عن جَابِرِ بْنِ عَبْدِ اللَّهِ رَضِيَ اللَّهُ عَنْهُمَا، قَالَ:
كَانَ رَسُولُ اللَّهِ صَلَّى اللَّهُ عَلَيْهِ وَسَلَّمَ يُعَلِّمُنَا الِاسْتِخَارَةَ فِي الْأُمُورِ كَمَا يُعَلِّمُنَا السُّورَةَ مِنَ الْقُرْآنِ، يَقُولُ: «إِذَا هَمَّ أَحَدُكُمْ بِالْأَمْرِ فَلْيَرْكَعْ رَكْعَتَيْنِ مِنْ غَيْرِ الْفَرِيضَةِ، ثُمَّ لِيَقُلِ: اللَّهُمَّ إِنِّي أَسْتَخِيرُكَ بِعِلْمِكَ وَأَسْتَقْدِرُكَ بِقُدْرَتِكَ، وَأَسْأَلُكَ مِنْ فَضْلِكَ الْعَظِيمِ، فَإِنَّكَ تَقْدِرُ وَلَا أَقْدِرُ، وَتَعْلَمُ وَلَا أَعْلَمُ، وَأَنْتَ عَلَّامُ الْغُيُوبِ، اللَّهُمَّ إِنْ كُنْتَ تَعْلَمُ أَنَّ هَذَا الْأَمْرَ خَيْرٌ لِي فِي دِينِي، وَمَعَاشِي، وَعَاقِبَةِ أَمْرِي» أَوْ قَالَ: «عَاجِلِ أَمْرِي وَآجِلِهِ، فَاقْدُرْهُ لِي وَيَسِّرْهُ لِي ثُمَّ بَارِكْ لِي فِيهِ، وَإِنْ كُنْتَ تَعْلَمُ أَنَّ هَذَا الْأَمْرَ شَرٌّ لِي فِي دِينِي وَمَعَاشِي وَعَاقِبَةِ أَمْرِي» أَوْ قَالَ: «فِي عَاجِلِ أَمْرِي وَآجِلِهِ، فَاصْرِفْهُ عَنِّي وَاصْرِفْنِي عَنْهُ، وَاقْدُرْ لِي الْخَيْرَ حَيْثُ كَانَ، ثُمَّ أَرْضِنِي» قَالَ: «وَيُسَمِّي حَاجَتَه».
[صحيح] - [رواه البخاري] - [صحيح البخاري: 1162]
المزيــد ...
ಜಾಬಿರ್ ಬಿನ್ ಅಬ್ದಿಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಕುರ್‌ಆನ್‌ನ ಒಂದು ಸೂರಃವನ್ನು (ಅಧ್ಯಾಯವನ್ನು) ಕಲಿಸುವಂತೆ ಪ್ರತಿಯೊಂದು ವಿಷಯದಲ್ಲೂ ಇಸ್ತಿಖಾರ (ಮಾರ್ಗದರ್ಶನಕ್ಕಾಗಿ ಪ್ರಾರ್ಥನೆ) ಮಾಡುವುದನ್ನು ಕಲಿಸುತ್ತಿದ್ದರು. ಅವರು ಹೇಳುತ್ತಿದ್ದರು: 'ನಿಮ್ಮಲ್ಲಿ ಯಾರಿಗಾದರೂ ಒಂದು ವಿಷಯವನ್ನು ಮಾಡಲು ಉದ್ದೇಶವಿದ್ದರೆ, ಅವನು ಫರ್ದ್ (ಕಡ್ಡಾಯ) ಅಲ್ಲದ ಎರಡು ರಕ್‌ಅತ್ ನಮಾಝ್ ಮಾಡಲಿ. ನಂತರ ಹೀಗೆ ಹೇಳಲಿ: 'ಅಲ್ಲಾಹುಮ್ಮ ಇನ್ನೀ ಅಸ್ತಖೀರುಕ ಬಿ ಇಲ್ಮಿಕ, ವ ಅಸ್ತಕ್ದಿರುಕ ಬಿ ಕುದ್ರತಿಕ, ವ ಅಸ್ಅಲುಕ ಮಿನ್ ಫದ್ಲಿಕಲ್ ಅಝೀಮ್, ಫ ಇನ್ನಕ ತಕ್ದಿರು ವಲಾ ಅಕ್ದಿರು, ವ ತಅ್‌ಲಮು ವಲಾ ಅಅ್‌ಲಮು, ವ ಅಂತ ಅಲ್ಲಾಮುಲ್ ಗುಯೂಬ್. ಅಲ್ಲಾಹುಮ್ಮ ಇನ್ ಕುಂತ ತಅ್‌ಲಮು ಅನ್ನ ಹಾಧಲ್ ಅಮ್ರ (ಇಲ್ಲಿ ತನ್ನ ಅಗತ್ಯವನ್ನು ಹೇಳಿಕೊಳ್ಳಲಿ) ಖೈರುನ್ ಲೀ ಫೀ ದೀನೀ, ವ ಮಆಶೀ, ವ ಆಖಿಬತಿ ಅಮ್‌ರೀ (ಅಥವಾ ಅವರು ಹೀಗೆ ಹೇಳಿದರು: ಆಜಿಲಿ ಅಮ್‌ರೀ ವ ಆಜಿಲಿಹಿ), ಫಕ್ದುರ್‌ಹು ಲೀ ವ ಯಸ್ಸಿರ್‌ಹು ಲೀ ಸುಮ್ಮ ಬಾರಿಕ್ ಲೀ ಫೀಹಿ. ವ ಇನ್ ಕುಂತ ತಅ್‌ಲಮು ಅನ್ನ ಹಾಧಲ್ ಅಮ್ರ ಶರ್ರುನ್ ಲೀ ಫೀ ದೀನೀ ವ ಮಆಶೀ ವ ಆಖಿಬತಿ ಅಮ್‌ರೀ (ಅಥವಾ ಅವರು ಹೀಗೆ ಹೇಳಿದರು: ಫೀ ಆಜಿಲಿ ಅಮ್‌ರೀ ವ ಆಜಿಲಿಹಿ), ಫಸ್‌ರಿಫ್‌ಹು ಅನ್ನೀ ವಸ್‌ರಿಫ್‌ನೀ ಅನ್‌ಹು, ವಕ್ದುರ್ ಲಿಯಲ್ ಖೈರ ಹೈಸು ಕಾನ, ಸುಮ್ಮ ಅರ್ದಿನೀ ಬಿಹಿ.' (ಅರ್ಥ: 'ಓ ಅಲ್ಲಾಹ್, ನಿನ್ನ ಜ್ಞಾನದ ಮೂಲಕ ನಾನು ನಿನ್ನಿಂದ ಮಾರ್ಗದರ್ಶನವನ್ನು ಕೋರುತ್ತೇನೆ, ನಿನ್ನ ಸಾಮರ್ಥ್ಯದ ಮೂಲಕ ನಾನು ನಿನ್ನಿಂದ ಶಕ್ತಿಯನ್ನು ಕೋರುತ್ತೇನೆ ಮತ್ತು ನಿನ್ನ ಮಹಾ ಅನುಗ್ರಹವನ್ನು ಬೇಡುತ್ತೇನೆ. ನಿಸ್ಸಂದೇಹವಾಗಿ, ನೀನು ಸಾಮರ್ಥ್ಯವುಳ್ಳವನು ಮತ್ತು ನಾನು ಸಾಮರ್ಥ್ಯಹೀನನು. ನೀನು ತಿಳಿದಿರುವವನು ಮತ್ತು ನಾನು ತಿಳಿದಿಲ್ಲದವನು, ಮತ್ತು ನೀನು ಎಲ್ಲಾ ಅಗೋಚರ ವಿಷಯಗಳನ್ನು ಬಲ್ಲವನು. ಓ ಅಲ್ಲಾಹ್, ಈ ವಿಷಯವು (ಇಲ್ಲಿ ತನ್ನ ಅಗತ್ಯವನ್ನು ಹೇಳಿಕೊಳ್ಳಲಿ) ನನ್ನ ಧರ್ಮಕ್ಕೆ, ನನ್ನ ಜೀವನೋಪಾಯಕ್ಕೆ ಮತ್ತು ನನ್ನ ಅಂತಿಮ ಫಲಿತಾಂಶಕ್ಕೆ (ಅಥವಾ ಅವರು ಹೀಗೆ ಹೇಳಿದರು: ನನ್ನ ಪ್ರಸ್ತುತ ಮತ್ತು ಭವಿಷ್ಯದ ವಿಷಯಗಳಿಗೆ) ಒಳ್ಳೆಯದೆಂದು ನಿನಗೆ ತಿಳಿದಿದ್ದರೆ, ಅದನ್ನು ನನಗಾಗಿ ನಿರ್ಣಯಿಸು, ಅದನ್ನು ನನಗೆ ಸುಲಭಗೊಳಿಸು ಮತ್ತು ನಂತರ ಅದರಲ್ಲಿ ನನಗೆ ಸಮೃದ್ಧಿಯನ್ನು ನೀಡು. ಮತ್ತು ಈ ವಿಷಯವು ನನ್ನ ಧರ್ಮಕ್ಕೆ, ನನ್ನ ಜೀವನೋಪಾಯಕ್ಕೆ ಮತ್ತು ನನ್ನ ಅಂತಿಮ ಫಲಿತಾಂಶಕ್ಕೆ (ಅಥವಾ ಅವರು ಹೀಗೆ ಹೇಳಿದರು: ನನ್ನ ಪ್ರಸ್ತುತ ಮತ್ತು ಭವಿಷ್ಯದ ವಿಷಯಗಳಿಗೆ) ಕೆಟ್ಟದ್ದೆಂದು ನಿನಗೆ ತಿಳಿದಿದ್ದರೆ, ಅದನ್ನು ನನ್ನಿಂದ ದೂರ ಮಾಡು ಮತ್ತು ನನ್ನನ್ನು ಅದರಿಂದ ದೂರ ಮಾಡು. ಒಳಿತು ಎಲ್ಲೇ ಇದ್ದರೂ ಅದನ್ನು ನನಗಾಗಿ ನಿರ್ಣಯಿಸು, ಮತ್ತು ನಂತರ ಅದರಿಂದ ನನ್ನನ್ನು ತೃಪ್ತಿಪಡಿಸು.')" ಅವರು (ಜಾಬಿರ್) ಹೇಳಿದರು: "ಮತ್ತು ಅವನು ತನ್ನ ಅಗತ್ಯವನ್ನು ಹೆಸರಿಸಬೇಕು."
[صحيح] - [رواه البخاري] - [صحيح البخاري - 1162]
ಒಬ್ಬ ಮುಸ್ಲಿಂ ವ್ಯಕ್ತಿಯು ಯಾವುದೇ ಕೆಲಸವನ್ನು ಮಾಡಲು ಬಯಸಿದಾಗ ಮತ್ತು ಅದರ ಸರಿಯಾದ ಮಾರ್ಗ ಯಾವುದು ಎಂದು ಅವನಿಗೆ ತಿಳಿದಿಲ್ಲದಿದ್ದಾಗ, ಅವನಿಗೆ ಇಸ್ತಿಖಾರಾ ನಮಾಝ್ ಮಾಡುವುದನ್ನು ನಿಯಮಗೊಳಿಸಲಾಗಿದೆ. ಪ್ರವಾದಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರು ತಮ್ಮ ಸಹಚರರಿಗೆ (ಅಲ್ಲಾಹನು ಅವರ ಬಗ್ಗೆ ಸಂಪ್ರೀತನಾಗಲಿ) ಕುರ್‌ಆನ್‌ನ ಸೂರವನ್ನು ಕಲಿಸುವಂತೆ ಈ ನಮಾಝನ್ನು ಕಲಿಸುತ್ತಿದ್ದರು. ಮುಸ್ಲಿಮನು ಫರ್ದ್ (ಕಡ್ಡಾಯ) ಅಲ್ಲದ ಎರಡು ರಕ್‌ಅತ್ ನಮಾಝ್ ನಿರ್ವಹಿಸಬೇಕು, ನಂತರ ಅಲ್ಲಾಹನೊಂದಿಗೆ ಹೀಗೆ ಪ್ರಾರ್ಥಿಸಬೇಕು: ಅಲ್ಲಾಹುಮ್ಮ ಇನ್ನೀ ಅಸ್ತಖೀರುಕ: ಎರಡು ವಿಷಯಗಳಲ್ಲಿ ಉತ್ತಮವಾದದ್ದನ್ನು ಆರಿಸಲು ನಿನ್ನಿಂದ ಯಶಸ್ಸನ್ನು ಬೇಡುತ್ತೇನೆ. ಬಿ ಇಲ್ಮಿಕ: ಎಲ್ಲವನ್ನೂ ಆವರಿಸಿರುವ ನಿನ್ನ ವಿಶಾಲವಾದ ಜ್ಞಾನದಿಂದ ಕೇಳುತ್ತೇನೆ. ವ ಅಸ್ತಕ್ದಿರುಕ: ನಿನ್ನ ಸಹಾಯವಿಲ್ಲದೆ ನನಗೆ ಯಾವುದೇ ಶಕ್ತಿ ಅಥವಾ ಸಾಮರ್ಥ್ಯವಿಲ್ಲದಿರುವುದರಿಂದ, ನನ್ನನ್ನು ಸಮರ್ಥನನ್ನಾಗಿ ಮಾಡೆಂದು ನಿನ್ನನ್ನು ಕೇಳುತ್ತೇನೆ. ಬಿ ಕುದ್ರತಿಕ: ನಿನ್ನ ಸರ್ವಶಕ್ತ ಸಾಮರ್ಥ್ಯದಿಂದ (ಕೇಳುತ್ತೇನೆ), ಏಕೆಂದರೆ ನಿನಗೆ ಯಾವುದೂ ಅಸಾಧ್ಯವಲ್ಲ. ವ ಅಸ್ಅಲುಕ ಮಿನ್ ಫದ್ಲಿಕಲ್ ಅಝೀಮ್: ನಿನ್ನ ವಿಶಾಲವಾದ ಅನುಗ್ರಹ ಮತ್ತು ಕೃಪೆಯನ್ನು ಮುಂದಿಟ್ಟು ಕೇಳುತ್ತೇನೆ; ಏಕೆಂದರೆ ನಿನ್ನ ಕೊಡುಗೆಯು ನಿನ್ನ ಕಡೆಯ ಔದಾರ್ಯವಾಗಿದೆ, ಮತ್ತು ನಿನ್ನ ಅನುಗ್ರಹವನ್ನು ಪಡೆಯಲು ಯಾರಿಗೂ ನಿನ್ನ ಮೇಲೆ ಯಾವುದೇ ಹಕ್ಕಿಲ್ಲ. ಫ ಇನ್ನಕ ತಕ್ದಿರು: ನಿಸ್ಸಂದೇಹವಾಗಿ, ನೀನು ಎಲ್ಲದರಲ್ಲೂ ಸಾಮರ್ಥ್ಯವುಳ್ಳವನು. ವಲಾ ಅಕ್ದಿರು: ಮತ್ತು ನಾನು ದುರ್ಬಲನು, ಅಸಮರ್ಥನು, ನಿನ್ನ ಸಹಾಯವಿಲ್ಲದೆ ನಾನು ಏನನ್ನೂ ಮಾಡಲು ಸಾಧ್ಯವಿಲ್ಲ. ವ ತಅ್‌ಲಮು: ಮತ್ತು ನೀನು ಬಾಹ್ಯ ಮತ್ತು ಆಂತರಿಕ, ಒಳಿತು ಮತ್ತು ಕೆಡುಕನ್ನು ಒಳಗೊಂಡಿರುವ ನಿನ್ನ ಸಮಗ್ರ ಜ್ಞಾನದಿಂದ ತಿಳಿದಿರುವೆ. ವಲಾ ಅಅ್‌ಲಮು: ನಿನ್ನ ಯಶಸ್ಸು ಮತ್ತು ಮಾರ್ಗದರ್ಶನವಿಲ್ಲದೆ ನನಗೆ ಏನೂ ತಿಳಿದಿಲ್ಲ. ವ ಅಂತ ಅಲ್ಲಾಮುಲ್ ಗುಯೂಬ್: ನೀನು ಸಂಪೂರ್ಣ ಜ್ಞಾನ ಮತ್ತು ಸರ್ವಶಕ್ತ ಸಾಮರ್ಥ್ಯವನ್ನು ಹೊಂದಿರುವವನು. ನೀನು ನಿರ್ಣಯಿಸಿದವನಿಗೆ ಮತ್ತು ಸಾಮರ್ಥ್ಯ ನೀಡಿದವನಿಗೆ ಹೊರತು ಬೇರೆ ಯಾರಿಗೂ ಅದು ಲಭ್ಯವಿಲ್ಲ. ನಂತರ ಮುಸ್ಲಿಂ ವ್ಯಕ್ತಿಯು ತನ್ನ ರಬ್ (ಪರಿಪಾಲಕ) ನೊಂದಿಗೆ ಪ್ರಾರ್ಥಿಸಬೇಕು ಮತ್ತು ತನ್ನ ಅಗತ್ಯವನ್ನು ಹೇಳಿಕೊಳ್ಳಬೇಕು: ಅಲ್ಲಾಹುಮ್ಮ ಇನ್ ಕುಂತ ತಅ್‌ಲಮು: ಓ ಅಲ್ಲಾಹ್, ನಾನು ನನ್ನ ವಿಷಯವನ್ನು ನಿನಗೆ ಒಪ್ಪಿಸಿದ್ದೇನೆ, ನಿನ್ನ ಜ್ಞಾನದಲ್ಲಿ ಈ ವಿಷಯವು - ವಯುಸಮ್ಮೀ ಹಾಜತಹು - ಉದಾಹರಣೆಗೆ ಈ ಮನೆಯನ್ನು ಖರೀದಿಸುವುದು, ಅಥವಾ ಈ ಕಾರನ್ನು ಖರೀದಿಸುವುದು, ಅಥವಾ ಈ ಮಹಿಳೆಯನ್ನು ವಿವಾಹವಾಗುವುದು ಇತ್ಯಾದಿ... ನಿನ್ನ ಜ್ಞಾನದಲ್ಲಿ ಈ ವಿಷಯವು ನನಗೆ - ಖೈರುನ್ ಲೀ ಫೀ ದೀನೀ - ನನ್ನ ಎಲ್ಲಾ ವಿಷಯಗಳನ್ನು ಸಂರಕ್ಷಿಸುವ ನನ್ನ ಧರ್ಮಕ್ಕೆ, - ವ ಮಆಶೀ - ನನ್ನ ಜೀವನೋಪಾಯಕ್ಕೆ, - ವ ಆಖಿಬತಿ ಅಮ್‌ರೀ - ನನ್ನ ವಿಷಯಗಳ ಅಂತಿಮ ಫಲಿತಾಂಶಕ್ಕೆ, ಅಥವಾ ಅವರು ಹೀಗೆ ಹೇಳಿದರು: ಫೀ ಆಜಿಲಿ ಅಮ್‌ರೀ ವ ಆಜಿಲಿಹಿ - ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಒಳ್ಳೆಯದಾಗಿದ್ದರೆ; - ಫಕ್ದುರ್‌ಹು ಲೀ - ಅದನ್ನು ನನಗಾಗಿ ನಿರ್ಣಯಿಸು, ಸಿದ್ಧಪಡಿಸು ಮತ್ತು ಪೂರ್ಣಗೊಳಿಸು, - ವ ಯಸ್ಸಿರ್‌ಹು ಲೀ - ಅದನ್ನು ನನಗೆ ಸುಲಭಗೊಳಿಸು, - ಸುಮ್ಮ ಬಾರಿಕ್ ಲೀ ಫೀಹಿ - ನಂತರ ಅದರಲ್ಲಿ ನನಗೆ ಸಮೃದ್ಧಿಯನ್ನು ನೀಡು. ವ ಇನ್ ಕುಂತ ತಅ್‌ಲಮು: ಓ ಅಲ್ಲಾಹ್, ನಾನು ಮಾರ್ಗದರ್ಶನ ಕೋರಿದ ಈ ವಿಷಯವು - ಶರ್ರುನ್ ಲೀ ಫೀ ದೀನೀ ವ ಮಆಶೀ ವ ಆಖಿಬತಿ ಅಮ್‌ರೀ - ಅಥವಾ ಅವರು ಹೀಗೆ ಹೇಳಿದರು: ಫೀ ಆಜಿಲಿ ಅಮ್‌ರೀ ವ ಆಜಿಲಿಹಿ - ನನ್ನ ಧರ್ಮಕ್ಕೆ, ನನ್ನ ಜೀವನೋಪಾಯಕ್ಕೆ ಮತ್ತು ನನ್ನ ಅಂತಿಮ ಫಲಿತಾಂಶಕ್ಕೆ - ಅಥವಾ ಅವರು ಹೀಗೆ ಹೇಳಿದರು: ನನ್ನ ಪ್ರಸ್ತುತ ಮತ್ತು ಭವಿಷ್ಯದ ವಿಷಯಗಳಿಗೆ ಕೆಟ್ಟದ್ದಾಗಿದ್ದರೆ - ಫಸ್‌ರಿಫ್‌ಹು ಅನ್ನೀ ವಸ್‌ರಿಫ್‌ನೀ ಅನ್‌ಹು, ವಕ್ದುರ್ ಲಿಯಲ್ ಖೈರ ಹೈಸು ಕಾನ, ಸುಮ್ಮ ಅರ್ದಿನೀ ಬಿಹಿ - ಅದನ್ನು ನನ್ನಿಂದ ದೂರ ಮಾಡು ಮತ್ತು ನನ್ನನ್ನು ಅದರಿಂದ ದೂರ ಮಾಡು, ಒಳಿತು ಎಲ್ಲೇ ಇದ್ದರೂ ಅದನ್ನು ನನಗಾಗಿ ನಿರ್ಣಯಿಸು, ಮತ್ತು ನಂತರ ನಾನು ಇಷ್ಟಪಡುವ ಮತ್ತು ಇಷ್ಟಪಡದಿರುವ ನಿನ್ನ ಎಲ್ಲಾ ತೀರ್ಮಾನಗಳಿಂದ ನನ್ನನ್ನು ತೃಪ್ತಿಪಡಿಸು.