عَنْ عَلِيٍّ رَضِيَ اللَّهُ عَنْهُ: إِذَا حَدَّثْتُكُمْ عَنْ رَسُولِ اللَّهِ صَلَّى اللهُ عَلَيْهِ وَسَلَّمَ فَلَأَنْ أَخِرَّ مِنَ السَّمَاءِ أَحَبُّ إِلَيَّ مِنْ أَنْ أَكْذِبَ عَلَيْهِ، وَإِذَا حَدَّثْتُكُمْ فِيمَا بَيْنِي وَبَيْنَكُمْ فَإِنَّ الحَرْبَ خَدْعَةٌ، سَمِعْتُ رَسُولَ اللَّهِ صَلَّى اللهُ عَلَيْهِ وَسَلَّمَ يَقُولُ:
«يَأْتِي فِي آخِرِ الزَّمَانِ قَوْمٌ حُدَثَاءُ الأَسْنَانِ سُفَهَاءُ الأَحْلاَمِ، يَقُولُونَ مِنْ خَيْرِ قَوْلِ البَرِيَّةِ، يَمْرُقُونَ مِنَ الإِسْلاَمِ كَمَا يَمْرُقُ السَّهْمُ مِنَ الرَّمِيَّةِ، لاَ يُجَاوِزُ إِيمَانُهُمْ حَنَاجِرَهُمْ، فَأَيْنَمَا لَقِيتُمُوهُمْ فَاقْتُلُوهُمْ، فَإِنَّ قَتْلَهُمْ أَجْرٌ لِمَنْ قَتَلَهُمْ يَوْمَ القِيَامَةِ».
[صحيح] - [متفق عليه] - [صحيح البخاري: 3611]
المزيــد ...
ಅಲೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: (ಅವರು ಹೇಳಿದರು:) "ನಾನು ನಿಮಗೆ ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) (ಯಾವುದೇ ಒಂದು ಹದೀಸ್) ತಿಳಿಸುವಾಗ, ಅವರ ಮೇಲೆ ಸುಳ್ಳು ಹೇಳುವುದಕ್ಕಿಂತ ಆಕಾಶದಿಂದ ಕೆಳಗೆ ಬೀಳುವುದು ನನಗೆ ಹೆಚ್ಚು ಪ್ರಿಯವಾಗಿದೆ. ಆದರೆ, ನಾನು ನನ್ನ ಮತ್ತು ನಿಮ್ಮ ನಡುವಿನ ವಿಷಯದಲ್ಲಿ ಮಾತನಾಡುವಾಗ (ಹಾಗೆ ಚಿಂತಿಸುವುದಿಲ್ಲ). ಏಕೆಂದರೆ, ಯುದ್ಧವು ಒಂದು ತಂತ್ರವಾಗಿದೆ. ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಕೇಳಿದ್ದೇನೆ:
'ಅಂತ್ಯಕಾಲದಲ್ಲಿ ಒಂದು ಜನಾಂಗವು ಬರುತ್ತದೆ. ಅವರು ವಯಸ್ಸಿನಲ್ಲಿ ಚಿಕ್ಕವರು ಮತ್ತು ಬುದ್ಧಿಶಕ್ತಿಯಲ್ಲಿ ಅವಿವೇಕಿಗಳು. ಅವರು ಸೃಷ್ಟಿಗಳ ಮಾತುಗಳಲ್ಲೇ ಅತ್ಯುತ್ತಮವಾದ ಮಾತನ್ನು ಹೇಳುತ್ತಾರೆ. ಬಾಣವು ಗುರಿಯಿಂದ ಹೊರಬೀಳುವಷ್ಟು ವೇಗವಾಗಿ ಅವರು ಇಸ್ಲಾಮಿನಿಂದ ಹೊರಬೀಳುತ್ತಾರೆ. ಅವರ ಈಮಾನ್ (ವಿಶ್ವಾಸ) ಅವರ ಗಂಟಲುಗಳನ್ನು ದಾಟಿ ಹೋಗುವುದಿಲ್ಲ (ಹೃದಯವನ್ನು ತಲುಪುವುದಿಲ್ಲ). ಆದ್ದರಿಂದ, ನೀವು ಅವರನ್ನು ಎಲ್ಲೇ ಕಂಡರೂ ಅವರನ್ನು ಕೊಲ್ಲಿರಿ. ಏಕೆಂದರೆ, ಅವರನ್ನು ಕೊಂದವನಿಗೆ ಅವರನ್ನು ಕೊಲ್ಲುವುದರಲ್ಲಿ ಪುನರುತ್ಥಾನ ದಿನದಂದು ಪ್ರತಿಫಲವಿದೆ' ".
[صحيح] - [متفق عليه] - [صحيح البخاري - 3611]
ಸತ್ಯವಿಶ್ವಾಸಿಗಳ ಮುಖಂಡರಾದ ಅಲೀ ಇಬ್ನ್ ಅಬೀ ತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ನಾನು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹದೀಸ್ ವರದಿ ಮಾಡುವಾಗ, ನಾನು ಅಸ್ಪಷ್ಟವಾಗಿ ಮಾತನಾಡುವುದಿಲ್ಲ, ಪರೋಕ್ಷವಾಗಿ ಉಲ್ಲೇಖಿಸುವುದಿಲ್ಲ, ಅಥವಾ ಏನನ್ನೂ ಮರೆಮಾಚುವುದಿಲ್ಲ; ಬದಲಿಗೆ ನಾನು ಸ್ಪಷ್ಟವಾಗಿರುತ್ತೇನೆ. ಏಕೆಂದರೆ, ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಗ್ಗೆ ಸುಳ್ಳು ಹೇಳುವುದಕ್ಕಿಂತ ಆಕಾಶದಿಂದ ಕೆಳಗೆ ಬೀಳುವುದು ನನಗೆ ಹೆಚ್ಚು ಸುಲಭ ಮತ್ತು ಹಗುರವಾಗಿದೆ. ಆದರೆ ನಾನು ಜನರೊಂದಿಗೆ (ಯುದ್ಧದ ತಂತ್ರದ ಬಗ್ಗೆ) ಮಾತನಾಡುವಾಗ, ಯುದ್ಧವು ಒಂದು ತಂತ್ರವಾಗಿರುವುದರಿಂದ, ನಾನು ಅಸ್ಪಷ್ಟವಾಗಿ ಮಾತನಾಡಬಹುದು ಅಥವಾ ಪರೋಕ್ಷವಾಗಿ ಉಲ್ಲೇಖಿಸಬಹುದು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಅಂತ್ಯಕಾಲದಲ್ಲಿ ಚಿಕ್ಕ ವಯಸ್ಸಿನ, ಬಲಹೀನ ಬುದ್ಧಿಯ ಯುವಕರು ಬರುವರು. ಅವರು ಕುರ್‌ಆನ್‌ನಿಂದ ಉಲ್ಲೇಖಿಸಿ ಮಾತನಾಡುತ್ತಾರೆ ಮತ್ತು ಅದನ್ನು ಹೆಚ್ಚಾಗಿ ಪಠಿಸುತ್ತಾರೆ. ಬಾಣವು ಗುರಿಯಿಂದ ವೇಗವಾಗಿ ಹೊರಬೀಳುವ ಹಾಗೆ ಅವರು ಇಸ್ಲಾಮಿನಿಂದ ಹೊರಹೋಗುತ್ತಾರೆ ಮತ್ತು ಅದರ ಮಿತಿಗಳನ್ನು ಮೀರುತ್ತಾರೆ. ಅವರ ಈಮಾನ್ ಅವರ ಗಂಟಲುಗಳನ್ನು ದಾಟಿ ಹೋಗುವುದಿಲ್ಲ. ಆದ್ದರಿಂದ ನೀವು ಅವರನ್ನು ಎಲ್ಲೇ ಕಂಡರೂ ಅವರನ್ನು ಕೊಲ್ಲಿರಿ; ಏಕೆಂದರೆ ಅವರನ್ನು ಕೊಂದವನಿಗೆ ಅವರನ್ನು ಕೊಲ್ಲುವುದರಲ್ಲಿ ಪುನರುತ್ಥಾನ ದಿನದಂದು ಪ್ರತಿಫಲವಿದೆ.”