عَنْ أَبَانَ بْنِ عُثْمَانَ قَالَ: سَمِعْتُ عُثْمَانَ ابْنِ عَفَّانَ رضي الله عنه يَقُولُ: سَمِعْتُ رَسُولَ اللَّهِ صَلَّى اللهُ عَلَيْهِ وَسَلَّمَ يَقُولُ:
«مَنْ قَالَ بِسْمِ اللَّهِ الَّذِي لَا يَضُرُّ مَعَ اسْمِهِ شَيْءٌ، فِي الْأَرْضِ، وَلَا فِي السَّمَاءِ، وَهُوَ السَّمِيعُ الْعَلِيمُ، ثَلَاثَ مَرَّاتٍ، لَمْ تُصِبْهُ فَجْأَةُ بَلَاءٍ، حَتَّى يُصْبِحَ، وَمَنْ قَالَهَا حِينَ يُصْبِحُ ثَلَاثُ مَرَّاتٍ، لَمْ تُصِبْهُ فَجْأَةُ بَلَاءٍ حَتَّى يُمْسِيَ»، قَالَ: فَأَصَابَ أَبَانَ بْنَ عُثْمَانَ الْفَالِجُ، فَجَعَلَ الرَّجُلُ الَّذِي سَمِعَ مِنْهُ الْحَدِيثَ يَنْظُرُ إِلَيْهِ، فَقَالَ لَهُ: مَا لَكَ تَنْظُرُ إِلَيَّ؟ فَوَاللَّهِ مَا كَذَبْتُ عَلَى عُثْمَانَ، وَلَا كَذَبَ عُثْمَانُ عَلَى النَّبِيِّ صَلَّى اللهُ عَلَيْهِ وَسَلَّمَ، وَلَكِنَّ الْيَوْمَ الَّذِي أَصَابَنِي فِيهِ مَا أَصَابَنِي غَضِبْتُ فَنَسِيتُ أَنْ أَقُولَهَا.
[صحيح] - [رواه أبو داود والترمذي وابن ماجه والنسائي في الكبرى وأحمد] - [سنن أبي داود: 5088]
المزيــد ...
ಅಬಾನ್ ಬಿನ್ ಉಸ್ಮಾನ್ ರಿಂದ ವರದಿ. ಅವರು ಹೇಳಿದರು: ಉಸ್ಮಾನ್ ಬಿನ್ ಅಫ್ಫಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: ಅವರು ಹೇಳುತ್ತಾರೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಯಾರು ಮೂರು ಬಾರಿ, 'ಯಾರ ಹೆಸರಿನೊಂದಿಗೆ ಭೂಮಿಯಲ್ಲಾಗಲಿ, ಆಕಾಶದಲ್ಲಾಗಲಿ ಯಾವುದೇ ವಸ್ತು ಹಾನಿ ಮಾಡುವುದಿಲ್ಲವೋ ಆ ಅಲ್ಲಾಹನ ಹೆಸರಿನಲ್ಲಿ. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ' ಎಂದು ಹೇಳುತ್ತಾನೋ, ಅವನಿಗೆ ಬೆಳಗ್ಗಿನ ತನಕ ಆಕಸ್ಮಿಕ ವಿಪತ್ತು ಬಾಧಿಸುವುದಿಲ್ಲ. ಯಾರು ಇದನ್ನು ಬೆಳಗ್ಗೆ ಹೇಳುತ್ತಾನೋ, ಅವನಿಗೆ ಸಂಜೆಯ ತನಕ ಆಕಸ್ಮಿಕ ವಿಪತ್ತು ಬಾಧಿಸುವುದಿಲ್ಲ." ಅಬಾನ್ ಬಿನ್ ಉಸ್ಮಾನ್ ರಿಗೆ ಪಕ್ಷಪಾತ ಸಂಭವಿಸಿತ್ತು. ಅವರಿಂದ ಈ ಹದೀಸನ್ನು ಕೇಳಿದ ವ್ಯಕ್ತಿ ಅವರ ಕಡೆಗೆ ನೋಡತೊಡಗಿದನು. ಅವರು ಕೇಳಿದರು: "ನೀನೇಕೆ ನನ್ನನ್ನು ನೋಡುತ್ತಿರುವೆ? ಅಲ್ಲಾಹನಾಣೆ! ನಾನು ಉಸ್ಮಾನರ ಮೇಲೆ ಸುಳ್ಳು ಹೇಳಿಲ್ಲ. ಉಸ್ಮಾನ್ ರವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೂ ಸುಳ್ಳು ಹೇಳಿಲ್ಲ. ಆದರೆ ನಿಜಸಂಗತಿ ಏನೆಂದರೆ ನನಗೆ ಪಾರ್ಶ್ವವಾಯು ಬಾಧಿಸಿದ ದಿನ ನಾನು ಕೋಪದಲ್ಲಿದ್ದೆ ಮತ್ತು ಈ ಪ್ರಾರ್ಥನೆಯನ್ನು ಪಠಿಸಲು ಮರೆತಿದ್ದೆ."
[صحيح] - - [سنن أبي داود - 5088]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಯಾರು ಪ್ರತಿದಿನ ಬೆಳಗ್ಗೆ ಮುಂಜಾನೆಯ ಉದಯದ ನಂತರ ಮತ್ತು ಪ್ರತಿದಿನ ಸಂಜೆ ಸೂರ್ಯಾಸ್ತದ ನಂತರ ಹೀಗೆ ಹೇಳುತ್ತಾರೋ: "ಅಲ್ಲಾಹನ ಹೆಸರಿನಲ್ಲಿ" ಅಂದರೆ ನಾನು ಅಲ್ಲಾಹನ ಹೆಸರಿನಲ್ಲಿ ಸಹಾಯ ಯಾಚಿಸುತ್ತೇನೆ ಮತ್ತು ಎಲ್ಲಾ ತೊಂದರೆಗಳಿಗೆ ರಕ್ಷಣೆ ಬೇಡುತ್ತೇನೆ. "ಯಾರ ಹೆಸರಿನೊಂದಿಗೆ ಯಾವುದೇ ವಸ್ತು ಹಾನಿ ಮಾಡುವುದಿಲ್ಲವೋ ಆ ಹೆಸರಿನಿಂದ" ಅಂದರೆ ಆ ಹೆಸರನ್ನು ಉಚ್ಛರಿಸುವುದರಿಂದ. "ಯಾವುದೇ ವಸ್ತು" ಎಂದರೆ ಆ ವಸ್ತು ಎಷ್ಟೇ ದೊಡ್ಡದಾಗಿದ್ದರೂ ಸಹ. "ಭೂಮಿಯಲ್ಲಿ" ಅಂದರೆ ಭೂಮಿಯಿಂದ ಹೊರಬರುವ ವಿಪತ್ತುಗಳು. "ಆಕಾಶದಲ್ಲಿ" ಅಂದರೆ ಆಕಾಶದಿಂದ ಇಳಿಯುವ ವಿಪತ್ತುಗಳು. "ಅವನು ಕೇಳುವವನು" ಅಂದರೆ ನಮ್ಮ ಮಾತುಗಳನ್ನು ಕೇಳುವವನು. "ಮತ್ತು ತಿಳಿದವನು" ಅಂದರೆ ನಮ್ಮ ಅವಸ್ಥೆಗಳನ್ನು ತಿಳಿದವನು.
. ಇದನ್ನು ಬೆಳಗ್ಗೆ ಹೇಳಿದವನಿಗೆ ಸಂಜೆಯ ತನಕ ಯಾವುದೇ ಆಕಸ್ಮಿಕ ವಿಪತ್ತು ಬಾಧಿಸುವುದಿಲ್ಲ. ಇದನ್ನು ಸಂಜೆ ಹೇಳಿದವನಿಗೆ ಬೆಳಗ್ಗಿನ ತನಕ ಯಾವುದೇ ಆಕಸ್ಮಿಕ ವಿಪತ್ತು ಬಾಧಿಸುವುದಿಲ್ಲ.
ಈ ಹದೀಸನ್ನು ವರದಿ ಮಾಡಿದ ಅಬಾನ್ ಬಿನ್ ಉಸ್ಮಾನ್ ರಿಗೆ ಪಾರ್ಶ್ವವಾಯು ಬಾಧಿಸಿತ್ತು. ಪಾರ್ಶ್ವವಾಯು ಎಂದರೆ ದೇಹದ ಒಂದು ಭಾಗವು ನಿಷ್ಕ್ರಿಯವಾಗುವುದು. ಆಗ ಅವರಿಂದ ಈ ಹದೀಸನ್ನು ಕೇಳಿದ ವ್ಯಕ್ತಿ ಅವರ ಕಡೆಗೆ ಆಶ್ಚರ್ಯದಿಂದ ನೋಡತೊಡಗಿದನು. ಅವರು ಆ ವ್ಯಕ್ತಿಯೊಡನೆ ಕೇಳಿದರು: "ನೀನೇಕೆ ನನ್ನನ್ನು ನೋಡುತ್ತಿರುವೆ? ಅಲ್ಲಾಹನಾಣೆ! ನಾನು ಉಸ್ಮಾನರ ಮೇಲೆ ಸುಳ್ಳು ಹೇಳಿಲ್ಲ. ಉಸ್ಮಾನ್ ರವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೂ ಸುಳ್ಳು ಹೇಳಿಲ್ಲ. ಆದರೆ ನಿಜಸಂಗತಿ ಏನೆಂದರೆ ನನಗೆ ಪಾರ್ಶ್ವವಾಯು ಬಾಧಿಸಿದ ದಿನ ನಾನು ಈ ಪ್ರಾರ್ಥನೆಯನ್ನು ಪಠಿಸದಂತೆ ಅಲ್ಲಾಹು ನಿರ್ಣಯಿಸಿದ್ದನು. ಅಂದು ನಾನು ಕೋಪದಿಂದ ಈ ಪ್ರಾರ್ಥನೆಯನ್ನು ಪಠಿಸಲು ಮರೆತುಬಿಟ್ಟಿದ್ದೆ."