عن عائشةَ أُمِّ المُؤْمِنينَ رضي الله عنها:
أن النبي صلى الله عليه وسلم كان لا يَدع أربعا قَبل الظهر وركعتين قبل الغَدَاة.
[صحيح] - [رواه البخاري] - [صحيح البخاري: 1182]
المزيــد ...
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
"ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝುಹರ್ ನಮಾಝ್‌ಗೆ ಮೊದಲು ನಾಲ್ಕು ರಕ್ಅತ್ ನಮಾಝನ್ನು ಮತ್ತು ಫಜ್ರ್ ನಮಾಝ್‌ಗೆ ಮೊದಲು ಎರಡು ರಕ್ಅತ್ ನಮಾಝನ್ನು ತಪ್ಪದೆ ನಿರ್ವಹಿಸುತ್ತಿದ್ದರು."
[صحيح] - [رواه البخاري] - [صحيح البخاري - 1182]
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮನೆಯಲ್ಲಿ ನಫಿಲ್ (ಐಚ್ಛಿಕ) ನಮಾಝ್‌ಗಳನ್ನು ತಪ್ಪದೆ ನಿರ್ವಹಿಸುತ್ತಿದ್ದರು ಮತ್ತು ಅವುಗಳನ್ನು ಬಿಟ್ಟುಬಿಡುತ್ತಿರಲಿಲ್ಲ: ಝುಹರ್ ನಮಾಝ್‌ಗೆ ಮೊದಲು ಎರಡು ಸಲಾಂಗಳೊಂದಿಗೆ ನಾಲ್ಕು ರಕ್ಅತ್, ಮತ್ತು ಫಜ್ರ್ ನಮಾಝ್‌ಗೆ ಮೊದಲು ಎರಡು ರಕ್ಅತ್.