عَنْ أَبِي سَعِيدٍ الخُدْرِيِّ رَضيَ اللهُ عنهُ:
أَنَّ رَجُلًا سَمِعَ رَجُلًا يَقْرَأُ: {قُلْ هُوَ اللَّهُ أَحَدٌ} يُرَدِّدُهَا، فَلَمَّا أَصْبَحَ جَاءَ إِلَى رَسُولِ اللَّهِ صَلَّى اللهُ عَلَيْهِ وَسَلَّمَ فَذَكَرَ ذَلِكَ لَهُ، وَكَأَنَّ الرَّجُلَ يَتَقَالُّهَا، فَقَالَ رَسُولُ اللَّهِ صَلَّى اللهُ عَلَيْهِ وَسَلَّمَ: «وَالَّذِي نَفْسِي بِيَدِهِ إِنَّهَا لَتَعْدِلُ ثُلُثَ القُرْآنِ».
[صحيح] - [رواه البخاري] - [صحيح البخاري: 5013]
المزيــد ...
ಅಬೂ ಸಈದ್ ಅಲ್-ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಒಬ್ಬ ವ್ಯಕ್ತಿ "ಖುಲ್ ಹುವಲ್ಲಾಹು ಅಹದ್" (ಸೂರ ಅಲ್-ಇಖ್ಲಾಸ್) ಅನ್ನು ಪಠಿಸುತ್ತಿರುವುದನ್ನು ಮತ್ತು ಅದನ್ನೇ ಪುನರಾವರ್ತಿಸುತ್ತಿರುವುದನ್ನು ಇನ್ನೊಬ್ಬ ವ್ಯಕ್ತಿ ಕೇಳಿದರು. ಬೆಳಗಾದಾಗ, ಅವರು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು, ಅದನ್ನು ಅವರಿಗೆ ತಿಳಿಸಿದರು. ಆ ವ್ಯಕ್ತಿ ಅದನ್ನು (ಆ ಸೂರವನ್ನು ಮಾತ್ರ ಓದುವುದನ್ನು) ಕಡಿಮೆ ಎಂದು ಭಾವಿಸಿದಂತಿತ್ತು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರ ಕೈಯಲ್ಲಿ ನನ್ನ ಆತ್ಮವಿದೆಯೋ ಅವನ ಮೇಲಾಣೆ! ಖಂಡಿತವಾಗಿಯೂ ಅದು ಕುರ್‌ಆನ್‌ನ ಮೂರನೇ ಒಂದು ಭಾಗಕ್ಕೆ ಸಮಾನವಾಗಿದೆ".
[صحيح] - [رواه البخاري] - [صحيح البخاري - 5013]
ಅಬೂ ಸಈದ್ ಅಲ್-ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರು ಹೇಳುವುದೇನೆಂದರೆ, ಒಬ್ಬ ವ್ಯಕ್ತಿ ಸೂರ “ಖುಲ್ ಹುವಲ್ಲಾಹು ಅಹದ್” (ಸೂರ ಇಖ್ಲಾಸ್) ಅನ್ನು ಪಠಿಸುತ್ತಿರುವುದನ್ನು, ಮತ್ತು ಇಡೀ ರಾತ್ರಿ ಅದಕ್ಕಿಂತ ಹೆಚ್ಚಿಗೆ ಬೇರೆ ಏನನ್ನೂ ಓದದೆ ಅದನ್ನೇ ಪುನರಾವರ್ತಿಸುತ್ತಿರುವುದನ್ನು ಇನ್ನೊಬ್ಬ ವ್ಯಕ್ತಿ ಕೇಳಿದರು. ಬೆಳಗಾದಾಗ ಅವರು (ಇನ್ನೊಬ್ಬ ವ್ಯಕ್ತಿ) ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಅದನ್ನು ಅವರಿಗೆ ತಿಳಿಸಿದರು. ಅವರಿಗೆ ಅದು ಕಡಿಮೆಯೆಂದು ತೋರುತ್ತಿತ್ತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) (ಆ ವ್ಯಕ್ತಿ ಓದಿದ್ದನ್ನು) ದೃಢೀಕರಿಸುವ ಅರ್ಥದಲ್ಲಿ ಪ್ರಮಾಣ ಮಾಡುತ್ತಾ ಹೇಳಿದರು: “ಯಾರ ಕೈಯಲ್ಲಿ ನನ್ನ ಆತ್ಮವಿದೆಯೋ ಅವನ ಮೇಲಾಣೆ! ಖಂಡಿತವಾಗಿಯೂ ಅದು ಕುರ್‌ಆನ್‌ನ ಮೂರನೇ ಒಂದು ಭಾಗಕ್ಕೆ ಸಮಾನವಾಗಿದೆ.”