عَنْ أَنَسٍ رَضيَ اللهُ عنه قَالَ:
مِنَ السُّنَّةِ إِذَا قَالَ الْمُؤَذِّنُ فِي أَذَانِ الْفَجْرِ حَيَّ عَلَى الْفَلَاحِ، قَالَ: الصَّلَاةُ خَيْرٌ مِنَ النَّوْمِ.
[صحيح] - [رواه ابن خزيمة والدارقطني والبيهقي] - [صحيح ابن خزيمة: 386]
المزيــد ...
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
"ಫಜ್ರ್‌ನ ಅಝಾನ್‌ನಲ್ಲಿ ಮುಅದ್ದಿನ್ (ಅಝಾನ್ ಹೇಳುವವನು) 'ಹಯ್ಯ ಅಲಲ್-ಫಲಾಹ್' ಎಂದು ಹೇಳಿದಾಗ, 'ಅಸ್ಸಲಾತು ಖೈರುನ್ ಮಿನನ್ನೌಮ್' (ನಿದ್ರೆಗಿಂತ ನಮಾಝ್ ಉತ್ತಮವಾಗಿದೆ) ಎಂದು ಹೇಳುವುದು ಸುನ್ನತ್‌ನ ಭಾಗವಾಗಿದೆ".
[صحيح] - [رواه ابن خزيمة والدارقطني والبيهقي] - [صحيح ابن خزيمة - 386]
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಮುಅದ್ದಿನ್ ವಿಶೇಷವಾಗಿ ಫಜ್ರ್‌ನ ಅಝಾನ್‌ನಲ್ಲಿ, 'ಹಯ್ಯ ಅಲಲ್-ಫಲಾಹ್' (ಯಶಸ್ಸಿನ ಕಡೆಗೆ ಬನ್ನಿ) ಎಂದು ಹೇಳಿದ ನಂತರ, 'ಅಸ್ಸಲಾತು ಖೈರುನ್ ಮಿನನ್ನೌಮ್' (ನಮಾಝ್ ನಿದ್ರೆಗಿಂತ ಉತ್ತಮವಾಗಿದೆ) ಎಂದು ಹೇಳುವುದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸುನ್ನತ್‌ನಲ್ಲಿ ಸ್ಥಾಪಿಸಿದ ವಿಷಯಗಳಲ್ಲಿ ಒಂದಾಗಿದೆ.