عَنْ أَبٍي سَعِيدٍ الخُدْرِيَّ رَضِيَ اللَّهُ عَنْهُ:
أَنَّ النَّبِيَّ صَلَّى اللهُ عَلَيْهِ وَسَلَّمَ جَلَسَ ذَاتَ يَوْمٍ عَلَى المِنْبَرِ وَجَلَسْنَا حَوْلَهُ، فَقَالَ: «إِنِّي مِمَّا أَخَافُ عَلَيْكُمْ مِنْ بَعْدِي، مَا يُفْتَحُ عَلَيْكُمْ مِنْ زَهْرَةِ الدُّنْيَا وَزِينَتِهَا» فَقَالَ رَجُلٌ: يَا رَسُولَ اللَّهِ، أَوَيَأْتِي الخَيْرُ بِالشَّرِّ؟ فَسَكَتَ النَّبِيُّ صَلَّى اللهُ عَلَيْهِ وَسَلَّمَ، فَقِيلَ لَهُ: مَا شَأْنُكَ؟ تُكَلِّمُ النَّبِيَّ صَلَّى اللهُ عَلَيْهِ وَسَلَّمَ وَلاَ يُكَلِّمُكَ؟ فَرَأَيْنَا أَنَّهُ يُنْزَلُ عَلَيْهِ؟ قَالَ: فَمَسَحَ عَنْهُ الرُّحَضَاءَ، فَقَالَ: «أَيْنَ السَّائِلُ؟» وَكَأَنَّهُ حَمِدَهُ، فَقَالَ: «إِنَّهُ لاَ يَأْتِي الخَيْرُ بِالشَّرِّ، وَإِنَّ مِمَّا يُنْبِتُ الرَّبِيعُ يَقْتُلُ أَوْ يُلِمُّ، إِلَّا آكِلَةَ الخَضْرَاءِ، أَكَلَتْ حَتَّى إِذَا امْتَدَّتْ خَاصِرَتَاهَا اسْتَقْبَلَتْ عَيْنَ الشَّمْسِ، فَثَلَطَتْ وَبَالَتْ، وَرَتَعَتْ، وَإِنَّ هَذَا المَالَ خَضِرَةٌ حُلْوَةٌ، فَنِعْمَ صَاحِبُ المُسْلِمِ مَا أَعْطَى مِنْهُ المِسْكِينَ وَاليَتِيمَ وَابْنَ السَّبِيلِ - أَوْ كَمَا قَالَ النَّبِيُّ صَلَّى اللهُ عَلَيْهِ وَسَلَّمَ - وَإِنَّهُ مَنْ يَأْخُذُهُ بِغَيْرِ حَقِّهِ، كَالَّذِي يَأْكُلُ وَلاَ يَشْبَعُ، وَيَكُونُ شَهِيدًا عَلَيْهِ يَوْمَ القِيَامَةِ».
[صحيح] - [متفق عليه] - [صحيح البخاري: 1465]
المزيــد ...
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಒಂದಿನ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್‌ನ (ಪ್ರವಚನ ಪೀಠದ) ಮೇಲೆ ಮೇಲೆ ಕುಳಿತರು ಮತ್ತು ನಾವು ಅವರ ಸುತ್ತಲೂ ಕುಳಿತೆವು. ಆಗ ಅವರು ಹೇಳಿದರು: "ಖಂಡಿತವಾಗಿಯೂ ನನ್ನ ನಂತರ ನಾನು ನಿಮ್ಮ ಬಗ್ಗೆ ಭಯಪಡುವ ವಿಷಯಗಳಲ್ಲಿ ಒಂದು ಏನೆಂದರೆ, ನಿಮಗೆ ಜಗತ್ತಿನ ಹೊಳಪು ಮತ್ತು ಅದರ ಅಲಂಕಾರಗಳು ತೆರೆಯಲ್ಪಡುವುದು." ಆಗ ಒಬ್ಬ ವ್ಯಕ್ತಿ ಕೇಳಿದರು: ಓ ಅಲ್ಲಾಹನ ಸಂದೇಶವಾಹಕರೇ! "ಒಳಿತು ಕೆಡುಕನ್ನು ತರುತ್ತದೆಯೇ?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೌನವಾದರು. ಆಗ ಜನರು ಆ ವ್ಯಕ್ತಿಯೊಂದಿಗೆ ಕೇಳಿದರು: "ನಿನಗೇನಾಗಿದೆ? ಪ್ರವಾದಿರವರೊಂದಿಗೆ ಮಾತನಾಡುತ್ತಿದ್ದೀಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅವರು ನಿನ್ನೊಂದಿಗೆ ಮಾತನಾಡುತ್ತಿಲ್ಲ?" ನಂತರ ಅವರಿಗೆ ವಹೀ (ದೇವವಾಣಿ) ಅವತೀರ್ಣವಾಗುತ್ತಿದೆಯೆಂದು ನಾವು ಭಾವಿಸಿದೆವು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಹುಬ್ಬಿನಿಂದ ಬೆವರನ್ನು ಒರೆಸಿಕೊಂಡು, "ಪ್ರಶ್ನಿಸಿದಾತ ಎಲ್ಲಿದ್ದಾನೆ?" ಎಂದು ಅವನನ್ನು ಪ್ರಶಂಸಿಸುವ ಧಾಟಿಯಲ್ಲಿ ಕೇಳಿದರು. ನಂತರ ಅವರು ಹೇಳಿದರು: "ಖಂಡಿತವಾಗಿಯೂ ಒಳಿತು ಕೆಡುಕನ್ನು ತರುವುದಿಲ್ಲ. ಖಂಡಿತವಾಗಿಯೂ ವಸಂತಕಾಲದಲ್ಲಿ ಬೆಳೆಯುವ ಸಸ್ಯವರ್ಗವು ಕೊಲ್ಲುತ್ತದೆ ಅಥವಾ ಮಾರಣಾಂತಿಕ ಸ್ಥಿತಿಯನ್ನು ತರುತ್ತದೆ. ಆದರೆ, ಸೊಪ್ಪು ತಿನ್ನುವ ಪ್ರಾಣಿ ಇದಕ್ಕೆ ಹೊರತಾಗಿದೆ. ಅದು ತನ್ನ ಪಕ್ಕೆಲುಬುಗಳು ಅಗಲವಾಗುವ ತನಕ ತಿಂದು, ಸೂರ್ಯನ ಕಡೆಗೆ ತಿರುಗುತ್ತದೆ. ನಂತರ ಸಗಣಿ ಮತ್ತು ಮೂತ್ರ ವಿಸರ್ಜನೆ ಮಾಡಿ, ನಂತರ ಪುನಃ ಮೇಯುತ್ತದೆ. ಖಂಡಿತವಾಗಿಯೂ ಈ ಸಂಪತ್ತು ಹಸಿರು ಮತ್ತು ಸಿಹಿಯಾಗಿದೆ. ತನ್ನ ಸಂಪತ್ತಿನಿಂದ ಅನಾಥರಿಗೆ ಮತ್ತು ದಾರಿಹೋಕರಿಗೆ ದಾನ ಮಾಡುವ ಮುಸಲ್ಮಾನನಿಗೆ ಈ ಸಂಪತ್ತು ಎಷ್ಟು ಒಳ್ಳೆಯ ಸಂಗಾತಿಯಾಗಿದೆ! - ಅಥವಾ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದಂತೆ - ಖಂಡಿತವಾಗಿಯೂ, ಯಾರು ಇದನ್ನು ಅನ್ಯಾಯವಾಗಿ ಪಡೆಯುತ್ತಾನೋ ಅವನ ಸ್ಥಿತಿಯು ತಿಂದರೂ ಹೊಟ್ಟೆ ತುಂಬದವನಂತಾಗಿದೆ. ಪುನರುತ್ಥಾನ ದಿನದಂದು ಅದು ಅವನ ವಿರುದ್ಧ ಸಾಕ್ಷಿ ನುಡಿಯುತ್ತದೆ."
[صحيح] - [متفق عليه] - [صحيح البخاري - 1465]
ಒಂದಿನ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್‌ನ (ಪ್ರವಚನ ಪೀಠದ) ಮೇಲೆ ಕುಳಿತು ತಮ್ಮ ಸಂಗಡಿಗರೊಡನೆ ಮಾತನಾಡುತ್ತಾ ಹೇಳಿದರು:
ಖಂಡಿತವಾಗಿಯೂ ನನ್ನ ನಂತರ ನಿಮ್ಮ ಬಗ್ಗೆ ನಾನು ಹೆಚ್ಚಾಗಿ ಭಯಪಡುವ ಮತ್ತು ಆತಂಕಪಡುವ ವಿಷಯವೇನೆಂದರೆ, ನಿಮಗೆ ತೆರೆದು ಕೊಡಲಾಗುವ ಭೂಮಿಯ ಸಮೃದ್ಧಿಗಳು, ಪ್ರಪಂಚದ ಹೊಳಪುಗಳು, ಅದರ ಅಲಂಕಾರ ಮತ್ತು ಸೌಂದರ್ಯಗಳು, ಹಾಗೂ ಅದರಲ್ಲಿರುವ ವಿವಿಧ ರೀತಿಯ ಭೋಗಗಳು, ಬಟ್ಟೆಗಳು, ಬೆಳೆಗಳು ಮುಂತಾದ ತಾತ್ಕಾಲಿಕವಾಗಿದ್ದರೂ ಸಹ ಜನರು ಅದರ ಸೌಂದರ್ಯವನ್ನು ಕಂಡು ಹೆಮ್ಮೆಪಡುವ ವಸ್ತುಗಳನ್ನಾಗಿದೆ.
ಆಗ ಒಬ್ಬ ವ್ಯಕ್ತಿ ಕೇಳಿದರು: ಪ್ರಪಂಚದ ಹೊಳಪು ಅಲ್ಲಾಹನ ಅನುಗ್ರಹವಾಗಿದೆ. ಹಾಗಾದರೆ ಈ ಅನುಗ್ರಹವು ಮರಳಿ ಹೋಗಿ ಶಿಕ್ಷೆ ಮತ್ತು ಪ್ರತೀಕಾರವಾಗಿ ಮಾರ್ಪಡುತ್ತದೆಯೇ?!
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೌನವಾಗಿದ್ದನ್ನು ನೋಡಿ ಜನರು ಪ್ರಶ್ನಿಸಿದ ವ್ಯಕ್ತಿಯನ್ನು ದೂಷಿಸಿದರು ಮತ್ತು ಇದರಿಂದ ಪ್ರವಾದಿಯವರು ಕೋಪಗೊಂಡಿರಬಹುದೆಂದು ಭಾವಿಸಿದರು.
ನಂತರ, ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಹೀ (ದೇವವಾಣಿ) ಅವತೀರ್ಣವಾಗುತ್ತಿದೆ ಎಂದು ಅವರಿಗೆ ಸ್ಪಷ್ಟವಾಯಿತು. ನಂತರ ಪ್ರವಾದಿಯವರು ತಮ್ಮ ಹಣೆಯಿಂದ ಬೆವರನ್ನು ಒರೆಸುತ್ತಾ ಕೇಳಿದರು: ಪ್ರಶ್ನಿಸಿದ ವ್ಯಕ್ತಿ ಎಲ್ಲಿದ್ದಾನೆ?
ಆ ವ್ಯಕ್ತಿ ಹೇಳಿದರು: ನಾನು ಇಲ್ಲಿದ್ದೇನೆ.
ಆಗ ಅವರು ಅಲ್ಲಾಹನನ್ನು ಸ್ತುತಿಸಿದರು ಮತ್ತು ಪ್ರಶಂಸಿಸಿದರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಜವಾದ ಒಳಿತು ಒಳಿತಿನೊಂದಿಗೆ ಮಾತ್ರ ಬರುತ್ತದೆ. ಆದರೆ ಈ ಹೊಳಪು ಶುದ್ಧರೂಪದಲ್ಲಿರುವ ಒಳಿತಲ್ಲ. ಏಕೆಂದರೆ ಅದು ಪರೀಕ್ಷೆಗಳು, ಸ್ಪರ್ಧೆಗಳು ಮತ್ತು ಪರಲೋಕದ ಕಡೆಗೆ ಸಂಪೂರ್ಣವಾಗಿ ತಿರುಗುವುದನ್ನು ತಪ್ಪಿಸುವ ಕಾರ್ಯಮಗ್ನತೆಗಳಿಗೆ ಕಾರಣವಾಗುತ್ತದೆ. ನಂತರ ಅವರು ಇದಕ್ಕೆ ಒಂದು ಉದಾಹರಣೆಯನ್ನು ನೀಡುತ್ತಾ ಹೇಳಿದರು: ಖಂಡಿತವಾಗಿಯೂ ವಸಂತಕಾಲದಲ್ಲಿ ಬೆಳೆಯುವ ಸಸ್ಯವರ್ಗ ಮತ್ತು ಹಸಿರುಗಳು ಜಾನುವಾರುಗಳನ್ನು ಆಕರ್ಷಿಸುತ್ತವೆಯಾದರೂ, ಅದನ್ನು ಅತಿಯಾಗಿ ತಿನ್ನುವುದರಿಂದ ಅದು ಅಜೀರ್ಣ ಮುಂತಾದ ರೋಗಗಳಿಂದ ಜಾನುವಾರುಗಳನ್ನು ಕೊಲ್ಲುತ್ತವೆ ಅಥವಾ ಸಾಯುವ ಹಂತಕ್ಕೆ ತಲುಪಿಸುತ್ತವೆ. ಆದರೆ ಹಸಿರು ಸೊಪ್ಪನ್ನು ತಿನ್ನುವ ಪ್ರಾಣಿಗಳು ಇದಕ್ಕೆ ಹೊರತಾಗಿವೆ. ಅವು ತಮ್ಮ ಹೊಟ್ಟೆಯ ಒಂದು ಭಾಗ ತುಂಬುವವರೆಗೆ ಮಾತ್ರ ತಿನ್ನುತ್ತವೆ. ನಂತರ ಅವು ಸೂರ್ಯನ ಕಡೆಗೆ ತಿರುಗಿ, ತಮ್ಮ ಹೊಟ್ಟೆಯಿಂದ ತ್ಯಾಜ್ಯವನ್ನು ತೆಳುವಾಗಿ ಅಥವಾ ಮೂತ್ರದ ರೂಪದಲ್ಲಿ ವಿಸರ್ಜಿಸುತ್ತವೆ. ನಂತರ ತಮ್ಮ ಜಠರದಲ್ಲಿರುವುದನ್ನು ಮೇಲಕ್ಕೆತ್ತಿ, ಅದನ್ನು ಅಗಿಯುತ್ತವೆ ನಂತರ ನುಂಗುತ್ತವೆ. ನಂತರ ಮರಳಿ ಹೋಗಿ ಸೊಪ್ಪುಗಳನ್ನು ತಿನ್ನುತ್ತವೆ.
ಖಂಡಿತವಾಗಿಯೂ ಈ ಸಂಪತ್ತು ಸಿಹಿಯಾದ ಹಸಿರು ಸಸ್ಯದಂತಿದೆ. ಅದನ್ನು ಅತಿಯಾಗಿ ತಿಂದರೆ ಅದು ಕೊಲ್ಲುತ್ತದೆ ಅಥವಾ ಸಾಯುವ ಹಂತಕ್ಕೆ ತಲುಪಿಸುತ್ತದೆ. ಆದರೆ, ಧರ್ಮಸಮ್ಮತ ಮಾರ್ಗಗಳಿಂದ ಅಗತ್ಯವಿರುವಷ್ಟು ಮತ್ತು ಸಾಕಾಗುವಷ್ಟು ಮಾತ್ರ ತೆಗೆದುಕೊಂಡರೆ ಅದು ಹಾನಿ ಮಾಡುವುದಿಲ್ಲ. ತನ್ನ ಸಂಪತ್ತಿನಿಂದ ಬಡವರಿಗೆ, ಅನಾಥರಿಗೆ ಮತ್ತು ದಾರಿಹೋಕರಿಗೆ ದಾನ ಮಾಡುವ ಮುಸಲ್ಮಾನನಿಗೆ ಆ ಸಂಪತ್ತು ಎಷ್ಟು ಒಳ್ಳೆಯ ಸಂಗಾತಿಯಾಗಿದೆ! ಯಾರು ಅದನ್ನು ನ್ಯಾಯಸಮ್ಮತವಾಗಿ ತೆಗೆದುಕೊಳ್ಳುತ್ತಾನೋ ಅವನಿಗೆ ಅದರಲ್ಲಿ ಬರ್ಕತ್ (ಸಮೃದ್ದಿ) ದಯಪಾಲಿಸಲಾಗುತ್ತದೆ. ಆದರೆ, ಯಾರು ಅದನ್ನು ಅನ್ಯಾಯವಾಗಿ ತೆಗೆದುಕೊಳ್ಳುತ್ತಾನೋ, ಅವನ ಉದಾಹರಣೆಯು ತಿಂದರೂ ಹೊಟ್ಟೆ ತುಂಬದವನಂತೆ. ಪುನರುತ್ಥಾನ ದಿನದಂದು ಅದು ಅವನ ವಿರುದ್ಧ ಸಾಕ್ಷಿ ನುಡಿಯುತ್ತದೆ.