عَنْ عُقْبَةَ بْنَ عَامِرٍ الْجُهَنِيَّ رضي الله عنه قَالَ:
ثَلَاثُ سَاعَاتٍ كَانَ رَسُولُ اللهِ صَلَّى اللهُ عَلَيْهِ وَسَلَّمَ يَنْهَانَا أَنْ نُصَلِّيَ فِيهِنَّ، أَوْ أَنْ نَقْبُرَ فِيهِنَّ مَوْتَانَا: حِينَ تَطْلُعُ الشَّمْسُ بَازِغَةً حَتَّى تَرْتَفِعَ، وَحِينَ يَقُومُ قَائِمُ الظَّهِيرَةِ حَتَّى تَمِيلَ الشَّمْسُ، وَحِينَ تَضَيَّفُ الشَّمْسُ لِلْغُرُوبِ حَتَّى تَغْرُبَ.
[صحيح] - [رواه مسلم] - [صحيح مسلم: 831]
المزيــد ...
ಉಕ್ಬ ಬಿನ್ ಆಮಿರ್ ಜುಹನಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಮೂರು ಸಮಯಗಳು. ಆ ಸಮಯಗಳಲ್ಲಿ ನಮಾಝ್ ಮಾಡುವುದನ್ನು ಅಥವಾ ನಮ್ಮ ಮೃತರನ್ನು ಸಮಾಧಿ ಮಾಡುವುದನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ನಿಷೇಧಿಸುತ್ತಿದ್ದರು: ಸೂರ್ಯನು ಸರಿಯಾಗಿ ಉದಯಿಸಲು ಪ್ರಾರಂಭಿಸಿ ಅದು (ಒಂದು ಈಟಿಯಷ್ಟು) ಎತ್ತರಕ್ಕೆ ಏರುವವರೆಗೆ. ನಡು ಮಧ್ಯಾಹ್ನ ಸೂರ್ಯನು ನೆತ್ತಿಯ ಮೇಲೆ ನಿಂತು ಅದು ಪಶ್ಚಿಮಕ್ಕೆ ವಾಲುವವರೆಗೆ. ಸೂರ್ಯನು ಅಸ್ತಮಿಸಲು ವಾಲಿಕೊಂಡು ಅದು ಸಂಪೂರ್ಣವಾಗಿ ಮುಳುಗುವವರೆಗೆ.
[صحيح] - [رواه مسلم] - [صحيح مسلم - 831]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಗಲಿನ ಮೂರು ಸಮಯಗಳಲ್ಲಿ ಐಚ್ಛಿಕ (ನಫಿಲ್) ನಮಾಝ್ ಮಾಡುವುದನ್ನು ಅಥವಾ ಮೃತರನ್ನು ಸಮಾಧಿ ಮಾಡುವುದನ್ನು ನಿಷೇಧಿಸಿದರು: ಮೊದಲ ಸಮಯ: ಸೂರ್ಯನು ಸರಿಯಾಗಿ ಉದಯಿಸುವಾಗ, ಅಂದರೆ ಅದರ ಉದಯದ ಆರಂಭದಿಂದ ಅದು ಒಂದು ಈಟಿಯಷ್ಟು ಎತ್ತರಕ್ಕೆ ಏರುವವರೆಗೆ. ಇದನ್ನು ಸುಮಾರು ಹದಿನೈದು ನಿಮಿಷಗಳೆಂದು ಅಂದಾಜಿಸಲಾಗಿದೆ. ಎರಡನೇ ಸಮಯ: ಸೂರ್ಯನು ಆಕಾಶದ ಮಧ್ಯಭಾಗದಲ್ಲಿದ್ದಾಗ. ಆಗ ಅದಕ್ಕೆ ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೆರಳು ಇರುವುದಿಲ್ಲ. ಅದು ಆಕಾಶದ ಮಧ್ಯಭಾಗದಿಂದ ಸರಿಯುವವರೆಗೆ ಮತ್ತು ಪೂರ್ವ ದಿಕ್ಕಿನಲ್ಲಿ ನೆರಳು ಕಾಣಿಸಿಕೊಳ್ಳುವವರೆಗೆ. ಅಂದರೆ ಝುಹ್ರ್ ನಮಾಝ್‌ನ ಸಮಯ ಪ್ರಾರಂಭವಾಗುವವರೆಗೆ. ಇದು ಅಲ್ಪಾವಧಿಯಾಗಿದೆ. ಇದನ್ನು ಸುಮಾರು ಐದು ನಿಮಿಷಗಳೆಂದು ಅಂದಾಜಿಸಲಾಗಿದೆ. ಮೂರನೇ ಸಮಯ: ಸೂರ್ಯನು ಅಸ್ತಮಿಸಲು ವಾಲಿಕೊಂಡು ಪ್ರಾರಂಭಿಸಿದಾಗಿನಿಂದ ಅದು ಸಂಪೂರ್ಣವಾಗಿ ಮುಳುಗುವವರೆಗೆ.