ಹದೀಸ್‌ಗಳ ಪಟ್ಟಿ

“ಒಬ್ಬ ವ್ಯಕ್ತಿ ತನ್ನ ಸಹೋದರನನ್ನು ಪ್ರೀತಿಸಿದರೆ, ತಾನು ಅವನನ್ನು ಪ್ರೀತಿಸುತ್ತೇನೆಂದು ಅವನಿಗೆ ತಿಳಿಸಬೇಕು.”
عربي ಆಂಗ್ಲ ಉರ್ದು
“ಪರದೂಷಣೆ ಏನೆಂದು ನಿಮಗೆ ತಿಳಿದಿದೆಯೇ?” ಅನುಯಾಯಿಗಳು ಉತ್ತರಿಸಿದರು: “ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು.” ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “(ಪರದೂಷಣೆ ಎಂದರೆ) ನಿನ್ನ ಸಹೋದರನ ಬಗ್ಗೆ ಅವನಿಗೆ ಇಷ್ಟವಿಲ್ಲದ ಮಾತನ್ನು ಹೇಳುವುದು
عربي ಆಂಗ್ಲ ಉರ್ದು
ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಮೋಕ್ಷ ಎಂದರೇನು?" ಅವರು ಉತ್ತರಿಸಿದರು: "ನಿಮ್ಮ ನಾಲಿಗೆಯನ್ನು ನಿಯಂತ್ರಿಸಿ, ನಿಮ್ಮ ಮನೆ ನಿಮಗೆ ವಿಶಾಲವಾಗಿರಲಿ, ಮತ್ತು ನಿಮ್ಮ ಪಾಪಗಳಿಗಾಗಿ ಅತ್ತಿರಿ
عربي ಆಂಗ್ಲ ಉರ್ದು
ಪುನರುತ್ಥಾನ ದಿನದಂದು ಸತ್ಯವಿಶ್ವಾಸಿಯ ತಕ್ಕಡಿಯಲ್ಲಿ ಉತ್ತಮ ಗುಣಕ್ಕಿಂತಲೂ ಹೆಚ್ಚು ಭಾರವಿರುವ ಯಾವುದೇ ವಸ್ತುವಿಲ್ಲ. ಅಶ್ಲೀಲ ಮತ್ತು ಅಸಭ್ಯವಾಗಿ ಮಾತನಾಡುವವರನ್ನು ಅಲ್ಲಾಹು ದ್ವೇಷಿಸುತ್ತಾನೆ
عربي ಆಂಗ್ಲ ಉರ್ದು
ಯಾರಾದರೂ ಲಾತ್ ಮತ್ತು ಉಝ್ಝನ ಮೇಲಾಣೆ ಎಂದು ಹೇಳುತ್ತಾ ಆಣೆ ಮಾಡಿದರೆ, ಅವನು ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳಬೇಕು. ಯಾರಾದರೂ ತನ್ನ ಸಂಗಡಿಗನೊಡನೆ ಬಾ ಜೂಜಾಡೋಣ ಎಂದು ಹೇಳಿದರೆ, ಅವನು ದಾನ-ಧರ್ಮ ಮಾಡಬೇಕು
عربي ಆಂಗ್ಲ ಉರ್ದು
“ಯಾರ ನಾಲಗೆ ಮತ್ತು ಕೈಯಿಂದ ಇತರ ಮುಸಲ್ಮಾನರು ಸುರಕ್ಷಿತರೋ ಅವನೇ ಮುಸ್ಲಿಮ್. ಯಾರು ಅಲ್ಲಾಹು ನಿಷೇಧಿಸಿದ್ದನ್ನು ತೊರೆಯುತ್ತಾನೋ ಅವನೇ ಮುಹಾಜಿರ್
عربي ಆಂಗ್ಲ ಉರ್ದು
ನಾಲ್ಕು ಲಕ್ಷಣಗಳು—ಇವು ಯಾರಲ್ಲಿವೆಯೋ ಅವನು ಶುದ್ಧ ಕಪಟವಿಶ್ವಾಸಿಯಾಗಿದ್ದಾನೆ. ಇವುಗಳಲ್ಲೊಂದು ಅಂಶ ಯಾರಲ್ಲಿದೆಯೋ ಅವನು ಅದನ್ನು ತೊರೆಯುವ ತನಕ ಕಾಪಟ್ಯದ ಒಂದಂಶವನ್ನು ಹೊಂದಿರುತ್ತಾನೆ. ಮಾತನಾಡಿದರೆ ಸುಳ್ಳು ಹೇಳುವುದು, ಕರಾರು ಮಾಡಿದರೆ ದ್ರೋಹವೆಸಗುವುದು, ಮಾತು ಕೊಟ್ಟರೆ ಉಲ್ಲಂಘಿಸುವುದು ಮತ್ತು ತರ್ಕಿಸಿದರೆ ಕೆಟ್ಟದಾಗಿ ವರ್ತಿಸುವುದು
عربي ಆಂಗ್ಲ ಉರ್ದು
ಸತ್ಯವಿಶ್ವಾಸಿಯು ದೂಷಿಸುವವನಲ್ಲ, ಶಪಿಸುವವನಲ್ಲ, ಅಶ್ಲೀಲವಾಗಿ ಮಾತನಾಡುವವನಲ್ಲ ಅಥವಾ ಅವಾಚ್ಯ ಶಬ್ದಗಳನ್ನು ಬಳಸುವವನಲ್ಲ
عربي ಆಂಗ್ಲ ಉರ್ದು
ಆಣೆ ಮಾಡುವುದು ಸರಕುಗಳನ್ನು ಮಾರಾಟ ಮಾಡಲು ಉಪಯುಕ್ತವಾಗಿದೆ. ಆದರೆ, ಅದು ಲಾಭವನ್ನು ನಾಶಪಡಿಸುತ್ತದೆ
عربي ಆಂಗ್ಲ ಉರ್ದು