عَنِ الزُّبَيْرِ بْنِ العَوَّامِ رَضِيَ اللَّهُ عَنْهُ عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«لَأَنْ يَأْخُذَ أَحَدُكُمْ حَبْلَهُ، فَيَأْتِيَ بِحُزْمَةِ الحَطَبِ عَلَى ظَهْرِهِ، فَيَبِيعَهَا، فَيَكُفَّ اللَّهُ بِهَا وَجْهَهُ خَيْرٌ لَهُ مِنْ أَنْ يَسْأَلَ النَّاسَ أَعْطَوْهُ أَوْ مَنَعُوهُ».
[صحيح] - [رواه البخاري] - [صحيح البخاري: 1471]
المزيــد ...
ಝುಬೈರ್ ಇಬ್ನುಲ್ ಅವ್ವಾಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮ್ಮಲ್ಲೊಬ್ಬನು ತನ್ನ ಹಗ್ಗವನ್ನು ತೆಗೆದುಕೊಂಡು, ನಂತರ ತನ್ನ ಬೆನ್ನ ಮೇಲೆ ಸೌದೆಯ ಹೊರೆಯೊಂದಿಗೆ ಬಂದು, ನಂತರ ಅದನ್ನು ಮಾರಿ, ಮತ್ತು ಅದರ ಮೂಲಕ ಅಲ್ಲಾಹು ಅವನ ಮುಖವನ್ನು (ಭಿಕ್ಷಾಟನೆಯ ಅವಮಾನದಿಂದ) ಕಾಪಾಡುವುದು, ಅವನು ಜನರಲ್ಲಿ ಬೇಡುವುದಕ್ಕಿಂತ ಉತ್ತಮವಾಗಿದೆ; ಅವರು (ಜನರು) ಅವನಿಗೆ ಕೊಡಲಿ ಅಥವಾ ಕೊಡದಿರಲಿ".
[صحيح] - [رواه البخاري] - [صحيح البخاري - 1471]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಜನರಲ್ಲೊಬ್ಬನು ಯಾವುದಾದರೂ ಒಂದು ಕೆಲಸವನ್ನು ಮಾಡುವುದು - ಅದು ಹಗ್ಗವನ್ನು ತೆಗೆದುಕೊಂಡು, ತನ್ನ ಬೆನ್ನ ಮೇಲೆ ಸೌದೆಯನ್ನು ಸಂಗ್ರಹಿಸಿ, ಅದನ್ನು ಮಾರಿ ಅದರಿಂದ ತಿನ್ನುವುದು, ಅಥವಾ ದಾನ ಮಾಡುವುದು ಮತ್ತು ಅದರ ಮೂಲಕ ಜನರ ಮೇಲೆ ಅವಲಂಬಿತನಾಗುವುದರಿಂದ ದೂರವಾಗಿ ಭಿಕ್ಷಾಟನೆಯ ಅವಮಾನದಿಂದ ತನ್ನ ಮುಖವನ್ನು ಕಾಪಾಡಿಕೊಳ್ಳುವುದಾಗಿದ್ದರೂ ಸಹ - ಇದು ಅವನು ಜನರಲ್ಲಿ ಬೇಡುವುದಕ್ಕಿಂತ ಉತ್ತಮವಾಗಿದೆ. ಅವರು ಅವನಿಗೆ ಕೊಡಲಿ ಅಥವಾ ಕೊಡದಿರಲಿ. ಏಕೆಂದರೆ ಜನರಲ್ಲಿ ಬೇಡುವುದು ಅವಮಾನಕರವಾಗಿದೆ. ಸತ್ಯವಿಶ್ವಾಸಿಯು ಗೌರವಾನ್ವಿತನು, ಅವಮಾನಿತನಲ್ಲ.