ ಮುಸಲ್ಮಾನನು ತನ್ನ ಸಹೋದರನಾದ ಇನ್ನೊಬ್ಬ ಮುಸಲ್ಮಾನನಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಮುಚ್ಚಿಡುವುದಾದರೆ, ಪುನರುತ್ತಾನ ದಿನ ಅಲ್ಲಾಹು ಅವನ ವಿಷಯವನ್ನು ಮುಚ್ಚಿಡುತ್ತಾನೆ. ಏಕೆಂದರೆ ಪ್ರತಿಫಲವು ಕರ್ಮಕ್ಕೆ ಅನುಗುಣವಾಗಿರುತ್ತದೆ. ಅಲ್ಲಾಹು ಅವನನ್ನು ಮುಚ್ಚಿಡುತ್ತಾನೆ ಎಂದರೆ ಮಹ್ಶರದಲ್ಲಿ ನೆರೆದ ಜನರ ಮುಂದೆ ಪ್ರಚಾರವಾಗದಂತೆ ಅವನ ನ್ಯೂನತೆಗಳು ಮತ್ತು ಪಾಪಗಳನ್ನು ಮುಚ್ಚಿಡುತ್ತಾನೆ. ಇದು ಅವನನ್ನು ಆ ಪಾಪಗಳಿಗಾಗಿ ವಿಚಾರಣೆ ಮಾಡುವುದನ್ನು ಮತ್ತು ಅವನಿಗೆ ಅದನ್ನು ನೆನಪಿಸಿಕೊಡುವುದ್ನು ಬಿಟ್ಟುಬಿಡುವುದರ ಮೂಲಕವೂ ಆಗಿರಬಹುದು.