عَنْ عَبْدِ اللَّهِ بْنِ يَزِيدَ الخَطْمِيِّ قَالَ: حَدَّثَنِي البَرَاءُ وَهُوَ غَيْرُ كَذُوبٍ، قَالَ:
كَانَ رَسُولُ اللَّهِ صَلَّى اللهُ عَلَيْهِ وَسَلَّمَ إِذَا قَالَ: سَمِعَ اللَّهُ لِمَنْ حَمِدَهُ، لَمْ يَحْنِ أَحَدٌ مِنَّا ظَهْرَهُ حَتَّى يَقَعَ النَّبِيُّ صَلَّى اللهُ عَلَيْهِ وَسَلَّمَ سَاجِدًا، ثُمَّ نَقَعُ سُجُودًا بَعْدَهُ.
[صحيح] - [متفق عليه] - [صحيح البخاري: 690]
المزيــد ...
ಅಬ್ದುಲ್ಲಾ ಇಬ್ನ್ ಯಝೀದ್ ಅಲ್-ಖತ್ಮೀ ಅವರಿಂದ ವರದಿ: ಬರಾ ಇಬ್ನ್ ಆಝಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನನಗೆ ತಿಳಿಸಿದರು — ಅವರು ಎಂದೂ ಸುಳ್ಳು ಹೇಳುವವರಲ್ಲ — ಅವರು ಹೇಳಿದರು:
"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ಸಮಿಅಲ್ಲಾಹು ಲಿಮನ್ ಹಮಿದಹ್' (ತನ್ನನ್ನು ಸ್ತುತಿಸಿದವನ ಮಾತನ್ನು ಅಲ್ಲಾಹು ಕೇಳಲಿ) ಎಂದು ಹೇಳಿದಾಗ, ಅವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾಷ್ಟಾಂಗ (ಸಜ್ದ) ಮಾಡುವವರೆಗೆ ನಮ್ಮಲ್ಲಿ ಯಾರೂ ತಮ್ಮ ಬೆನ್ನನ್ನು ಬಾಗಿಸುತ್ತಿರಲಿಲ್ಲ. ನಂತರ ನಾವು ಅವರ ಹಿಂದೆ ಸಾಷ್ಟಾಂಗ ಮಾಡುತ್ತಿದ್ದೆವು".
[صحيح] - [متفق عليه] - [صحيح البخاري - 690]
ಅಲ್-ಬರಾ ಇಬ್ನ್ ಆಝಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) — ಅವರು ಸತ್ಯವಂತರು — ತಿಳಿಸುತ್ತಾರೆ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರುಕೂವಿನಿಂದ ತಮ್ಮ ತಲೆಯನ್ನು ಎತ್ತಿ "ಸಮಿಅಲ್ಲಾಹು ಲಿಮನ್ ಹಮಿದಹ್" ಎಂದು ಹೇಳಿದಾಗ, ಅವರ ಹಿಂದಿರುವವರು ನಿಂತುಕೊಂಡೇ ಇರುತ್ತಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಹಣೆಯನ್ನು ನೆಲದ ಮೇಲೆ ಇಡುವವರೆಗೆ (ಹಿಂದೆ ನಿಂತಿರುವವರಲ್ಲಿ) ಯಾರೂ ಸಾಷ್ಟಾಂಗ ಮಾಡಲು ತಮ್ಮ ಬೆನ್ನನ್ನು ಬಾಗಿಸುತ್ತಿರಲಿಲ್ಲ. ನಂತರ ಅವರು ಅವರ (ಪ್ರವಾದಿಯವರ) ಹಿಂದೆ ಸಾಷ್ಟಾಂಗ ಮಾಡುತ್ತಿದ್ದರು.