عَنْ أَبِي مُوسَى رَضِيَ اللَّهُ عَنْهُ قَالَ: قَالَ النَّبِيُّ صَلَّى اللهُ عَلَيْهِ وَسَلَّمَ:
«مَثَلُ الَّذِي يَذْكُرُ رَبَّهُ وَالَّذِي لاَ يَذْكُرُ رَبَّهُ، مَثَلُ الحَيِّ وَالمَيِّتِ»، ولفظ مسلم: «مَثَلُ الْبَيْتِ الَّذِي يُذْكَرُ اللهُ فِيهِ، وَالْبَيْتِ الَّذِي لَا يُذْكَرُ اللهُ فِيهِ، مَثَلُ الْحَيِّ وَالْمَيِّتِ».
[صحيح] - [متفق عليه] - [صحيح البخاري: 6407]
المزيــد ...
ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ತನ್ನ ಪರಿಪಾಲಕನನ್ನು ಸ್ಮರಿಸುವವನ ಮತ್ತು ತನ್ನ ಪರಿಪಾಲಕನನ್ನು ಸ್ಮರಿಸದವನ ಉದಾಹರಣೆಯು, ಜೀವಂತವಿರುವವನ ಮತ್ತು ಸತ್ತವನ ಉದಾಹರಣೆಯಂತಿದೆ." ಮುಸ್ಲಿಂರ ವರದಿಯಲ್ಲಿ ಹೀಗಿದೆ: "ಅಲ್ಲಾಹನನ್ನು ಸ್ಮರಿಸಲ್ಪಡುವ ಮನೆಯ ಉದಾಹರಣೆ ಮತ್ತು ಅಲ್ಲಾಹನನ್ನು ಸ್ಮರಿಸಲ್ಪಡದ ಮನೆಯ ಉದಾಹರಣೆಯು, ಜೀವಂತವಿರುವವನ ಮತ್ತು ಸತ್ತವನ ಉದಾಹರಣೆಯಂತಿದೆ."
[صحيح] - [متفق عليه] - [صحيح البخاري - 6407]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಅಲ್ಲಾಹನನ್ನು ಸ್ಮರಿಸುವವನ ಮತ್ತು ಅಲ್ಲಾಹನನ್ನು ಸ್ಮರಿಸದವನ ನಡುವಿನ ವ್ಯತ್ಯಾಸವನ್ನು ವಿವರಿಸಿದ್ದಾರೆ. ಪ್ರಯೋಜನದಲ್ಲಿ ಮತ್ತು ಉತ್ತಮ ರೂಪದಲ್ಲಿ ಅದು ಜೀವಂತವಾಗಿರುವವರ ಮತ್ತು ಸತ್ತವರ ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ. ತನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಸ್ಮರಿಸುವವನ ಉದಾಹರಣೆಯು ಜೀವಂತವಾಗಿರುವವನ ಉದಾಹರಣೆಯಂತಿದೆ. ಅವನ ಬಾಹ್ಯರೂಪವು ಜೀವದ ಬೆಳಕಿನಿಂದ ಮತ್ತು ಅವನ ಅಂತರಂಗವು ಜ್ಞಾನದ ಬೆಳಕಿನಿಂದ ಅಲಂಕರಿಸಲ್ಪಟ್ಟಿದೆ ಹಾಗೂ ಅವನಲ್ಲಿ ಪ್ರಯೋಜನವಿದೆ. ಅಲ್ಲಾಹನನ್ನು ಸ್ಮರಿಸದವನ ಉದಾಹರಣೆಯು ಸತ್ತವನ ಉದಾಹರಣೆಯಂತಿದೆ. ಅವನ ಬಾಹ್ಯರೂಪವು ನಿಷ್ಪ್ರಯೋಜಕವಾಗಿದೆ ಮತ್ತು ಅವನ ಅಂತರಂಗವು ವ್ಯರ್ಥವಾಗಿದೆ ಹಾಗೂ ಅವನಲ್ಲಿ ಯಾವುದೇ ಪ್ರಯೋಜನವಿಲ್ಲ.
ಅದೇ ರೀತಿ, ಮನೆಯ ನಿವಾಸಿಗಳು ಅಲ್ಲಾಹನನ್ನು ಸ್ಮರಿಸುತ್ತಿದ್ದರೆ, ಆ ಮನೆಯನ್ನು ಜೀವಂತ ಮನೆ ಎಂದು ಬಣ್ಣಿಸಲಾಗುತ್ತದೆ. ಇಲ್ಲದಿದ್ದರೆ ಅದು ಸತ್ತ ಮನೆಯಾಗಿದೆ. ಏಕೆಂದರೆ ಅದರ ನಿವಾಸಿಗಳು ಅಲ್ಲಾಹನ ಸ್ಮರಣೆಯನ್ನು ಮರೆತುಬಿಟ್ಟಿದ್ದಾರೆ. ಒಂದು ಮನೆಯನ್ನು ಜೀವಂತ ಮತ್ತು ಸತ್ತ ಮನೆ ಎಂದು ವರ್ಣಿಸಿದರೆ, ಅದರ ಅರ್ಥ ಮನೆಯ ನಿವಾಸಿಗಳಾಗಿದ್ದಾರೆ.