عَنْ عَبْدِ اللهِ بنِ مَسْعُودٍ رَضيَ اللهُ عنهُ قَالَ: نَامَ رَسُولُ اللهِ صَلَّى اللَّهُ عَلَيْهِ وَسَلَّمَ عَلَى حَصِيرٍ، فَقَامَ وَقَدْ أَثَّرَ فِي جَنْبِهِ، فَقُلْنَا: يَا رَسُولَ اللهِ، لَوِ اتَّخَذْنَا لَكَ وِطَاءً، فَقَالَ:
«مَا لِي وَلِلدُّنْيَا، مَا أَنَا فِي الدُّنْيَا إِلاَّ كَرَاكِبٍ اسْتَظَلَّ تَحْتَ شَجَرَةٍ ثُمَّ رَاحَ وَتَرَكَهَا».
[صحيح] - [رواه الترمذي وابن ماجه] - [سنن الترمذي: 2377]
المزيــد ...
ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಚಾಪೆಯ ಮೇಲೆ ಮಲಗಿದ್ದರು. ಅವರು ಎದ್ದಾಗ, ಅದು (ಚಾಪೆ) ಅವರ ಪಾರ್ಶ್ವದ ಮೇಲೆ ಅಚ್ಚು ಮೂಡಿಸಿತ್ತು. ಆಗ ನಾವು ಹೇಳಿದೆವು: "ಓ ಅಲ್ಲಾಹನ ಸಂದೇಶವಾಹಕರೇ, ನಾವು ನಿಮಗಾಗಿ ಒಂದು ಮೃದುವಾದ ಹಾಸಿಗೆಯನ್ನು ಸಿದ್ಧಪಡಿಸಿದ್ದರೆ ಹೇಗೆ?". ಆಗ ಅವರು ಹೇಳಿದರು:
"ನನಗೂ ಈ ಪ್ರಪಂಚಕ್ಕೂ ಏನು ಸಂಬಂಧ? ನಾನು ಈ ಪ್ರಪಂಚದಲ್ಲಿ ಒಬ್ಬ ಸವಾರನಂತೆ (ಜೀವಿಸಬೇಕಾದವನು). ಅವನು (ಸ್ವಲ್ಪ ಹೊತ್ತು) ಮರದ ನೆರಳಿನಲ್ಲಿ ವಿಶ್ರಾಂತಿ ಪಡೆದು, ನಂತರ ಅದನ್ನು ಬಿಟ್ಟು ಹೊರಟುಹೋಗುತ್ತಾನೆ".
[صحيح] - [رواه الترمذي وابن ماجه] - [سنن الترمذي - 2377]
ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ತಿಳಿಸುವುದೇನೆಂದರೆ, ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಸಸ್ಯಗಳಿಂದ ನೇಯ್ದ ಒಂದು ಚಿಕ್ಕ ಚಾಪೆಯ ಮೇಲೆ ಮಲಗಿದ್ದರು. ಅವರು ಎದ್ದಾಗ, ಆ ಚಾಪೆಯು ಅವರ ಪಾರ್ಶ್ವದ ಚರ್ಮದ ಮೇಲೆ ಅಚ್ಚು ಮೂಡಿಸಿತ್ತು. ಆಗ ನಾವು ಹೇಳಿದೆವು: “ಓ ಅಲ್ಲಾಹನ ಸಂದೇಶವಾಹಕರೇ, ನಾವು ನಿಮಗಾಗಿ ಒಂದು ಮೃದುವಾದ ಹಾಸಿಗೆಯನ್ನು ಸಿದ್ಧಪಡಿಸಿದ್ದರೆ, ಅದು ಈ ಒರಟಾದ ಚಾಪೆಯ ಮೇಲೆ ಮಲಗುವುದಕ್ಕಿಂತ ಉತ್ತಮವಾಗಿರುತ್ತಿತ್ತು.” ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಾನು ಈ ಪ್ರಪಂಚದ ಕಡೆಗೆ ಆಸಕ್ತಿ ವಹಿಸುವಷ್ಟು ನನಗೆ ಅದರೊಂದಿಗೆ ಪ್ರೀತಿ ಮತ್ತು ಒಡನಾಟವಿಲ್ಲ. ಈ ಪ್ರಪಂಚದಲ್ಲಿ ಜೀವಿಸುವ ವಿಷಯದಲ್ಲಿ ನನ್ನ ಉದಾಹರಣೆಯು, ಒಬ್ಬ ಸವಾರನಂತಿದೆ; ಅವನು ಒಂದು ಮರದ ನೆರಳಿನಲ್ಲಿ ಆಶ್ರಯ ಪಡೆದು, ನಂತರ (ವಿಶ್ರಾಂತಿಯ ನಂತರ) ಹೊರಟುಹೋಗುತ್ತಾನೆ ಮತ್ತು ಅದನ್ನು ಬಿಟ್ಟುಬಿಡುತ್ತಾನೆ.