عَنْ جَابِرِ بْنِ عَبْدِ اللهِ رضي الله عنهما أَنَّهُ سَمِعَ النَّبِيَّ صَلَّى اللهُ عَلَيْهِ وَسَلَّمَ يَقُولُ:
«إِذَا دَخَلَ الرَّجُلُ بَيْتَهُ، فَذَكَرَ اللهَ عِنْدَ دُخُولِهِ وَعِنْدَ طَعَامِهِ، قَالَ الشَّيْطَانُ: لَا مَبِيتَ لَكُمْ، وَلَا عَشَاءَ، وَإِذَا دَخَلَ، فَلَمْ يَذْكُرِ اللهَ عِنْدَ دُخُولِهِ، قَالَ الشَّيْطَانُ: أَدْرَكْتُمُ الْمَبِيتَ، وَإِذَا لَمْ يَذْكُرِ اللهَ عِنْدَ طَعَامِهِ، قَالَ: أَدْرَكْتُمُ الْمَبِيتَ وَالْعَشَاءَ».
[صحيح] - [رواه مسلم] - [صحيح مسلم: 2018]
المزيــد ...
ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದ್ದಾರೆ:
"ಒಬ್ಬ ವ್ಯಕ್ತಿ ಮನೆಯನ್ನು ಪ್ರವೇಶಿಸುವಾಗ ಮತ್ತು ಆಹಾರ ಸೇವಿಸುವಾಗ ಅಲ್ಲಾಹನನ್ನು ಸ್ಮರಿಸಿದರೆ, ಶೈತಾನನು ಹೇಳುತ್ತಾನೆ: ನಿಮಗೆ ಇಲ್ಲಿ ರಾತ್ರಿವಾಸವಿಲ್ಲ ಮತ್ತು ರಾತ್ರಿಭೋಜನವಿಲ್ಲ. ಆದರೆ ಅವನು ಮನೆಯನ್ನು ಪ್ರವೇಶಿಸುವಾಗ ಅಲ್ಲಾಹನನ್ನು ಸ್ಮರಿಸದಿದ್ದರೆ, ಶೈತಾನನು ಹೇಳುತ್ತಾನೆ: ನೀವು ರಾತ್ರಿವಾಸವನ್ನು ಪಡೆದಿದ್ದೀರಿ. ಅವನು ಆಹಾರ ಸೇವಿಸುವಾಗ ಅಲ್ಲಾಹನನ್ನು ಸ್ಮರಿಸದಿದ್ದರೆ ಶೈತಾನನು ಹೇಳುತ್ತಾನೆ: ನೀವು ರಾತ್ರಿವಾಸವನ್ನು ಮತ್ತು ರಾತ್ರಿಭೋಜನವನ್ನು ಪಡೆದಿದ್ದೀರಿ."
[صحيح] - [رواه مسلم] - [صحيح مسلم - 2018]
ಮನೆಯೊಳಗೆ ಪ್ರವೇಶಿಸುವಾಗ ಮತ್ತು ಆಹಾರ ಸೇವಿಸುವ ಮೊದಲು ಅಲ್ಲಾಹನನ್ನು ಸ್ಮರಿಸಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶಿಸಿದ್ದಾರೆ. ಅದೇಕೆಂದರೆ, ಮನೆಯನ್ನು ಪ್ರವೇಶಿಸುವಾಗ ಮತ್ತು ಆಹಾರ ಸೇವಿಸುವಾಗ 'ಬಿಸ್ಮಿಲ್ಲಾ' ಎಂದು ಅಲ್ಲಾಹನನ್ನು ಸ್ಮರಿಸಿದರೆ, ಶೈತಾನನು ತನ್ನ ಅನುಯಾಯಿಗಳಿಗೆ ಹೇಳುತ್ತಾನೆ: ಈ ಮನೆಯಲ್ಲಿ ನಿಮಗೆ ರಾತ್ರಿ ವಾಸ ಮಾಡುವ ಅಥವಾ ರಾತ್ರಿ ಭೋಜನ ಮಾಡುವ ಭಾಗ್ಯವಿಲ್ಲ. ಏಕೆಂದರೆ, ಈ ಮನೆಯ ಯಜಮಾನನು ಅಲ್ಲಾಹನ ಸ್ಮರಣೆಯ ಮೂಲಕ ಇದನ್ನು ನಿಮ್ಮಿಂದ ಭದ್ರಪಡಿಸಿದ್ದಾನೆ. ಆದರೆ ಅವನು ಮನೆಯನ್ನು ಪ್ರವೇಶಿಸುವಾಗ ಅಥವಾ ಆಹಾರ ಸೇವಿಸುವಾಗ ಅಲ್ಲಾಹನನ್ನು ಸ್ಮರಿಸದಿದ್ದರೆ, ಶೈತಾನನು ತನ್ನ ಅನುಯಾಯಿಗಳಿಗೆ ಹೇಳುತ್ತಾನೆ: ನೀವು ಈ ಮನೆಯಲ್ಲಿ ರಾತ್ರಿವಾಸವನ್ನು ಮತ್ತು ರಾತ್ರಿಭೋಜನವನ್ನು ಪಡೆದಿದ್ದೀರಿ.