ಉಪವರ್ಗಗಳು

ಹದೀಸ್‌ಗಳ ಪಟ್ಟಿ

ಯಾರಾದರೂ ಲಾತ್ ಮತ್ತು ಉಝ್ಝನ ಮೇಲಾಣೆ ಎಂದು ಹೇಳುತ್ತಾ ಆಣೆ ಮಾಡಿದರೆ, ಅವನು ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳಬೇಕು. ಯಾರಾದರೂ ತನ್ನ ಸಂಗಡಿಗನೊಡನೆ ಬಾ ಜೂಜಾಡೋಣ ಎಂದು ಹೇಳಿದರೆ, ಅವನು ದಾನ-ಧರ್ಮ ಮಾಡಬೇಕು
عربي ಆಂಗ್ಲ ಉರ್ದು
ನಾಲ್ಕು ಲಕ್ಷಣಗಳು—ಇವು ಯಾರಲ್ಲಿವೆಯೋ ಅವನು ಶುದ್ಧ ಕಪಟವಿಶ್ವಾಸಿಯಾಗಿದ್ದಾನೆ. ಇವುಗಳಲ್ಲೊಂದು ಅಂಶ ಯಾರಲ್ಲಿದೆಯೋ ಅವನು ಅದನ್ನು ತೊರೆಯುವ ತನಕ ಕಾಪಟ್ಯದ ಒಂದಂಶವನ್ನು ಹೊಂದಿರುತ್ತಾನೆ. ಮಾತನಾಡಿದರೆ ಸುಳ್ಳು ಹೇಳುವುದು, ಕರಾರು ಮಾಡಿದರೆ ದ್ರೋಹವೆಸಗುವುದು, ಮಾತು ಕೊಟ್ಟರೆ ಉಲ್ಲಂಘಿಸುವುದು ಮತ್ತು ತರ್ಕಿಸಿದರೆ ಕೆಟ್ಟದಾಗಿ ವರ್ತಿಸುವುದು
عربي ಆಂಗ್ಲ ಉರ್ದು