عَنْ جَابِرٍ رضي الله عنه قَالَ: سَمِعْتُ النَّبِيَّ صَلَّى اللهُ عَلَيْهِ وَسَلَّمَ قَبْلَ وَفَاتِهِ بِثَلَاثٍ يَقُولُ:
«لَا يَمُوتَنَّ أَحَدُكُمْ إِلَّا وَهُوَ يُحْسِنُ بِاللهِ الظَّنَّ».
[صحيح] - [رواه مسلم] - [صحيح مسلم: 2877]
المزيــد ...
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣ ಹೊಂದುವುದಕ್ಕೆ ಮೂರು ದಿನಗಳ ಮೊದಲು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ನಿಮ್ಮಲ್ಲಿ ಯಾರೂ ಅಲ್ಲಾಹನ ಬಗ್ಗೆ ಒಳ್ಳೆಯ ಭಾವನೆಯನ್ನಿಟ್ಟುಕೊಂಡಲ್ಲದೆ ಮರಣವನ್ನಪ್ಪಬಾರದು."
[صحيح] - [رواه مسلم] - [صحيح مسلم - 2877]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಮುಸ್ಲಿಮರಿಗೆ ಪ್ರೋತ್ಸಾಹಿಸುವುದೇನೆಂದರೆ, ಅವರು ಅಲ್ಲಾಹನ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಇಟ್ಟುಕೊಂಡಲ್ಲದೆ ಮರಣವನ್ನಪ್ಪಬಾರದು. ಅಂದರೆ ಮರಣಾಸನ್ನ ಸಮಯದಲ್ಲಿ ಅಲ್ಲಾಹು ಅವನನ್ನು ಕರುಣಿಸುತ್ತಾನೆ ಮತ್ತು ಕ್ಷಮಿಸುತ್ತಾನೆ ಎಂಬ ಅವನ ನಿರೀಕ್ಷೆಯು ಹೆಚ್ಚಾಗಿರಬೇಕು. ಏಕೆಂದರೆ, ಭಯವು ಕರ್ಮವನ್ನು ಸುಧಾರಿಸುವುದಕ್ಕೆ ಇರುವುದಾಗಿದೆ. ಮರಣವೇಳೆಯು ಕರ್ಮವೆಸಗುವ ವೇಳೆಯಲ್ಲ. ಆದ್ದರಿಂದ ಆ ಸಮಯದಲ್ಲಿ ನಿರೀಕ್ಷೆಯು ಹೆಚ್ಚಾಗಿರಬೇಕು.