عَنْ أَبِي هُرَيْرَةَ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«خَيْرُ صُفُوفِ الرِّجَالِ أَوَّلُهَا، وَشَرُّهَا آخِرُهَا، وَخَيْرُ صُفُوفِ النِّسَاءِ آخِرُهَا، وَشَرُّهَا أَوَّلُهَا».
[صحيح] - [رواه مسلم] - [صحيح مسلم: 440]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಪುರುಷರ ಸಾಲುಗಳಲ್ಲಿ ಅತ್ಯುತ್ತಮವಾದುದು ಮೊದಲನೆಯ ಸಾಲು ಮತ್ತು ಅತಿಕೆಟ್ಟದು ಕೊನೆಯ ಸಾಲು. ಮಹಿಳೆಯರ ಸಾಲುಗಳಲ್ಲಿ ಅತ್ಯುತ್ತಮವಾದುದು ಕೊನೆಯ ಸಾಲು ಮತ್ತು ಅತಿಕೆಟ್ಟದು ಮೊದಲನೆಯ ಸಾಲು."
[صحيح] - [رواه مسلم] - [صحيح مسلم - 440]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಪುರುಷರು ನಮಾಝಿಗಾಗಿ ನಿಲ್ಲುವ ಸಾಲುಗಳಲ್ಲಿ ಅತ್ಯುತ್ತಮವಾದುದು ಮತ್ತು ಅತಿಹೆಚ್ಚು ಪ್ರತಿಫಲವಿರುವುದು ಮೊದಲನೆಯ ಸಾಲು. ಏಕೆಂದರೆ, ಈ ಸಾಲಿನಲ್ಲಿರುವವರು ಇಮಾಮರಿಗೆ ಹತ್ತಿರವಾಗಿರುತ್ತಾರೆ, ಅವರ ಪಠಣವನ್ನು ಆಲಿಸುತ್ತಾರೆ ಮತ್ತು ಮಹಿಳೆಯರಿಂದ ದೂರವಿರುತ್ತಾರೆ. ಅವುಗಳಲ್ಲಿ ಅತಿಕೆಟ್ಟದು, ಅತ್ಯಂತ ಕಡಿಮೆ ಪ್ರತಿಫಲವಿರುವುದು ಮತ್ತು ಧರ್ಮದ ಬೇಡಿಕೆಯಿಂದ ಬಹುದೂರವಿರುವುದು ಕೊನೆಯ ಸಾಲು. ಅದೇ ರೀತಿ, ಮಹಿಳೆಯರ ಸಾಲುಗಳಲ್ಲಿ ಅತ್ಯುತ್ತಮವಾದುದು ಕೊನೆಯ ಸಾಲು. ಏಕೆಂದರೆ, ಅದು ಅವರನ್ನು ಸಂಪೂರ್ಣವಾಗಿ ಮರೆಮಾಚುತ್ತದೆ, ಪುರುಷರೊಡನೆ ಬೆರೆಯುವುದರಿಂದ, ಅವರನ್ನು ನೋಡುವುದರಿಂದ ಮತ್ತು ಅವರಿಂದ ಉಂಟಾಗುವ ಪರೀಕ್ಷೆಗಳಿಗೆ ಒಳಗಾಗುವುದರಿಂದ ಅವರು ಬಹಳ ದೂರವಿರುತ್ತಾರೆ. ಅವರಲ್ಲಿ ಮೊದಲನೆಯ ಸಾಲು ಅತಿಕೆಟ್ಟದಾಗಿದೆ. ಏಕೆಂದರೆ, ಅದು ಅವರನ್ನು ಪುರುಷರಿಗೆ ಹತ್ತಿರವಾಗಿಡುತ್ತದೆ ಮತ್ತು ಅವರನ್ನು ಪರೀಕ್ಷೆಗೆ ಒಡ್ಡಿಕೊಳ್ಳುತ್ತದೆ.