عَنْ أَبِي سَعِيدٍ الخُدْرِيِّ رضي الله عنه أَنَّهُ سَمِعَ رَسُولَ اللَّهِ صَلَّى اللهُ عَلَيْهِ وَسَلَّمَ يَقُولُ:
«إِذَا رَأَى أَحَدُكُمُ الرُّؤْيَا يُحِبُّهَا فَإِنَّهَا مِنَ اللَّهِ، فَلْيَحْمَدِ اللَّهَ عَلَيْهَا وَلْيُحَدِّثْ بِهَا، وَإِذَا رَأَى غَيْرَ ذَلِكَ مِمَّا يَكْرَهُ، فَإِنَّمَا هِيَ مِنَ الشَّيْطَانِ، فَلْيَسْتَعِذْ مِنْ شَرِّهَا، وَلاَ يَذْكُرْهَا لِأَحَدٍ، فَإِنَّهَا لَنْ تَضُرَّهُ».
[صحيح] - [رواه البخاري] - [صحيح البخاري: 7045]
المزيــد ...
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದ್ದರು:
"ನಿಮ್ಮಲ್ಲಿ ಯಾರಾದರೂ ಅವರು ಇಷ್ಟಪಡುವ ಕನಸನ್ನು ಕಂಡರೆ, ಅದು ಅಲ್ಲಾಹನಿಂದಾಗಿದೆ. ಆದ್ದರಿಂದ ಅವರು ಅದಕ್ಕಾಗಿ ಅಲ್ಲಾಹನನ್ನು ಸ್ತುತಿಸಲಿ ಮತ್ತು ಅದರ ಬಗ್ಗೆ (ಇತರರಿಗೆ) ಹೇಳಲಿ. ಆದರೆ ಅವರು ಅದಲ್ಲದೆ ಅವರಿಗೆ ಇಷ್ಟವಿಲ್ಲದ ಬೇರೆ ಏನಾದರೂ ಕಂಡರೆ, ಅದು ಕೇವಲ ಶೈತಾನನಿಂದಾಗಿದೆ. ಆದ್ದರಿಂದ ಅವರು ಅದರ ಕೆಡುಕಿನಿಂದ ರಕ್ಷಣೆಯನ್ನು ಬೇಡಲಿ ಮತ್ತು ಅದನ್ನು ಯಾರಿಗೂ ತಿಳಿಸದಿರಲಿ. ಹೀಗೆ ಮಾಡಿದರೆ ಅದು ಅವರಿಗೆ ಹಾನಿ ಮಾಡುವುದಿಲ್ಲ."
[صحيح] - [رواه البخاري] - [صحيح البخاري - 7045]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಒಳ್ಳೆಯ ಮತ್ತು ಸಂತೋಷದಾಯಕ ಕನಸು ಅಲ್ಲಾಹನಿಂದಾಗಿದೆ. ಅದಕ್ಕಾಗಿ ಅಲ್ಲಾಹನನ್ನು ಸ್ತುತಿಸಲು ಮತ್ತು ಅದನ್ನು ಇತರರಿಗೆ ತಿಳಿಸಲು ಅವರು ನಿರ್ದೇಶಿಸಿದರು. ಆದರೆ ಒಬ್ಬ ವ್ಯಕ್ತಿ ತಾನು ಇಷ್ಟಪಡದಿರುವ ಮತ್ತು ತನ್ನನ್ನು ಬೇಸರಗೊಳಿಸುವ ಕನಸನ್ನು ಕಂಡರೆ, ಅದು ಶೈತಾನನಿಂದಾಗಿದೆ. ಆದ್ದರಿಂದ, ಅವನು ಅದರ ಕೆಡುಕಿನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡಲಿ ಮತ್ತು ಅದನ್ನು ಯಾರಿಗೂ ತಿಳಿಸದಿರಲಿ. ಹೀಗೆ ಮಾಡಿದರೆ ಅದು ಅವನಿಗೆ ಹಾನಿ ಮಾಡುವುದಿಲ್ಲ. ಅಲ್ಲಾಹು ಈ ವಿಷಯವನ್ನು ಕನಸಿನಿಂದ ಉಂಟಾಗುವ ದುಷ್ಪರಿಣಾಮಕ್ಕೆ ಸುರಕ್ಷತೆಯಾಗಿ ಮಾಡಿದ್ದಾನೆ.