عَنْ صُهَيْبٍ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«عَجَبًا لِأَمْرِ الْمُؤْمِنِ، إِنَّ أَمْرَهُ كُلَّهُ خَيْرٌ، وَلَيْسَ ذَاكَ لِأَحَدٍ إِلَّا لِلْمُؤْمِنِ، إِنْ أَصَابَتْهُ سَرَّاءُ شَكَرَ، فَكَانَ خَيْرًا لَهُ، وَإِنْ أَصَابَتْهُ ضَرَّاءُ صَبَرَ، فَكَانَ خَيْرًا لَهُ».
[صحيح] - [رواه مسلم] - [صحيح مسلم: 2999]
المزيــد ...
ಸುಹೈಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಸತ್ಯವಿಶ್ವಾಸಿಯ ವಿಷಯವು ಅತ್ಯಂತ ವಿಸ್ಮಯಕಾರಿಯಾಗಿದೆ! ಅವನ ಎಲ್ಲಾ ವಿಷಯಗಳೂ ಅವನಿಗೆ ಒಳಿತಾಗಿವೆ. ಇದು ಒಬ್ಬ ಸತ್ಯವಿಶ್ವಾಸಿಗಲ್ಲದೆ ಇನ್ನಾರಿಗೂ ಇಲ್ಲ. ಅವನಿಗೇನಾದರೂ ಒಳ್ಳೆಯದು ಸಂಭವಿಸಿದರೆ ಅವನು ಕೃತಜ್ಞನಾಗುತ್ತಾನೆ, ಅದು ಅವನಿಗೆ ಒಳಿತಾಗಿದೆ. ಇನ್ನು ಅವನಿಗೇನಾದರೂ ತೊಂದರೆ ಬಾಧಿಸಿದರೆ ಅವನು ತಾಳ್ಮೆ ತೋರುತ್ತಾನೆ. ಅದು ಕೂಡ ಅವನಿಗೆ ಒಳಿತಾಗಿದೆ."
[صحيح] - [رواه مسلم] - [صحيح مسلم - 2999]
ಸತ್ಯವಿಶ್ವಾಸಿಯ ಅವಸ್ಥೆಗಳ ಮತ್ತು ಸ್ಥಿತಿಗತಿಗಳ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೆಚ್ಚುಗೆಯ ರೂಪದಲ್ಲಿ ಅಚ್ಚರಿಪಡುತ್ತಾರೆ.ಏಕೆಂದರೆ ಅವನ ಎಲ್ಲಾ ಸ್ಥಿತಿಗತಿಗಳು ಒಳಿತಾಗಿವೆ ಮತ್ತು ಈ ಒಳಿತುಗಳು ಸತ್ಯವಿಶ್ವಾಸಿಯ ಹೊರತು ಇನ್ನಾರಿಗೂ ಇಲ್ಲ. ಅವನಿಗೆ ಒಳ್ಳೆಯದು ಸಂಭವಿಸಿದರೆ ಅವನು ಅಲ್ಲಾಹನಿಗೆ ಕೃತಜ್ಞನಾಗುತ್ತಾನೆ. ಆಗ ಆ ಕೃತಜ್ಞತೆಯ ಮೂಲಕ ಅವನು ಪ್ರತಿಫಲವನ್ನು ಪಡೆಯುತ್ತಾನೆ. ಇನ್ನು ಅವನಿಗೆ ತೊಂದರೆ ಬಾಧಿಸಿದರೆ ಅವನು ತಾಳ್ಮೆ ತೋರುತ್ತಾನೆ ಮತ್ತು ಅಲ್ಲಾಹನಲ್ಲಿ ಪ್ರತಿಫಲವನ್ನು ಅಪೇಕ್ಷಿಸುತ್ತಾನೆ. ಆಗ ಆ ತಾಳ್ಮೆಯ ಮೂಲಕ ಅವನು ಪ್ರತಿಫಲವನ್ನು ಪಡೆಯುತ್ತಾನೆ. ಅವನು ಎಲ್ಲಾ ಅವಸ್ಥೆಗಳಲ್ಲೂ ಪ್ರತಿಫಲ ಪಡೆಯುತ್ತಲೇ ಇರುತ್ತಾನೆ.