عَنْ صُهَيْبٍ رَضيَ اللهُ عنه أَنَّ رَسُولَ اللهِ صَلَّى اللهُ عَلَيْهِ وَسَلَّمَ قَالَ:
"كَانَ مَلِكٌ فِيمَنْ كَانَ قَبْلَكُمْ، وَكَانَ لَهُ سَاحِرٌ، فَلَمَّا كَبِرَ، قَالَ لِلْمَلِكِ: إِنِّي قَدْ كَبِرْتُ، فَابْعَثْ إِلَيَّ غُلَامًا أُعَلِّمْهُ السِّحْرَ، فَبَعَثَ إِلَيْهِ غُلَامًا يُعَلِّمُهُ، فَكَانَ فِي طَرِيقِهِ إِذَا سَلَكَ رَاهِبٌ فَقَعَدَ إِلَيْهِ وَسَمِعَ كَلَامَهُ، فَأَعْجَبَهُ، فَكَانَ إِذَا أَتَى السَّاحِرَ مَرَّ بِالرَّاهِبِ وَقَعَدَ إِلَيْهِ، فَإِذَا أَتَى السَّاحِرَ ضَرَبَهُ، فَشَكَا ذَلِكَ إِلَى الرَّاهِبِ، فَقَالَ: إِذَا خَشِيتَ السَّاحِرَ، فَقُلْ: حَبَسَنِي أَهْلِي، وَإِذَا خَشِيتَ أَهْلَكَ فَقُلْ: حَبَسَنِي السَّاحِرُ، فَبَيْنَمَا هُوَ كَذَلِكَ إِذْ أَتَى عَلَى دَابَّةٍ عَظِيمَةٍ قَدْ حَبَسَتِ النَّاسَ، فَقَالَ: الْيَوْمَ أَعْلَمُ آلسَّاحِرُ أَفْضَلُ أَمِ الرَّاهِبُ أَفْضَلُ؟ فَأَخَذَ حَجَرًا، فَقَالَ: اللهُمَّ إِنْ كَانَ أَمْرُ الرَّاهِبِ أَحَبَّ إِلَيْكَ مِنْ أَمْرِ السَّاحِرِ فَاقْتُلْ هَذِهِ الدَّابَّةَ، حَتَّى يَمْضِيَ النَّاسُ، فَرَمَاهَا فَقَتَلَهَا، وَمَضَى النَّاسُ، فَأَتَى الرَّاهِبَ فَأَخْبَرَهُ، فَقَالَ لَهُ الرَّاهِبُ: أَيْ بُنَيَّ أَنْتَ الْيَوْمَ أَفْضَلُ مِنِّي، قَدْ بَلَغَ مِنْ أَمْرِكَ مَا أَرَى، وَإِنَّكَ سَتُبْتَلَى، فَإِنِ ابْتُلِيتَ فَلَا تَدُلَّ عَلَيَّ، وَكَانَ الْغُلَامُ يُبْرِئُ الْأَكْمَهَ وَالْأَبْرَصَ، وَيُدَاوِي النَّاسَ مِنْ سَائِرِ الْأَدْوَاءِ، فَسَمِعَ جَلِيسٌ لِلْمَلِكِ كَانَ قَدْ عَمِيَ، فَأَتَاهُ بِهَدَايَا كَثِيرَةٍ، فَقَالَ: مَا هَاهُنَا لَكَ أَجْمَعُ، إِنْ أَنْتَ شَفَيْتَنِي، فَقَالَ: إِنِّي لَا أَشْفِي أَحَدًا إِنَّمَا يَشْفِي اللهُ، فَإِنْ أَنْتَ آمَنْتَ بِاللهِ دَعَوْتُ اللهَ فَشَفَاكَ، فَآمَنَ بِاللهِ فَشَفَاهُ اللهُ، فَأَتَى الْمَلِكَ فَجَلَسَ إِلَيْهِ كَمَا كَانَ يَجْلِسُ، فَقَالَ لَهُ الْمَلِكُ: مَنْ رَدَّ عَلَيْكَ بَصَرَكَ؟ قَالَ: رَبِّي، قَالَ: وَلَكَ رَبٌّ غَيْرِي؟ قَالَ: رَبِّي وَرَبُّكَ اللهُ، فَأَخَذَهُ فَلَمْ يَزَلْ يُعَذِّبُهُ حَتَّى دَلَّ عَلَى الْغُلَامِ، فَجِيءَ بِالْغُلَامِ، فَقَالَ لَهُ الْمَلِكُ: أَيْ بُنَيَّ قَدْ بَلَغَ مِنْ سِحْرِكَ مَا تُبْرِئُ الْأَكْمَهَ وَالْأَبْرَصَ، وَتَفْعَلُ وَتَفْعَلُ، فَقَالَ: إِنِّي لَا أَشْفِي أَحَدًا، إِنَّمَا يَشْفِي اللهُ، فَأَخَذَهُ فَلَمْ يَزَلْ يُعَذِّبُهُ حَتَّى دَلَّ عَلَى الرَّاهِبِ، فَجِيءَ بِالرَّاهِبِ، فَقِيلَ لَهُ: ارْجِعْ عَنْ دِينِكَ، فَأَبَى، فَدَعَا بِالْمِئْشَارِ، فَوَضَعَ الْمِئْشَارَ فِي مَفْرِقِ رَأْسِهِ، فَشَقَّهُ حَتَّى وَقَعَ شِقَّاهُ، ثُمَّ جِيءَ بِجَلِيسِ الْمَلِكِ فَقِيلَ لَهُ: ارْجِعْ عَنْ دِينِكَ، فَأَبَى فَوَضَعَ الْمِئْشَارَ فِي مَفْرِقِ رَأْسِهِ، فَشَقَّهُ بِهِ حَتَّى وَقَعَ شِقَّاهُ، ثُمَّ جِيءَ بِالْغُلَامِ فَقِيلَ لَهُ ارْجِعْ عَنْ دِينِكَ، فَأَبَى فَدَفَعَهُ إِلَى نَفَرٍ مِنْ أَصْحَابِهِ، فَقَالَ: اذْهَبُوا بِهِ إِلَى جَبَلِ كَذَا وَكَذَا، فَاصْعَدُوا بِهِ الْجَبَلَ، فَإِذَا بَلَغْتُمْ ذُرْوَتَهُ، فَإِنْ رَجَعَ عَنْ دِينِهِ، وَإِلَّا فَاطْرَحُوهُ، فَذَهَبُوا بِهِ فَصَعِدُوا بِهِ الْجَبَلَ، فَقَالَ: اللهُمَّ اكْفِنِيهِمْ بِمَا شِئْتَ، فَرَجَفَ بِهِمِ الْجَبَلُ فَسَقَطُوا، وَجَاءَ يَمْشِي إِلَى الْمَلِكِ، فَقَالَ لَهُ الْمَلِكُ: مَا فَعَلَ أَصْحَابُكَ؟ قَالَ: كَفَانِيهِمُ اللهُ، فَدَفَعَهُ إِلَى نَفَرٍ مِنْ أَصْحَابِهِ، فَقَالَ: اذْهَبُوا بِهِ فَاحْمِلُوهُ فِي قُرْقُورٍ، فَتَوَسَّطُوا بِهِ الْبَحْرَ، فَإِنْ رَجَعَ عَنْ دِينِهِ وَإِلَّا فَاقْذِفُوهُ، فَذَهَبُوا بِهِ، فَقَالَ: اللهُمَّ اكْفِنِيهِمْ بِمَا شِئْتَ، فَانْكَفَأَتْ بِهِمِ السَّفِينَةُ فَغَرِقُوا، وَجَاءَ يَمْشِي إِلَى الْمَلِكِ، فَقَالَ لَهُ الْمَلِكُ: مَا فَعَلَ أَصْحَابُكَ؟ قَالَ: كَفَانِيهِمُ اللهُ، فَقَالَ لِلْمَلِكِ: إِنَّكَ لَسْتَ بِقَاتِلِي حَتَّى تَفْعَلَ مَا آمُرُكَ بِهِ، قَالَ: وَمَا هُوَ؟ قَالَ: تَجْمَعُ النَّاسَ فِي صَعِيدٍ وَاحِدٍ، وَتَصْلُبُنِي عَلَى جِذْعٍ، ثُمَّ خُذْ سَهْمًا مِنْ كِنَانَتِي، ثُمَّ ضَعِ السَّهْمَ فِي كَبِدِ الْقَوْسِ، ثُمَّ قُلْ: بِاسْمِ اللهِ رَبِّ الْغُلَامِ، ثُمَّ ارْمِنِي، فَإِنَّكَ إِذَا فَعَلْتَ ذَلِكَ قَتَلْتَنِي، فَجَمَعَ النَّاسَ فِي صَعِيدٍ وَاحِدٍ، وَصَلَبَهُ عَلَى جِذْعٍ، ثُمَّ أَخَذَ سَهْمًا مِنْ كِنَانَتِهِ، ثُمَّ وَضَعَ السَّهْمَ فِي كَبْدِ الْقَوْسِ، ثُمَّ قَالَ: بِاسْمِ اللهِ، رَبِّ الْغُلَامِ، ثُمَّ رَمَاهُ فَوَقَعَ السَّهْمُ فِي صُدْغِهِ، فَوَضَعَ يَدَهُ فِي صُدْغِهِ فِي مَوْضِعِ السَّهْمِ فَمَاتَ، فَقَالَ النَّاسُ: آمَنَّا بِرَبِّ الْغُلَامِ، آمَنَّا بِرَبِّ الْغُلَامِ، آمَنَّا بِرَبِّ الْغُلَامِ، فَأُتِيَ الْمَلِكُ فَقِيلَ لَهُ: أَرَأَيْتَ مَا كُنْتَ تَحْذَرُ؟ قَدْ وَاللهِ نَزَلَ بِكَ حَذَرُكَ، قَدْ آمَنَ النَّاسُ، فَأَمَرَ بِالْأُخْدُودِ فِي أَفْوَاهِ السِّكَكِ، فَخُدَّتْ وَأَضْرَمَ النِّيرَانَ، وَقَالَ: مَنْ لَمْ يَرْجِعْ عَنْ دِينِهِ فَأَحْمُوهُ فِيهَا، أَوْ قِيلَ لَهُ: اقْتَحِمْ، فَفَعَلُوا حَتَّى جَاءَتِ امْرَأَةٌ وَمَعَهَا صَبِيٌّ لَهَا فَتَقَاعَسَتْ أَنْ تَقَعَ فِيهَا، فَقَالَ لَهَا الْغُلَامُ: يَا أُمَّهْ اصْبِرِي فَإِنَّكِ عَلَى الْحَقِّ".

[صحيح] - [رواه مسلم] - [صحيح مسلم: 3005]
المزيــد ...

ಸುಹೈಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
ನಿಮಗಿಂತ ಹಿಂದಿನ ಕಾಲದವರಲ್ಲಿ ಒಬ್ಬ ರಾಜನಿದ್ದನು. ಅವನಿಗೆ ಒಬ್ಬ ಮಾಟಗಾರನಿದ್ದನು. ಅವನಿಗೆ (ಮಾಟಗಾರನಿಗೆ) ವಯಸ್ಸಾದಾಗ, ಅವನು ರಾಜನಿಗೆ ಹೇಳಿದನು: 'ನನಗೆ ವಯಸ್ಸಾಗಿದೆ, ಆದ್ದರಿಂದ ನನ್ನ ಬಳಿಗೆ ಒಬ್ಬ ಬಾಲಕನನ್ನು ಕಳುಹಿಸು, ನಾನು ಅವನಿಗೆ ಮಾಟಗಾರಿಕೆಯನ್ನು ಕಲಿಸುತ್ತೇನೆ'. ರಾಜನು ಮಾಟಗಾರಿಕೆ ಕಲಿಯಲು ಅವನ ಬಳಿಗೆ ಒಬ್ಬ ಬಾಲಕನನ್ನು ಕಳುಹಿಸಿದನು. ಅವನು (ಮಾಟಗಾರನ ಬಳಿಗೆ) ಹೋಗುವ ದಾರಿಯಲ್ಲಿ, ಒಬ್ಬ ಸನ್ಯಾಸಿ ಇದ್ದನು. ಬಾಲಕ ಅವನ ಬಳಿ ಕುಳಿತು ಅವನ ಮಾತುಗಳನ್ನು ಕೇಳಿದನು. ಅದು ಅವನಿಗೆ ಇಷ್ಟವಾಯಿತು. ಅವನು ಮಾಟಗಾರನ ಬಳಿಗೆ ಹೋಗುವಾಗಲೆಲ್ಲಾ, ಸನ್ಯಾಸಿಯ ಬಳಿ ಹೋಗಿ ಅವನ ಬಳಿ ಕುಳಿತುಕೊಳ್ಳುತ್ತಿದ್ದನು. ಅವನು ಮಾಟಗಾರನ ಬಳಿಗೆ (ತಡವಾಗಿ) ಬಂದಾಗ, ಮಾಟಗಾರನು ಅವನಿಗೆ ಹೊಡೆಯುತ್ತಿದ್ದನು. ಅವನು ಇದರ ಬಗ್ಗೆ ಸನ್ಯಾಸಿಗೆ ದೂರು ನೀಡಿದನು. ಸನ್ಯಾಸಿ ಹೇಳಿದನು: 'ನೀನು ಮಾಟಗಾರನನ್ನು ಹೆದರಿದರೆ, "ನನ್ನ ಮನೆಯವರು ನನ್ನನ್ನು ತಡೆದರು" ಎಂದು ಹೇಳು, ಮತ್ತು ನೀನು ನಿನ್ನ ಮನೆಯವರಿಗೆ ಹೆದರಿದರೆ, "ಮಾಟಗಾರನು ನನ್ನನ್ನು ತಡೆದನು" ಎಂದು ಹೇಳು'. ಹೀಗಿರುವಾಗ, ಒಂದು ದಿನ ಅವನು (ಮಾಟಗಾರನ ಬಳಿಗೆ ಹೋಗುವಾಗ ದಾರಿಯಲ್ಲಿ) ಒಂದು ದೊಡ್ಡ ಪ್ರಾಣಿ ಇರುವುದನ್ನು ಕಂಡನು. ಅದು ಜನರನ್ನು (ದಾರಿಯಲ್ಲಿ ನಡೆಯಲು) ಬಿಡುತ್ತಿರಲಿಲ್ಲ. ಅವನು (ಬಾಲಕನು) ಹೇಳಿದನು: 'ಮಾಟಗಾರನು ಶ್ರೇಷ್ಠನೋ ಅಥವಾ ಸನ್ಯಾಸಿಯು ಶ್ರೇಷ್ಠನೋ ಎಂದು ಇಂದು ನನಗೆ ತಿಳಿಯುತ್ತದೆ'. ಅವನು ಒಂದು ಕಲ್ಲನ್ನು ತೆಗೆದುಕೊಂಡು ಹೇಳಿದನು: 'ಓ ಅಲ್ಲಾಹ್, ಒಂದು ವೇಳೆ ಸನ್ಯಾಸಿಯ ಮಾರ್ಗವು ಮಾಟಗಾರನ ಮಾರ್ಗಕ್ಕಿಂತ ನಿನಗೆ ಹೆಚ್ಚು ಇಷ್ಟವಾಗಿದ್ದರೆ, ಈ ಪ್ರಾಣಿಯನ್ನು ಕೊಂದುಹಾಕು. ಇದರಿಂದ ಜನರು (ತಮ್ಮ ದಾರಿಯಲ್ಲಿ) ನಡೆಯಬಹುದು'. ಅವನು ಕಲ್ಲನ್ನು ಎಸೆದನು. ಅದು ಅದನ್ನು ಕೊಂದಿತು, ಮತ್ತು ಜನರು (ತಮ್ಮ ದಾರಿಯಲ್ಲಿ) ನಡೆದರು. ಅವನು ಸನ್ಯಾಸಿಯ ಬಳಿಗೆ ಬಂದು (ನಡೆದದ್ದನ್ನು) ತಿಳಿಸಿದನು. ಆಗ ಸನ್ಯಾಸಿ ಹೇಳಿದನು: 'ಮಗೂ, ಇಂದು ನೀನು ನನಗಿಂತ ಶ್ರೇಷ್ಠನಾಗಿರುವೆ. ನಿನ್ನ ವಿಷಯವು ನಾನು ನೋಡುತ್ತಿರುವಂತೆ ದೊಡ್ಡ ಮಟ್ಟವನ್ನು ತಲುಪಿದೆ. ಖಂಡಿತವಾಗಿಯೂ ನಿನ್ನನ್ನು ಪರೀಕ್ಷಿಸಲಾಗುವುದು. ಒಂದು ವೇಳೆ ನಿನ್ನನ್ನು ಪರೀಕ್ಷಿಸಲಾದರೆ, ನನ್ನ ಬಗ್ಗೆ ತಿಳಿಸಬೇಡ'. ಆ ಬಾಲಕನು ಹುಟ್ಟು ಕುರುಡರನ್ನು ಮತ್ತು ಕುಷ್ಠರೋಗಿಗಳನ್ನು ಗುಣಪಡಿಸುತ್ತಿದ್ದನು ಇತರ ಎಲ್ಲಾ ರೋಗಗಳಿಗೂ ಜನರಿಗೆ ಚಿಕಿತ್ಸೆ ನೀಡುತ್ತಿದ್ದನು (ಅಲ್ಲಾಹನ ಅನುಮತಿಯೊಂದಿಗೆ). ರಾಜನ ಒಬ್ಬ ಆಸ್ಥಾನಿಕನಿಗೆ ಈ ಬಾಲಕನ ಬಗ್ಗೆ ತಿಳಿಯಿತು. ಅವನು ಕುರುಡನಾಗಿದ್ದನು. ಅವನು ಅನೇಕ ಉಡುಗೊರೆಗಳೊಂದಿಗೆ ಬಾಲಕನ ಬಳಿಗೆ ಬಂದು ಹೇಳಿದನು: 'ಒಂದು ವೇಳೆ ನೀನು ನನ್ನನ್ನು ಗುಣಪಡಿಸಿದರೆ ಇಲ್ಲಿರುವುದೆಲ್ಲವೂ ನಿನಗೆ ಸೇರುತ್ತದೆ'. ಬಾಲಕ ಹೇಳಿದನು: 'ನಾನು ಯಾರನ್ನೂ ಗುಣಪಡಿಸುವುದಿಲ್ಲ, ಅಲ್ಲಾಹು ಮಾತ್ರ ಗುಣಪಡಿಸುತ್ತಾನೆ. ಒಂದು ವೇಳೆ ನೀವು ಅಲ್ಲಾಹನಲ್ಲಿ ವಿಶ್ವಾಸವಿಟ್ಟರೆ, ನಾನು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ. ಆಗ ಅವನು ನಿಮ್ಮನ್ನು ಗುಣಪಡಿಸುತ್ತಾನೆ'. ಆಸ್ಥಾನಿಕನು ಅಲ್ಲಾಹನಲ್ಲಿ ವಿಶ್ವಾಸವಿಟ್ಟನು, ಆಗ ಅಲ್ಲಾಹು ಅವನನ್ನು ಗುಣಪಡಿಸಿದನು. ಅವನು ರಾಜನ ಬಳಿಗೆ ಬಂದು, ಮೊದಲು ಕುಳಿತುಕೊಳ್ಳುತ್ತಿದ್ದಂತೆಯೇ ಕುಳಿತುಕೊಂಡನು. ರಾಜನು ಕೇಳಿದನು: 'ನಿನ್ನ ದೃಷ್ಟಿಯನ್ನು ನಿನಗೆ ಹಿಂದಿರುಗಿಸಿದವರು ಯಾರು?'. ಅವನು ಹೇಳಿದನು: 'ನನ್ನ ಪರಿಪಾಲಕ'. ರಾಜನು ಕೇಳಿದನು: 'ನನ್ನ ಹೊರತು ನಿನಗೆ ಬೇರೆ ಪರಿಪಾಲಕನಿದ್ದಾನೆಯೇ?'. ಅವನು ಹೇಳಿದನು: 'ನನ್ನ ಪರಿಪಾಲಕ ಮತ್ತು ತಮ್ಮ ಪರಿಪಾಲಕ ಅಲ್ಲಾಹನಾಗಿದ್ದಾನೆ'. ಆಗ ಅವನು (ರಾಜ) ಅವನನ್ನು ಹಿಡಿದು, ಅವನು ಬಾಲಕನ ಬಗ್ಗೆ ತಿಳಿಸುವವರೆಗೆ ಚಿತ್ರಹಿಂಸೆ ನೀಡಿದನು. ಬಾಲಕನನ್ನು ಕರೆತರಲಾಯಿತು. ರಾಜನು ಹೇಳಿದನು: 'ಮಗೂ, ನಿನ್ನ ಮಾಟಗಾರಿಕೆಯು ಎಷ್ಟು ಮುಂದುವರೆದಿದೆ ಎಂದರೆ ನೀನು ಹುಟ್ಟು ಕುರುಡರನ್ನು ಮತ್ತು ಕುಷ್ಠರೋಗಿಗಳನ್ನು ಗುಣಪಡಿಸುತ್ತಿರುವೆ, ಮತ್ತು ನೀನು ಇಂತಿಂತಹದ್ದನ್ನು ಮಾಡುತ್ತಿರುವೆ'. ಅವನು (ಬಾಲಕ) ಹೇಳಿದನು: 'ನಾನು ಯಾರನ್ನೂ ಗುಣಪಡಿಸುವುದಿಲ್ಲ, ಅಲ್ಲಾಹು ಮಾತ್ರ ಗುಣಪಡಿಸುತ್ತಾನೆ'. ಆಗ ಅವನು (ರಾಜ) ಅವನನ್ನು ಹಿಡಿದು, ಅವನು ಸನ್ಯಾಸಿಯ ಬಗ್ಗೆ ತಿಳಿಸುವವರೆಗೆ ಅವನಿಗೆ ಚಿತ್ರಹಿಂಸೆ ನೀಡಿದನು. ಸನ್ಯಾಸಿಯನ್ನು ಕರೆತರಲಾಯಿತು. ಅವನೊಂದಿಗೆ ಹೇಳಲಾಯಿತು: 'ನಿನ್ನ ಧರ್ಮವನ್ನು ಬಿಟ್ಟು ಬಾ'. ಅವನು (ಧರ್ಮವನ್ನು ಬಿಡಲು) ನಿರಾಕರಿಸಿದನು. ಆಗ ರಾಜನು ಗರಗಸವನ್ನು ತರಿಸಿದನು. ಗರಗಸವನ್ನು ಅವನ ತಲೆಯ ಮಧ್ಯಭಾಗದಲ್ಲಿ ಇರಿಸಿ, ಅವನನ್ನು ಎರಡು ತುಂಡುಗಳಾಗುವವರೆಗೆ ಸೀಳಿದನು. ನಂತರ ರಾಜನ ಆಸ್ಥಾನಿಕನನ್ನು ಕರೆತರಲಾಯಿತು. ಅವನೊಂದಿಗೆ ಹೇಳಲಾಯಿತು: 'ನಿನ್ನ ಧರ್ಮವನ್ನು ಬಿಟ್ಟು ಬಾ'. ಅವನು ನಿರಾಕರಿಸಿದನು. ಆಗ ಗರಗಸವನ್ನು ಅವನ ತಲೆಯ ಮಧ್ಯಭಾಗದಲ್ಲಿ ಇರಿಸಿ, ಅವನನ್ನು ಎರಡು ತುಂಡುಗಳಾಗುವವರೆಗೆ ಸೀಳಿದನು. ನಂತರ ಬಾಲಕನನ್ನು ಕರೆತರಲಾಯಿತು. ಅವನೊಂದಿಗೆ ಹೇಳಲಾಯಿತು: 'ನಿನ್ನ ಧರ್ಮವನ್ನು ಬಿಟ್ಟು ಬಾ'. ಅವನು ನಿರಾಕರಿಸಿದನು. ಆಗ ರಾಜನು ಅವನನ್ನು ತನ್ನ ಕೆಲವು ಸಹಚರರ (ಸೈನಿಕರ) ವಶಕ್ಕೆ ಒಪ್ಪಿಸಿದನು. ರಾಜ ಹೇಳಿದನು: 'ಇವನನ್ನು ಇಂಥಿಂಥ ಬೆಟ್ಟಕ್ಕೆ ಕರೆದೊಯ್ಯಿರಿ. ಅವನನ್ನು ಬೆಟ್ಟದ ಮೇಲೆ ಹತ್ತಿಸಿ. ನೀವು ಅದರ ಶಿಖರವನ್ನು ತಲುಪಿದಾಗ, ಒಂದು ವೇಳೆ ಅವನು ತನ್ನ ಧರ್ಮದಿಂದ ಹಿಂದೆ ಬಂದರೆ (ಸರಿ), ಇಲ್ಲದಿದ್ದರೆ ಅವನನ್ನು ಕೆಳಗೆ ಎಸೆಯಿರಿ'. ಅವರು ಅವನನ್ನು ಕರೆದೊಯ್ದು ಬೆಟ್ಟದ ಮೇಲೆ ಹತ್ತಿಸಿದರು. ಆಗ ಬಾಲಕನು ಹೇಳಿದನು: 'ಓ ಅಲ್ಲಾಹ್, ನೀನು ಬಯಸಿದ ರೀತಿಯಲ್ಲಿ ಅವರಿಂದ ನನ್ನನ್ನು ಕಾಪಾಡು'. ಆಗ ಬೆಟ್ಟವು ಅವರೊಂದಿಗೆ ಕಂಪಿಸಿತು, ಅವರು (ಸೈನಿಕರು) ಕೆಳಗೆ ಬಿದ್ದರು. ಬಾಲಕ ನಡೆದುಕೊಂಡು ರಾಜನ ಬಳಿಗೆ ಬಂದನು. ರಾಜನು ಕೇಳಿದನು: 'ನಿನ್ನ ಸಹಚರರು (ಸೈನಿಕರು) ಏನಾದರು?'. ಅವನು ಹೇಳಿದನು: 'ಅಲ್ಲಾಹು ಅವರಿಂದ ನನ್ನನ್ನು ಕಾಪಾಡಿದನು'. ಆಗ ರಾಜನು ಅವನನ್ನು (ಬೇರೆ) ಕೆಲವು ಸಹಚರರ ವಶಕ್ಕೆ ಒಪ್ಪಿಸಿದನು. ಅವನು ಹೇಳಿದನು: 'ಇವನನ್ನು ಕರೆದೊಯ್ದು ಒಂದು ಸಣ್ಣ ದೋಣಿಯಲ್ಲಿ ಹತ್ತಿಸಿ. ಅವನನ್ನು ಸಮುದ್ರದ ಮಧ್ಯಕ್ಕೆ ಕರೆದೊಯ್ಯಿರಿ. ಒಂದು ವೇಳೆ ಅವನು ತನ್ನ ಧರ್ಮದಿಂದ ಹಿಂದೆ ಬಂದರೆ (ಸರಿ), ಇಲ್ಲದಿದ್ದರೆ ಅವನನ್ನು ಸಮುದ್ರಕ್ಕೆ ಎಸೆಯಿರಿ'. ಅವರು ಅವನನ್ನು ಕರೆದೊಯ್ದರು. ಆಗ ಬಾಲಕನು ಹೇಳಿದನು: 'ಓ ಅಲ್ಲಾಹ್, ನೀನು ಬಯಸಿದ ರೀತಿಯಲ್ಲಿ ಅವರಿಂದ ನನ್ನನ್ನು ಕಾಪಾಡು'. ಆಗ ದೋಣಿ ಅವರೊಂದಿಗೆ ಮಗುಚಿಬಿದ್ದು, ಅವರು (ಸೈನಿಕರು) ಮುಳುಗಿಹೋದರು. ಬಾಲಕ ನಡೆದುಕೊಂಡು ರಾಜನ ಬಳಿಗೆ ಬಂದನು. ರಾಜನು ಕೇಳಿದನು: 'ನಿನ್ನ ಸಹಚರರು (ಸೈನಿಕರು) ಏನಾದರು?'. ಅವನು ಹೇಳಿದನು: 'ಅಲ್ಲಾಹು ಅವರಿಂದ ನನ್ನನ್ನು ಕಾಪಾಡಿದನು'. ಬಾಲಕನು ರಾಜನಿಗೆ ಹೇಳಿದನು: 'ನೀವು ನಾನು ಹೇಳುವಂತೆ ಮಾಡುವವರೆಗೆ ನನ್ನನ್ನು ಕೊಲ್ಲಲು ನಿಮಗೆ ಸಾಧ್ಯವಿಲ್ಲ'. ರಾಜನು ಕೇಳಿದನು: 'ಏನು ಮಾಡಬೇಕು?'. ಬಾಲಕನು ಹೇಳಿದನು: 'ನೀವು ಜನರನ್ನು ಒಂದು ಬಯಲು ಪ್ರದೇಶದಲ್ಲಿ ಒಟ್ಟು ಸೇರಿಸಿರಿ, ಮತ್ತು ನನ್ನನ್ನು ಒಂದು ಮರದ ಕಾಂಡದ ಮೇಲೆ ಶಿಲುಬೆಗೇರಿಸಿರಿ. ನಂತರ ನನ್ನ ಬತ್ತಳಿಕೆಯಿಂದ ಒಂದು ಬಾಣವನ್ನು ತೆಗೆದುಕೊಳ್ಳಿರಿ. ನಂತರ ಬಾಣವನ್ನು ಬಿಲ್ಲಿನ ನಡುಭಾಗದಲ್ಲಿ ಇರಿಸಿರಿ. ನಂತರ, "ಈ ಬಾಲಕನ ಪರಿಪಾಲಕನಾದ ಅಲ್ಲಾಹನ ಹೆಸರಿನಿಂದ" ಎಂದು ಹೇಳಿರಿ. ನಂತರ ನನ್ನ ಮೇಲೆ ಬಾಣವನ್ನು ಪ್ರಯೋಗಿಸಿರಿ. ನೀವು ಹೀಗೆ ಮಾಡಿದರೆ, ನೀವು ನನ್ನನ್ನು ಕೊಲ್ಲಬಹುದು'. ರಾಜನು ಜನರನ್ನು ಒಂದು ಬಯಲಿನಲ್ಲಿ ಒಟ್ಟುಗೂಡಿಸಿದನು, ಮತ್ತು ಬಾಲಕನನ್ನು ಒಂದು ಮರದ ಕಾಂಡದ ಮೇಲೆ ಶಿಲುಬೆಗೇರಿಸಿದನು. ನಂತರ ಅವನ ಬತ್ತಳಿಕೆಯಿಂದ ಒಂದು ಬಾಣವನ್ನು ತೆಗೆದುಕೊಂಡನು. ನಂತರ ಬಾಣವನ್ನು ಬಿಲ್ಲಿನ ಮಧ್ಯದಲ್ಲಿ ಇರಿಸಿದನು. ನಂತರ, "ಈ ಬಾಲಕನ ಪರಿಪಾಲಕನಾದ ಅಲ್ಲಾಹನ ಹೆಸರಿನಿಂದ" ಎಂದು ಹೇಳಿದನು. ನಂತರ ಅವನ ಮೇಲೆ ಬಾಣವನ್ನು ಪ್ರಯೋಗಿಸಿದನು. ಬಾಣವು ಅವನ ಕಿವಿಯ ಬಳಿ ಬಡಿಯಿತು. ಅವನು ಬಾಣ ಬಡಿದ ಸ್ಥಳದಲ್ಲಿ, ತನ್ನ ಕಿವಿಯ ಬಳಿ ಕೈಯಿಟ್ಟುಕೊಂಡು ಪ್ರಾಣಬಿಟ್ಟನು. ಆಗ ಜನರು (ಜೋರಾಗಿ) ಹೇಳಿದರು: 'ನಾವು ಈ ಬಾಲಕನ ಪರಿಪಾಲಕನಲ್ಲಿ ವಿಶ್ವಾಸವಿಟ್ಟೆವು! ನಾವು ಈ ಬಾಲಕನ ಪರಿಪಾಲಕನಲ್ಲಿ ವಿಶ್ವಾಸವಿಟ್ಟೆವು! ನಾವು ಈ ಬಾಲಕನ ಪರಿಪಾಲಕನಲ್ಲಿ ವಿಶ್ವಾಸವಿಟ್ಟೆವು!'. ಆಗ ರಾಜನ ಬಳಿಗೆ ಬಂದು ಹೇಳಲಾಯಿತು: 'ನೀನು ಯಾವುದಕ್ಕೆ ಹೆದರುತ್ತಿದ್ದೆಯೋ ಅದನ್ನು ನೋಡಿದೆಯಾ? ಅಲ್ಲಾಹನಾಣೆ, ನೀನು ಹೆದರಿದ್ದು ನಿನಗೆ ಸಂಭವಿಸಿದೆ. ಜನರು ವಿಶ್ವಾಸವಿಟ್ಟಿದ್ದಾರೆ'. ಆಗ ಅವನು ರಸ್ತೆಗಳ ದ್ವಾರಗಳಲ್ಲಿ ಅಗಲವಾದ ಹೊಂಡಗಳನ್ನು ತೋಡಲು ಆದೇಶಿಸಿದನು. ಅವುಗಳನ್ನು ತೋಡಲಾಗಿ ಬೆಂಕಿಯನ್ನು ಹೊತ್ತಿಸಲಾಯಿತು. ರಾಜ ಹೇಳಿದನು: 'ಯಾರು ಅವರ ಧರ್ಮದಿಂದ ಹಿಂದೆ ಬರುವುದಿಲ್ಲವೋ, ಅವರನ್ನು ಇದರಲ್ಲಿ ಎಸೆಯಿರಿ'. ಅಥವಾ ಅವರಿಗೆ ಹೇಳಲಾಯಿತು: 'ಇದರಲ್ಲಿ ಪ್ರವೇಶಿಸಿರಿ'. ಅವರು (ರಾಜನ ಸೈನಿಕರು) ಹಾಗೆಯೇ ಮಾಡಿದರು. ಕೊನೆಗೆ ಒಬ್ಬ ಮಹಿಳೆ ಬಂದಳು. ಅವಳೊಂದಿಗೆ ಅವಳ ಮಗುವೂ ಇತ್ತು. ಅವಳು ಅದರಲ್ಲಿ (ಬೆಂಕಿಯಲ್ಲಿ) ಬೀಳಲು ಹಿಂದೇಟು ಹಾಕಿದಳು. ಆಗ ಅವಳ ಮಗು ಅವಳಿಗೆ ಹೇಳಿತು: 'ಅಮ್ಮಾ, ತಾಳ್ಮೆಯಿಂದಿರು. ಖಂಡಿತವಾಗಿಯೂ ನೀನು ಸತ್ಯದ ಮೇಲಿರುವೆ!' ".

[صحيح] - [رواه مسلم] - [صحيح مسلم - 3005]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ನಮಗಿಂತ ಹಿಂದಿನ ಕಾಲದವರಲ್ಲಿ ಒಬ್ಬ ರಾಜನಿದ್ದನು. ಅವನಿಗೆ ಒಬ್ಬ ಮಾಟಗಾರನಿದ್ದನು. ಅವನಿಗೆ (ಮಾಟಗಾರನಿಗೆ) ವಯಸ್ಸಾದಾಗ, ಅವನು ರಾಜನಿಗೆ ಹೇಳಿದನು: 'ನನಗೆ ವಯಸ್ಸಾಗಿದೆ, ಆದ್ದರಿಂದ ನನ್ನ ಬಳಿಗೆ ಒಬ್ಬ ಬಾಲಕನನ್ನು ಕಳುಹಿಸು, ನಾನು ಅವನಿಗೆ ಮಾಟಗಾರಿಕೆಯನ್ನು ಕಲಿಸುತ್ತೇನೆ'. ರಾಜನು ಮಾಟಗಾರಿಕೆ ಕಲಿಯಲು ಅವನ ಬಳಿಗೆ ಒಬ್ಬ ಬಾಲಕನನ್ನು ಕಳುಹಿಸಿದನು. ಅವನು (ಮಾಟಗಾರನ ಬಳಿಗೆ) ಹೋಗುವ ದಾರಿಯಲ್ಲಿ, ಒಬ್ಬ ಸನ್ಯಾಸಿ ಇದ್ದನು. ಬಾಲಕ ಅವನ ಬಳಿ ಕುಳಿತು ಅವನ ಮಾತುಗಳನ್ನು ಕೇಳಿದನು. ಅದು ಅವನಿಗೆ ಇಷ್ಟವಾಯಿತು. ಅವನು ಮಾಟಗಾರನ ಬಳಿಗೆ ಹೋಗುವಾಗಲೆಲ್ಲಾ, ಸನ್ಯಾಸಿಯ ಬಳಿ ಹೋಗಿ ಅವನ ಬಳಿ ಕುಳಿತುಕೊಳ್ಳುತ್ತಿದ್ದನು. ಅವನು ಮಾಟಗಾರನ ಬಳಿಗೆ (ತಡವಾಗಿ) ಬಂದಾಗ, ಮಾಟಗಾರನು ಅವನಿಗೆ ಹೊಡೆಯುತ್ತಿದ್ದನು. ಅವನು ಇದರ ಬಗ್ಗೆ ಸನ್ಯಾಸಿಗೆ ದೂರು ನೀಡಿದನು. ಸನ್ಯಾಸಿ ಹೇಳಿದನು: 'ನೀನು ಮಾಟಗಾರನನ್ನು ಹೆದರಿದರೆ, "ನನ್ನ ಮನೆಯವರು ನನ್ನನ್ನು ತಡೆದರು" ಎಂದು ಹೇಳು, ಮತ್ತು ನೀನು ನಿನ್ನ ಮನೆಯವರಿಗೆ ಹೆದರಿದರೆ, "ಮಾಟಗಾರನು ನನ್ನನ್ನು ತಡೆದನು" ಎಂದು ಹೇಳು'. ಹೀಗಿರುವಾಗ, ಒಂದು ದಿನ ಅವನು (ಮಾಟಗಾರನ ಬಳಿಗೆ ಹೋಗುವಾಗ ದಾರಿಯಲ್ಲಿ) ಒಂದು ದೊಡ್ಡ ಪ್ರಾಣಿ ಇರುವುದನ್ನು ಕಂಡನು. ಅದು ಜನರನ್ನು (ದಾರಿಯಲ್ಲಿ ನಡೆಯಲು) ಬಿಡುತ್ತಿರಲಿಲ್ಲ). ಅವನು (ಬಾಲಕನು) ಹೇಳಿದನು: 'ಮಾಟಗಾರನು ಶ್ರೇಷ್ಠನೋ ಅಥವಾ ಸನ್ಯಾಸಿಯು ಶ್ರೇಷ್ಠನೋ ಎಂದು ಇಂದು ನನಗೆ ತಿಳಿಯುತ್ತದೆ'. ಅವನು ಒಂದು ಕಲ್ಲನ್ನು ತೆಗೆದುಕೊಂಡು ಹೇಳಿದನು: 'ಓ ಅಲ್ಲಾಹ್, ಒಂದು ವೇಳೆ ಸನ್ಯಾಸಿಯ ಮಾರ್ಗವು ಮಾಟಗಾರನ ಮಾರ್ಗಕ್ಕಿಂತ ನಿನಗೆ ಹೆಚ್ಚು ಇಷ್ಟವಾಗಿದ್ದರೆ, ಈ ಪ್ರಾಣಿಯನ್ನು ಕೊಂದುಹಾಕು. ಇದರಿಂದ ಜನರು (ತಮ್ಮ ದಾರಿಯಲ್ಲಿ) ನಡೆಯಬಹುದು'. ಅವನು ಕಲ್ಲನ್ನು ಎಸೆದನು. ಅದು ಅದನ್ನು ಕೊಂದಿತು, ಮತ್ತು ಜನರು (ತಮ್ಮ ದಾರಿಯಲ್ಲಿ) ನಡೆದರು. ಅವನು ಸನ್ಯಾಸಿಯ ಬಳಿಗೆ ಬಂದು (ನಡೆದದ್ದನ್ನು) ತಿಳಿಸಿದನು. ಆಗ ಸನ್ಯಾಸಿ ಹೇಳಿದನು: 'ಮಗೂ, ಇಂದು ನೀನು ನನಗಿಂತ ಶ್ರೇಷ್ಠನಾಗಿರುವೆ. ನಿನ್ನ ವಿಷಯವು ನಾನು ನೋಡುತ್ತಿರುವಂತೆ ದೊಡ್ಡ ಮಟ್ಟವನ್ನು ತಲುಪಿದೆ. ಖಂಡಿತವಾಗಿಯೂ ನಿನ್ನನ್ನು ಪರೀಕ್ಷಿಸಲಾಗುವುದು. ಒಂದು ವೇಳೆ ನಿನ್ನನ್ನು ಪರೀಕ್ಷಿಸಲಾದರೆ, ನನ್ನ ಬಗ್ಗೆ ತಿಳಿಸಬೇಡ'. ಆ ಬಾಲಕನು ಹುಟ್ಟು ಕುರುಡರನ್ನು ಮತ್ತು ಕುಷ್ಠರೋಗಿಗಳನ್ನು ಗುಣಪಡಿಸುತ್ತಿದ್ದನು ಇತರ ಎಲ್ಲಾ ರೋಗಗಳಿಗೂ ಜನರಿಗೆ ಚಿಕಿತ್ಸೆ ನೀಡುತ್ತಿದ್ದನು (ಅಲ್ಲಾಹನ ಅನುಮತಿಯೊಂದಿಗೆ). ರಾಜನ ಒಬ್ಬ ಆಸ್ಥಾನಿಕನಿಗೆ ಈ ಬಾಲಕನ ಬಗ್ಗೆ ತಿಳಿಯಿತು. ಅವನು ಕುರುಡನಾಗಿದ್ದನು. ಅವನು ಅನೇಕ ಉಡುಗೊರೆಗಳೊಂದಿಗೆ ಬಾಲಕನ ಬಳಿಗೆ ಬಂದು ಹೇಳಿದನು: 'ಒಂದು ವೇಳೆ ನೀನು ನನ್ನನ್ನು ಗುಣಪಡಿಸಿದರೆ ಇಲ್ಲಿರುವುದೆಲ್ಲವೂ ನಿನಗೆ ಸೇರುತ್ತದೆ'. ಬಾಲಕ ಹೇಳಿದನು: 'ನಾನು ಯಾರನ್ನೂ ಗುಣಪಡಿಸುವುದಿಲ್ಲ, ಅಲ್ಲಾಹು ಮಾತ್ರ ಗುಣಪಡಿಸುತ್ತಾನೆ. ಒಂದು ವೇಳೆ ನೀವು ಅಲ್ಲಾಹನಲ್ಲಿ ವಿಶ್ವಾಸವಿಟ್ಟರೆ, ನಾನು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ. ಆಗ ಅವನು ನಿಮ್ಮನ್ನು ಗುಣಪಡಿಸುತ್ತಾನೆ'. ಆಸ್ಥಾನಿಕನು ಅಲ್ಲಾಹನಲ್ಲಿ ವಿಶ್ವಾಸವಿಟ್ಟನು, ಆಗ ಅಲ್ಲಾಹು ಅವನನ್ನು ಗುಣಪಡಿಸಿದನು. ಅವನು ರಾಜನ ಬಳಿಗೆ ಬಂದು, ಮೊದಲು ಕುಳಿತುಕೊಳ್ಳುತ್ತಿದ್ದಂತೆಯೇ ಕುಳಿತುಕೊಂಡನು. ರಾಜನು ಕೇಳಿದನು: 'ನಿನ್ನ ದೃಷ್ಟಿಯನ್ನು ನಿನಗೆ ಹಿಂದಿರುಗಿಸಿದವರು ಯಾರು?' ಅವನು ಹೇಳಿದನು: 'ನನ್ನ ಪರಿಪಾಲಕ'. ರಾಜನು ಕೇಳಿದನು: 'ನನ್ನ ಹೊರತು ನಿನಗೆ ಬೇರೆ ಪರಿಪಾಲಕನಿದ್ದಾನೆಯೇ?' ಅವನು ಹೇಳಿದನು: 'ನನ್ನ ಮತ್ತು ತಮ್ಮ ಪರಿಪಾಲಕ ಅಲ್ಲಾಹನಾಗಿದ್ದಾನೆ'. ಆಗ ಅವನು (ರಾಜ) ಅವನನ್ನು ಹಿಡಿದು, ಬಾಲಕನ ಬಗ್ಗೆ ತಿಳಿಸುವವರೆಗೆ ಚಿತ್ರಹಿಂಸೆ ನೀಡಿದನು. ಬಾಲಕನನ್ನು ಕರೆತರಲಾಯಿತು. ರಾಜನು ಹೇಳಿದನು: 'ಮಗೂ, ನಿನ್ನ ಮಾಟಗಾರಿಕೆಯು ಎಷ್ಟು ಮುಂದುವರೆದಿದೆ ಎಂದರೆ ನೀನು ಹುಟ್ಟು ಕುರುಡರನ್ನು ಮತ್ತು ಕುಷ್ಠರೋಗಿಗಳನ್ನು ಗುಣಪಡಿಸುತ್ತಿರುವೆ, ಮತ್ತು ನೀನು ಇಂತಿಂತಹದ್ದನ್ನು ಮಾಡುತ್ತಿರುವೆ'. ಅವನು (ಬಾಲಕ) ಹೇಳಿದನು: 'ನಾನು ಯಾರನ್ನೂ ಗುಣಪಡಿಸುವುದಿಲ್ಲ, ಅಲ್ಲಾಹು ಮಾತ್ರ ಗುಣಪಡಿಸುತ್ತಾನೆ'. ಆಗ (ರಾಜ) ಅವನನ್ನು ಹಿಡಿದು, ಸನ್ಯಾಸಿಯ ಬಗ್ಗೆ ತಿಳಿಸುವವರೆಗೆ ಅವನಿಗೆ ಚಿತ್ರಹಿಂಸೆ ನೀಡಿದನು. ಸನ್ಯಾಸಿಯನ್ನು ಕರೆತರಲಾಯಿತು. ಅವನೊಂದಿಗೆ ಹೇಳಲಾಯಿತು: 'ನಿನ್ನ ಧರ್ಮವನ್ನು ಬಿಟ್ಟು ಬಾ'. ಅವನು (ಧರ್ಮವನ್ನು ಬಿಡಲು) ನಿರಾಕರಿಸಿದನು. ಆಗ ರಾಜನು ಗರಗಸವನ್ನು ತರಿಸಿದನು. ಗರಗಸವನ್ನು ಅವನ ತಲೆಯ ಮಧ್ಯಭಾಗದಲ್ಲಿ ಇರಿಸಿ, ಅವನನ್ನು ಎರಡು ತುಂಡುಗಳಾಗುವವರೆಗೆ ಸೀಳಿದನು. ನಂತರ ರಾಜನ ಆಸ್ಥಾನಿಕನನ್ನು ಕರೆತರಲಾಯಿತು. ಅವನೊಂದಿಗೆ ಹೇಳಲಾಯಿತು: 'ನಿನ್ನ ಧರ್ಮವನ್ನು ಬಿಟ್ಟು ಬಾ'. ಅವನು ನಿರಾಕರಿಸಿದನು. ಆಗ ಗರಗಸವನ್ನು ಅವನ ತಲೆಯ ಮಧ್ಯಭಾಗದಲ್ಲಿ ಇರಿಸಿ, ಅವನನ್ನು ಎರಡು ತುಂಡುಗಳಾಗುವವರೆಗೆ ಸೀಳಿದನು. ನಂತರ ಬಾಲಕನನ್ನು ಕರೆತರಲಾಯಿತು. ಅವನೊಂದಿಗೆ ಹೇಳಲಾಯಿತು: 'ನಿನ್ನ ಧರ್ಮವನ್ನು ಬಿಟ್ಟು ಬಾ'. ಅವನು ನಿರಾಕರಿಸಿದನು. ಆಗ ರಾಜನು ಅವನನ್ನು ಮೂರರಿಂದ ಹತ್ತರಷ್ಟಿರುವ ತನ್ನ ಸಹಚರರ (ಸೈನಿಕರ) ವಶಕ್ಕೆ ಒಪ್ಪಿಸಿದನು. ರಾಜ ಹೇಳಿದನು: 'ಇವನನ್ನು ಇಂಥಿಂಥ ಬೆಟ್ಟಕ್ಕೆ ಕರೆದೊಯ್ಯಿರಿ. ಅವನನ್ನು ಬೆಟ್ಟದ ಮೇಲೆ ಹತ್ತಿಸಿ. ನೀವು ಅದರ ಶಿಖರವನ್ನು ತಲುಪಿದಾಗ, ಒಂದು ವೇಳೆ ಅವನು ತನ್ನ ಧರ್ಮದಿಂದ ಹಿಂದೆ ಬಂದರೆ (ಸರಿ), ಇಲ್ಲದಿದ್ದರೆ ಅವನನ್ನು ಕೆಳಗೆ ಎಸೆಯಿರಿ'. ಅವರು ಅವನನ್ನು ಕರೆದೊಯ್ದು ಬೆಟ್ಟದ ಮೇಲೆ ಹತ್ತಿಸಿದರು. ಆಗ ಬಾಲಕನು ಹೇಳಿದನು: 'ಓ ಅಲ್ಲಾಹ್, ನೀನು ಬಯಸಿದ ರೀತಿಯಲ್ಲಿ ಅವರಿಂದ ನನ್ನನ್ನು ಕಾಪಾಡು'. ಆಗ ಬೆಟ್ಟವು ಅವರೊಂದಿಗೆ ಕಂಪಿಸಿತು, ಅವರು (ಸೈನಿಕರು) ಕೆಳಗೆ ಬಿದ್ದರು. ಬಾಲಕ ನಡೆದುಕೊಂಡು ರಾಜನ ಬಳಿಗೆ ಬಂದನು. ರಾಜನು ಕೇಳಿದನು: 'ನಿನ್ನ ಸಹಚರರು (ಸೈನಿಕರು) ಏನಾದರು?'. ಅವನು ಹೇಳಿದನು: 'ಅಲ್ಲಾಹು ಅವರಿಂದ ನನ್ನನ್ನು ಕಾಪಾಡಿದನು'. ಆಗ ರಾಜನು ಅವನನ್ನು (ಬೇರೆ) ಕೆಲವು ಸಹಚರರ ವಶಕ್ಕೆ ಒಪ್ಪಿಸಿದನು. ಅವನು ಹೇಳಿದನು: 'ಇವನನ್ನು ಕರೆದೊಯ್ದು ಒಂದು ಸಣ್ಣ ದೋಣಿಯಲ್ಲಿ ಹತ್ತಿಸಿ. ಅವನನ್ನು ಸಮುದ್ರದ ಮಧ್ಯಕ್ಕೆ ಕರೆದೊಯ್ಯಿರಿ. ಒಂದು ವೇಳೆ ಅವನು ತನ್ನ ಧರ್ಮದಿಂದ ಹಿಂದೆ ಬಂದರೆ (ಸರಿ), ಇಲ್ಲದಿದ್ದರೆ ಅವನನ್ನು ಸಮುದ್ರಕ್ಕೆ ಎಸೆಯಿರಿ'. ಅವರು ಅವನನ್ನು ಕರೆದೊಯ್ದರು. ಆಗ ಬಾಲಕನು ಹೇಳಿದನು: 'ಓ ಅಲ್ಲಾಹ್, ನೀನು ಬಯಸಿದ ರೀತಿಯಲ್ಲಿ ಅವರಿಂದ ನನ್ನನ್ನು ಕಾಪಾಡು'. ಆಗ ದೋಣಿ ಅವರೊಂದಿಗೆ ಮಗುಚಿಬಿದ್ದು, ಅವರು (ಸೈನಿಕರು) ಮುಳುಗಿಹೋದರು. ಬಾಲಕ ನಡೆದುಕೊಂಡು ರಾಜನ ಬಳಿಗೆ ಬಂದನು. ರಾಜನು ಕೇಳಿದನು: 'ನಿನ್ನ ಸಹಚರರು (ಸೈನಿಕರು) ಏನಾದರು?'. ಅವನು ಹೇಳಿದನು: 'ಅಲ್ಲಾಹು ಅವರಿಂದ ನನ್ನನ್ನು ಕಾಪಾಡಿದನು'. ಬಾಲಕನು ರಾಜನಿಗೆ ಹೇಳಿದನು: 'ನೀವು ನಾನು ಹೇಳುವಂತೆ ಮಾಡುವವರೆಗೆ ನನ್ನನ್ನು ಕೊಲ್ಲಲು ನಿಮಗೆ ಸಾಧ್ಯವಿಲ್ಲ'. ರಾಜನು ಕೇಳಿದನು: 'ಏನು ಮಾಡಬೇಕು?'. ಬಾಲಕನು ಹೇಳಿದನು: 'ನೀವು ಜನರನ್ನು ಒಂದು ಬಯಲು ಪ್ರದೇಶದಲ್ಲಿ ಒಟ್ಟು ಸೇರಿಸಿರಿ, ಮತ್ತು ನನ್ನನ್ನು ಒಂದು ಮರದ ಕಾಂಡದ ಮೇಲೆ ಶಿಲುಬೆಗೇರಿಸಿರಿ. ನಂತರ ನನ್ನ ಬತ್ತಳಿಕೆಯಿಂದ ಒಂದು ಬಾಣವನ್ನು ತೆಗೆದುಕೊಳ್ಳಿರಿ. ನಂತರ ಬಾಣವನ್ನು ಬಿಲ್ಲಿನ ನಡುಭಾಗದಲ್ಲಿ ಇರಿಸಿರಿ. ನಂತರ, "ಈ ಬಾಲಕನ ಪರಿಪಾಲಕನಾದ ಅಲ್ಲಾಹನ ಹೆಸರಿನಿಂದ" ಎಂದು ಹೇಳಿರಿ. ನಂತರ ನನ್ನ ಮೇಲೆ ಬಾಣವನ್ನು ಪ್ರಯೋಗಿಸಿರಿ. ನೀವು ಹೀಗೆ ಮಾಡಿದರೆ, ನಿಮಗೆ ನನ್ನನ್ನು ಕೊಲ್ಲಬಹುದು'. ರಾಜನು ಜನರನ್ನು ಒಂದು ಬಯಲಿನಲ್ಲಿ ಒಟ್ಟುಗೂಡಿಸಿದನು, ಮತ್ತು ಬಾಲಕನನ್ನು ಒಂದು ಮರದ ಕಾಂಡದ ಮೇಲೆ ಶಿಲುಬೆಗೇರಿಸಿದನು. ನಂತರ ಅವನ ಬತ್ತಳಿಕೆಯಿಂದ ಒಂದು ಬಾಣವನ್ನು ತೆಗೆದುಕೊಂಡನು. ನಂತರ ಬಾಣವನ್ನು ಬಿಲ್ಲಿನ ಮಧ್ಯದಲ್ಲಿ ಇರಿಸಿದನು. ನಂತರ, "ಈ ಬಾಲಕನ ಪರಿಪಾಲಕನಾದ ಅಲ್ಲಾಹನ ಹೆಸರಿನಿಂದ" ಎಂದು ಹೇಳಿದನು. ನಂತರ ಅವನ ಮೇಲೆ ಬಾಣವನ್ನು ಪ್ರಯೋಗಿಸಿದನು. ಬಾಣವು ಅವನ ಕಿವಿಯ ಬಳಿ ಬಡಿಯಿತು. ಅವನು ಬಾಣ ಬಡಿದ ಸ್ಥಳದಲ್ಲಿ, ತನ್ನ ಕಿವಿಯ ಬಳಿ ಕೈಯಿಟ್ಟುಕೊಂಡು ಪ್ರಾಣಬಿಟ್ಟನು. ಆಗ ಜನರು (ಜೋರಾಗಿ) ಹೇಳಿದರು: 'ನಾವು ಈ ಬಾಲಕನ ಪರಿಪಾಲಕನಲ್ಲಿ ವಿಶ್ವಾಸವಿಟ್ಟೆವು! ನಾವು ಈ ಬಾಲಕನ ಪರಿಪಾಲಕನಲ್ಲಿ ವಿಶ್ವಾಸವಿಟ್ಟೆವು! ನಾವು ಈ ಬಾಲಕನ ಪರಿಪಾಲಕನಲ್ಲಿ ವಿಶ್ವಾಸವಿಟ್ಟೆವು!'. ಆಗ ರಾಜನ ಬಳಿಗೆ ಬಂದು ಹೇಳಲಾಯಿತು: 'ನೀನು ಯಾವುದಕ್ಕೆ ಹೆದರುತ್ತಿದ್ದೆಯೋ ಅದನ್ನು ನೋಡಿದೆಯಾ? ಅಲ್ಲಾಹನಾಣೆ, ನೀನು ಹೆದರಿದ್ದು ನಿನಗೆ ಸಂಭವಿಸಿದೆ. ಜನರು ವಿಶ್ವಾಸವಿಟ್ಟಿದ್ದಾರೆ'. ಜನರೆಲ್ಲರೂ ಬಾಲಕನನ್ನು ಅನುಸರಿಸಿ ಅವನ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಡಬಹುದೆಂದು ಅವನು ಭಯಪಟ್ಟಿದ್ದನು. ಆಗ ಅವನು ರಸ್ತೆಗಳ ದ್ವಾರಗಳಲ್ಲಿ ದೊಡ್ಡ ಗಾತ್ರದ ಉದ್ದವಾದ ಹೊಂಡಗಳನ್ನು ತೋಡಲು ಆದೇಶಿಸಿದನು. ಅದರಲ್ಲಿ ಬೆಂಕಿಯನ್ನು ಧಗಧಗನೆ ಉರಿಸಲಾಯಿತು. ರಾಜ ಹೇಳಿದನು: 'ಯಾರು ಅವರ ಧರ್ಮದಿಂದ ಹಿಂದೆ ಬರುವುದಿಲ್ಲವೋ, ಅವರನ್ನು ಇದರಲ್ಲಿ ಎಸೆಯಿರಿ'. ಅವರು (ರಾಜನ ಸೈನಿಕರು) ರಾಜ ಹೇಳಿದಂತೆಯೇ ಮಾಡಿದರು. ಕೊನೆಗೆ ಒಬ್ಬ ಮಹಿಳೆ ಬಂದಳು. ಅವಳೊಂದಿಗೆ ಅವಳ ಮಗುವೂ ಇತ್ತು. ಅವಳು ಅದರಲ್ಲಿ (ಬೆಂಕಿಯಲ್ಲಿ) ಬೀಳಲು ಹಿಂದೇಟು ಹಾಕಿ, ಆ ಸ್ಥಳದಲ್ಲೇ ನಿಂತಳು ಮತ್ತು ಬೆಂಕಿಯನ್ನು ಪ್ರವೇಶಿಸಲು ಇಷ್ಟಪಡಲಿಲ್ಲ. ಆಗ ಅವಳ ಮಗು ಅವಳಿಗೆ ಹೇಳಿತು: 'ಅಮ್ಮಾ, ತಾಳ್ಮೆಯಿಂದಿರು. ಖಂಡಿತವಾಗಿಯೂ ನೀನು ಸತ್ಯದ ಮೇಲಿರುವೆ!' ".

ಹದೀಸಿನ ಪ್ರಯೋಜನಗಳು

  1. 'ಔಲಿಯಾ' (ಅಲ್ಲಾಹನ ಇಷ್ಟದಾಸರು) ಗಳ 'ಕರಾಮತ್' (ಪವಾಡಗಳು) ಗಳನ್ನು ದೃಢೀಕರಿಸಲಾಗಿದೆ. ಬಾಲಕನು ಕಲ್ಲೆಸೆದು ದೊಡ್ಡ ಪ್ರಾಣಿಯನ್ನು ಕೊಂದದ್ದು, ಬಾಲಕನ ಪ್ರಾರ್ಥನೆಯು ಎರಡು ಬಾರಿ ಸ್ವೀಕರಿಸಲ್ಪಟ್ಟದ್ದು, ಮತ್ತು ಹಸುಗೂಸು ಮಾತನಾಡಿದ್ದು ಇವುಗಳಲ್ಲಿ ಸೇರಿವೆ.
  2. ಅಲ್ಲಾಹನ ಮೇಲೆ ಭರವಸೆಯಿಟ್ಟವರಿಗೆ ಸಹಾಯ ಸಿಗುತ್ತದೆ ಎಂದು ತಿಳಿಸಲಾಗಿದೆ.
  3. ತಾಳ್ಮೆ ಮತ್ತು ಧರ್ಮದ ಮೇಲೆ ಸ್ಥಿರವಾಗಿರುವುದರ ಶ್ರೇಷ್ಠತೆಯನ್ನು ವಿವರಿಸಲಾಗಿದೆ.
  4. ಚಿಕ್ಕ ವಯಸ್ಸಿನಲ್ಲಿ ಕಲಿಯುವುದರ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ; ಏಕೆಂದರೆ ಕಿರಿಯರು ಸಾಮಾನ್ಯವಾಗಿ ಹಿರಿಯರಿಗಿಂತ ಬೇಗನೇ ಕಂಠಪಾಠ ಮಾಡುತ್ತಾರೆ.
  5. ಬಾಲಕನ ವಿಶ್ವಾಸದ ಶಕ್ತಿಯನ್ನು, ಮತ್ತು ಅವನು ತನ್ನ ವಿಶ್ವಾಸದಿಂದ ವಿಚಲಿತನಾಗಲಿಲ್ಲ ಅಥವಾ ಬದಲಾಗಲಿಲ್ಲ ಎಂದು ತಿಳಿಸಲಾಗಿದೆ.
  6. ಕಷ್ಟದಲ್ಲಿರುವವನು ಪ್ರಾರ್ಥಿಸಿದಾಗ ಅವನ ಪ್ರಾರ್ಥನೆಗೆ ಅಲ್ಲಾಹು ಉತ್ತರ ನೀಡುತ್ತಾನೆಂದು ತಿಳಿಸಲಾಗಿದೆ.
  7. ಮುಸ್ಲಿಮರ ಸಾಮೂಹಿಕ ಹಿತಾಸಕ್ತಿಗಾಗಿ ತನ್ನನ್ನು ತಾನೇ ಅಪಾಯಕ್ಕೊಡ್ಡಲು ಮುಸ್ಲಿಮನಿಗೆ ಅನುಮತಿಯಿದೆ. ಈ ಬಾಲಕನು ರಾಜನಿಗೆ ತನ್ನನ್ನು ಕೊಲ್ಲುವ ಮತ್ತು ತನ್ನನ್ನು ತಾನು ನಾಶಪಡಿಸಿಕೊಳ್ಳುವ ವಿಧಾನವನ್ನು ತಿಳಿಸಿದನು. ಆ ವಿಧಾನವೇನೆಂದರೆ, ಅವನ ಬತ್ತಳಿಕೆಯಿಂದ ಒಂದು ಬಾಣವನ್ನು ತೆಗೆದುಕೊಂಡು ಅದನ್ನು ಬಿಲ್ಲಿನ ನಡುಭಾಗದಲ್ಲಿಟ್ಟು "ಈ ಬಾಲಕನ ಪರಿಪಾಲಕನಾದ ಅಲ್ಲಾಹನ ಹೆಸರಿನಿಂದ" ಎಂದು ಹೇಳುವುದು.
  8. ಯುದ್ಧ ಮುಂತಾದ ಸಂದರ್ಭಗಳಲ್ಲಿ, ಮತ್ತು ವಿನಾಶದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕಾಗಿ ಸುಳ್ಳು ಹೇಳಲು ಅನುಮತಿಯಿದೆ (ಉದಾ: ಸನ್ಯಾಸಿಯು ಬಾಲಕನಿಗೆ ನೀಡಿದ ಸಲಹೆ).
  9. ಸತ್ಯವಿಶ್ವಾಸಿಯನ್ನು ಅವನ ವಿಶ್ವಾಸದ ಸತ್ಯತೆ ಮತ್ತು ಸತ್ಯವನ್ನು ಹೇಳುವುದರಲ್ಲಿನ ಸ್ಥಿರತೆಯ ವಿಷಯದಲ್ಲಿ ಪರೀಕ್ಷಿಸಲಾಗುತ್ತದೆ. ಅದು ಅವನ ಪ್ರಾಣವನ್ನು ತೆಗೆಯುವ ಹಂತಕ್ಕೆ ತಲುಪಿದರೂ ಸಹ.
  10. ಅಲ್ಲಾಹನ ಕಡೆಗೆ ಕರೆ ನೀಡುವ ಮಾರ್ಗದಲ್ಲಿ ಮತ್ತು ಸತ್ಯವನ್ನು ಬಹಿರಂಗಪಡಿಸುವ ವಿಷಯದಲ್ಲಿ ತ್ಯಾಗ ಮಾಡುವುದನ್ನು ತಿಳಿಸಲಾಗಿದೆ.
  11. ದಾಸರ ಹೃದಯಗಳು ಅಲ್ಲಾಹನ ಕೈಯಲ್ಲಿವೆ. ಅವನು ಇಚ್ಛಿಸಿದವರಿಗೆ ಮಾರ್ಗದರ್ಶನ ನೀಡುತ್ತಾನೆ ಮತ್ತು ಅವನು ಇಚ್ಛಿಸಿದವರನ್ನು ದಾರಿತಪ್ಪಿಸುತ್ತಾನೆ. ಮಾಟಗಾರನ ಆಶ್ರಯದಲ್ಲಿ ಮತ್ತು ದಾರಿತಪ್ಪಿದ ರಾಜನ ಆರೈಕೆಯಲ್ಲಿದ್ದರೂ ಬಾಲಕನು ಸನ್ಮಾರ್ಗವನ್ನು ಪಡೆದನು.
  12. ಸರಿಯಾದುದು ಏನೆಂದು ಅರಿಯಲು ಮತ್ತು ಖಾತರಿಪಡಿಸಲು ಒಂದು ಚಿಹ್ನೆಯನ್ನು ತೋರಿಸುವಂತೆ ಅಲ್ಲಾಹನಲ್ಲಿ ಕೇಳಲು ಅನುಮತಿಯಿದೆ.
  13. ಸತ್ಯವಿಶ್ವಾಸಿಗಳು ಅಲ್ಲಾಹು ತಮಗೆ ನೀಡಿದ ಮತ್ತು ಅನುಗ್ರಹಿಸಿದ ಎಲ್ಲವನ್ನೂ ಅವನ ಧರ್ಮದ ಸೇವೆಗಾಗಿ ಮತ್ತು ಅವನ ಮಾರ್ಗದ ಕಡೆಗೆ ಕರೆ ನೀಡಲು ಬಳಸುತ್ತಾರೆ.
  14. ವಿನಾಶದ ಕಾರಣಗಳು ಅಲ್ಲಾಹನ ಕೈಯಲ್ಲಿವೆ. ಅವನು ಬಯಸಿದರೆ ಅವುಗಳನ್ನು ಜಾರಿಗೊಳಿಸುತ್ತಾನೆ, ಮತ್ತು ಅವನು ಬಯಸಿದರೆ ಅವುಗಳನ್ನು ತಡೆಹಿಡಿಯುತ್ತಾನೆ.
  15. ಸತ್ಯನಿಷೇಧಿಗಳಿಗೆ ವಿಶ್ವಾಸವಿಡಲು ಪುರಾವೆಗಳು ಮತ್ತು ಸಾಕ್ಷ್ಯಗಳ ಕೊರತೆಯಿರುವುದಿಲ್ಲ. ಬದಲಿಗೆ ಅವರ ಸತ್ಯನಿಷೇಧಕ್ಕೆ ಕಾರಣ ಅವರ ಹಠಮಾರಿತನ ಮತ್ತು ಅಹಂಕಾರವಾಗಿದೆ.
  16. ದಬ್ಬಾಳಿಕೆಗಾರರು ಮತ್ತು ಅಕ್ರಮಿಗಳು ಇಹಲೋಕದ ಸುಖಭೋಗಗಳಲ್ಲಿ ಮುಂದುವರಿಯಲು ಎಲ್ಲಾ ಜನರನ್ನು ಕೊಲ್ಲಲು ಕೂಡ ಸಿದ್ಧರಿರುತ್ತಾರೆ.
  17. ಅಲ್ಲಾಹು ಅಕ್ರಮಿಗಳನ್ನು ಅವರು ನಿರೀಕ್ಷಿಸದ ರೀತಿಯಲ್ಲಿ ಶಿಕ್ಷಿಸುತ್ತಾನೆ. ಬಾಲಕನ ಸ್ಥಿರತೆ, ಅವನ ಕರೆಯ ಸತ್ಯತೆ ಮತ್ತು ಅಲ್ಲಾಹನ ವಿಷಯದಲ್ಲಿ ಅವನು ಯಾರ ಆಕ್ಷೇಪಣೆಗೂ ಹೆದರದಿರುವುದನ್ನು ಕಂಡಾಗ ಜನರು ಬಾಲಕನ ಪರಿಪಾಲಕನಲ್ಲಿ ವಿಶ್ವಾಸವಿಟ್ಟರು.
  18. ಮಸೀಹ್ (ಈಸಾ - ಅವರ ಮೇಲೆ ಶಾಂತಿಯಿರಲಿ) ರ ಹೊರತಾಗಿ ತೊಟ್ಟಿಲಲ್ಲಿ ಮಾತನಾಡಿದ ಇತರರೂ ಇದ್ದಾರೆ. "ತೊಟ್ಟಿಲಲ್ಲಿ ಮೂವರು ಮಾತ್ರ ಮಾತನಾಡಿದ್ದಾರೆ…" ಎಂಬ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾತನ್ನು ಈ ಹದೀಸ್ ವಿವರಿಸುತ್ತದೆ, ಅವರು ಉಲ್ಲೇಖಿಸಿದ್ದು ಮತ್ತು ಎಣಿಸಿದ್ದು ಬನೂ ಇಸ್ರಾಯೀಲ್ (ಇಸ್ರಾಯೇಲ್ ಮಕ್ಕಳು) ಗೆ ಮಾತ್ರ ಸೀಮಿತವಾಗಿದೆ, ಇತರರಿಗೆ ಅಲ್ಲ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ ಥಾಯ್ الأسامية الأمهرية الهولندية الغوجاراتية الدرية الرومانية المجرية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ