عن أَبِي مُوسَى الأَشْعَرِيِّ رضي الله عنه: أَنَّ رَسُولَ اللهِ صلى الله عليه وسلم قَالَ:
«مَنْ صَلَّى الْبَرْدَيْنِ دَخَلَ الْجَنَّةَ»
[صحيح] - [متفق عليه] - [صحيح البخاري: 574]
المزيــد ...
ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಎರಡು ಬರದ್ (ತಂಪು) ನಮಾಝ್‌ಗಳನ್ನು ನಿರ್ವಹಿಸುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆ."
[صحيح] - [متفق عليه] - [صحيح البخاري - 574]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಎರಡು ಬರದ್ ನಮಾಝ್‌ಗಳನ್ನು ನಿರ್ವಹಿಸಲು ಪ್ರೋತ್ಸಾಹಿಸಿದ್ದಾರೆ. ಅವು ಫಜ್ರ್ ನಮಾಝ್ ಮತ್ತು ಅಸರ್ ನಮಾಝ್ ಆಗಿವೆ. ಯಾರು ಆ ನಮಾಝ್‌ಗಳನ್ನು ಅವುಗಳ ಸಮಯಗಳಲ್ಲಿ ಮತ್ತು ಸಾಮೂಹಿಕವಾಗಿ ನಿರ್ವಹಿಸುವ ಮೂಲಕ ಅವುಗಳ ಹಕ್ಕನ್ನು ಪೂರೈಸುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆಂಬ ಸುವಾರ್ತೆ ನೀಡಿದ್ದಾರೆ.