عَنْ أَبِي هُرَيْرَةَ رَضِيَ اللَّهُ عَنْهُ أَنَّ رَسُولَ اللَّهِ صَلَّى اللهُ عَلَيْهِ وَسَلَّمَ، قَالَ:
«مَنْ قَالَ: لاَ إِلَهَ إِلَّا اللَّهُ، وَحْدَهُ لاَ شَرِيكَ لَهُ، لَهُ المُلْكُ وَلَهُ الحَمْدُ، وَهُوَ عَلَى كُلِّ شَيْءٍ قَدِيرٌ، فِي يَوْمٍ مِائَةَ مَرَّةٍ، كَانَتْ لَهُ عَدْلَ عَشْرِ رِقَابٍ، وَكُتِبَتْ لَهُ مِائَةُ حَسَنَةٍ، وَمُحِيَتْ عَنْهُ مِائَةُ سَيِّئَةٍ، وَكَانَتْ لَهُ حِرْزًا مِنَ الشَّيْطَانِ يَوْمَهُ ذَلِكَ حَتَّى يُمْسِيَ، وَلَمْ يَأْتِ أَحَدٌ بِأَفْضَلَ مِمَّا جَاءَ بِهِ إِلَّا أَحَدٌ عَمِلَ أَكْثَرَ مِنْ ذَلِكَ».
[صحيح] - [متفق عليه] - [صحيح البخاري: 3293]
المزيــد ...
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"'ಲಾ ಇಲಾಹ ಇಲ್ಲಲ್ಲಾಹ್, ವಹ್‌ದಹೂ ಲಾ ಶರೀಕ ಲಹೂ, ಲಹುಲ್-ಮುಲ್ಕು ವ ಲಹುಲ್-ಹಮ್ದು, ವ ಹುವ ಅಲಾ ಕುಲ್ಲಿ ಶೈಇನ್ ಖದೀರ್' (ಅಲ್ಲಾಹನ ಹೊರತು ಬೇರೆ ಆರಾಧ್ಯನಿಲ್ಲ, ಅವನು ಏಕೈಕನು, ಅವನಿಗೆ ಯಾವುದೇ ಸಹಭಾಗಿಗಳಿಲ್ಲ, ಸಾರ್ವಭೌಮತ್ವ ಅವನದೇ ಮತ್ತು ಎಲ್ಲಾ ಸ್ತುತಿಗಳೂ ಅವನಿಗೆ, ಮತ್ತು ಅವನು ಪ್ರತಿಯೊಂದು ವಿಷಯದಲ್ಲೂ ಸಾಮರ್ಥ್ಯವುಳ್ಳವನು) ಎಂದು ಒಂದು ದಿನದಲ್ಲಿ ನೂರು ಬಾರಿ ಯಾರು ಹೇಳುತ್ತಾರೋ, ಅವನಿಗೆ ಹತ್ತು ಗುಲಾಮರನ್ನು ಸ್ವತಂತ್ರಗೊಳಿಸಿದ್ದಕ್ಕೆ ಸಮಾನವಾದ (ಪ್ರತಿಫಲ) ಇರುತ್ತದೆ. ಅವನಿಗೆ ನೂರು ಪುಣ್ಯಗಳು ದಾಖಲಿಸಲಾಗುತ್ತದೆ, ಮತ್ತು ಅವನಿಂದ ನೂರು ಪಾಪಗಳನ್ನು ಅಳಿಸಲಾಗುತ್ತದೆ. ಆ ದಿನ ಸಂಜೆಯಾಗುವವರೆಗೆ ಅದು (ಅವನಿಗೆ) ಶೈತಾನನಿಂದ ರಕ್ಷಾಕವಚವಾಗಿರುತ್ತದೆ. ಅದಕ್ಕಿಂತ ಹೆಚ್ಚು (ಬಾರಿ ಹೇಳಿದವನ) ಹೊರತು ಬೇರೆ ಯಾರೂ ಅದಕ್ಕಿಂತ ಉತ್ತಮವಾದುದನ್ನು ತರುವುದಿಲ್ಲ".
[صحيح] - [متفق عليه] - [صحيح البخاري - 3293]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, (ಲಾ ಇಲಾಹ) ಸತ್ಯವಾದ ಆರಾಧ್ಯನಿಲ್ಲ (ಇಲ್ಲಲ್ಲಾಹ್) ಅಲ್ಲಾಹನ ಹೊರತು, (ವಹ್‌ದಹೂ ಲಾ ಶರೀಕ ಲಹೂ) ಅವನು ಏಕೈಕನು, ಅವನಿಗೆ ಅವನ ದೈವತ್ವ, ಪ್ರಭುತ್ವ, ಹೆಸರು ಮತ್ತು ಗುಣಲಕ್ಷಣಗಳಲ್ಲಿ ಯಾವುದೇ ಸಹಭಾಗಿಗಳಿಲ್ಲ, (ಲಹುಲ್ ಮುಲ್ಕ್) ಸಾರ್ವಭೌಮತ್ವ, ಅಧಿಕಾರ ಮತ್ತು ಸಂಪೂರ್ಣ ನಿರ್ವಹಣೆಯು ಅವನದ್ದೇ ಆಗಿದೆ, (ವ ಲಹುಲ್ ಹಮ್ದು) ಅವನು ಸೃಷ್ಟಿಸುವ ಮತ್ತು ವಿಧಿಸುವ ಎಲ್ಲದರಲ್ಲೂ ಎಲ್ಲಾ ಸ್ತುತಿಗಳೂ ಅವನಿಗೆ ಸಲ್ಲುತ್ತವೆ, (ವ ಹುವ ಅಲಾ ಕುಲ್ಲಿ ಶೈಇನ್ ಖದೀರ್) ಮತ್ತು ಅವನು ಪ್ರತಿಯೊಂದು ವಿಷಯದಲ್ಲೂ ಸಾಮರ್ಥ್ಯವುಳ್ಳವನು, ಅವನನ್ನು ತಡೆಯುವ ಮತ್ತು ಪ್ರತಿರೋಧಿಸುವ ಶಕ್ತಿ ಯಾರಿಗೂ ಇಲ್ಲ, ಮತ್ತು ಅವನು ಬಯಸದೇ ಇರುವುದು ಸಂಭವಿಸುವುದಿಲ್ಲ. ಯಾರು ಈ ಧಿಕ್ರ್ ಅನ್ನು ಒಂದು ದಿನದಲ್ಲಿ ನೂರು ಬಾರಿ ಪುನರಾವರ್ತಿಸುತ್ತಾರೋ, ಅವನಿಗೆ ಅಲ್ಲಾಹನ ಬಳಿ ಹತ್ತು ಗುಲಾಮರನ್ನು ಸ್ವತಂತ್ರಗೊಳಿಸಿದಷ್ಟು ಪ್ರತಿಫಲ ದಾಖಲಾಗುತ್ತದೆ. ಅವನಿಗೆ ನೂರು ಪುಣ್ಯಗಳು ಮತ್ತು ಸ್ವರ್ಗದಲ್ಲಿ ದರ್ಜೆಗಳು ದಾಖಲಾಗುತ್ತದೆ. ಅವನಿಂದ ನೂರು ಪಾಪಗಳನ್ನು ಅಳಿಸಿಹಾಕಲಾಗುತ್ತದೆ ಮತ್ತು ನಿವಾರಿಸಲಾಗುತ್ತದೆ. ಆ ದಿನ ಸಂಜೆಯಾಗಿ ಸೂರ್ಯ ಮುಳುಗುವವರೆಗೆ ಶೈತಾನನಿಂದ, ಅವನ ವಂಚನೆಯಿಂದ ಮತ್ತು ಅವನ ಆಧಿಪತ್ಯದಿಂದ ಅದು ಅವನಿಗೆ ಒಂದು ರಕ್ಷಾಕವಚ, ಕಾಪಾಡುವಿಕೆ, ತಡೆ ಮತ್ತು ಕೋಟೆಯಾಗಿರುತ್ತದೆ. ಅದಕ್ಕಿಂತ ಹೆಚ್ಚು ಬಾರಿ ಹೇಳಿದವನ ಹೊರತು ಪುನರುತ್ಥಾನ ದಿನದಂದು ಯಾರೂ ಅದಕ್ಕಿಂತ ಉತ್ತಮವಾದುದನ್ನು ತರುವುದಿಲ್ಲ.