عَنْ عَبْدِ اللهِ بْنِ مَسْعُودٍ رضي الله عنه قَالَ: قَالَ رَسُولُ اللهِ صَلَّى اللَّهُ عَلَيْهِ وَسَلَّمَ:
«لَيْسَ الْمُؤْمِنُ بِالطَّعَّانِ وَلاَ اللَّعَّانِ وَلاَ الفَاحِشِ وَلاَ البَذِيءِ».
[صحيح] - [رواه الترمذي] - [سنن الترمذي: 1977]
المزيــد ...
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಸತ್ಯವಿಶ್ವಾಸಿಯು ದೂಷಿಸುವವನಲ್ಲ, ಶಪಿಸುವವನಲ್ಲ, ಅಶ್ಲೀಲವಾಗಿ ಮಾತನಾಡುವವನಲ್ಲ ಅಥವಾ ಅವಾಚ್ಯ ಶಬ್ದಗಳನ್ನು ಬಳಸುವವನಲ್ಲ."
[صحيح] - [رواه الترمذي] - [سنن الترمذي - 1977]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಜನರ ವಂಶವನ್ನು ಟೀಕಿಸುವುದು, ಅತ್ಯಧಿಕವಾಗಿ ದೂಷಿಸುವುದು ಮತ್ತು ಶಪಿಸುವುದು, ಯಾವುದೇ ನಾಚಿಕೆಯಿಲ್ಲದೆ ದೈಹಿಕವಾಗಿ ಮತ್ತು ಮೌಖಿಕವಾಗಿ ಅಶ್ಲೀಲವಾಗಿ ವರ್ತಿಸುವುದು ಪೂರ್ಣರೂಪದ ಸತ್ಯವಿಶ್ವಾಸವನ್ನು ಹೊಂದಿರುವ ಸತ್ಯವಿಶ್ವಾಸಿಯ ಸ್ವಭಾವಗಳಲ್ಲ.