+ -

عن أبي الدرداء رضي الله عنه أن النبي صلى الله عليه وسلم قال:
«مَنْ حَفِظَ عَشْرَ آيَاتٍ مِنْ أَوَّلِ سُورَةِ الكَهْفِ، عُصِمَ مِنَ الدَّجَّالِ». وفي رواية: «مِنْ آخِرِ سُورَةِ الكَهْف».

[صحيح] - [رواه مسلم] - [صحيح مسلم: 809]
المزيــد ...

ಅಬೂ ದರ್ದಾಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಸೂರ ಕಹ್ಫ್‌ನ ಮೊದಲ ಹತ್ತು ವಚನಗಳನ್ನು ಕಂಠಪಾಠ ಮಾಡುತ್ತಾರೋ ಅವರು ದಜ್ಜಾಲ್‌ನಿಂದ ರಕ್ಷಿಸಲ್ಪಡುತ್ತಾರೆ." ಮತ್ತೊಂದು ವರದಿಯಲ್ಲಿ: "ಸೂರ ಕಹ್ಫ್‌ನ ಕೊನೆಯ (ಹತ್ತು ವಚನಗಳನ್ನು)."

[صحيح] - [رواه مسلم] - [صحيح مسلم - 809]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ಸೂರ ಕಹ್ಫ್‌ನ ಮೊದಲ ಹತ್ತು ವಚನಗಳನ್ನು ಕಂಠಪಾಠ ಮಾಡುತ್ತಾರೋ, ಅವರು ಕೊನೆಯ ಕಾಲದಲ್ಲಿ ಕಾಣಿಸಿಕೊಳ್ಳುವ ಮತ್ತು ಸ್ವಯಂ ದೇವರೆಂದು ವಾದಿಸುವ ಮಸೀಹ್ ದಜ್ಜಾಲ್‌ನ ಫಿತ್ನಾ (ಪರೀಕ್ಷೆ) ದಿಂದ ರಕ್ಷಿಸಲ್ಪಡುತ್ತಾರೆ, ಕಾಪಾಡಲ್ಪಡುತ್ತಾರೆ ಮತ್ತು ಭದ್ರಪಡಿಸಲ್ಪಡುತ್ತಾರೆ. ಆದಮ್ (ಅವರ ಮೇಲೆ ಶಾಂತಿಯಿರಲಿ) ರನ್ನು ಸೃಷ್ಟಿಸಿದಾಗಿನಿಂದ ಪುನರುತ್ಥಾನ ದಿನದವರೆಗೆ ಭೂಮಿಯ ಮೇಲೆ ಸಂಭವಿಸುವ ಅತಿದೊಡ್ಡ ಫಿತ್ನಾ (ಪರೀಕ್ಷೆ) ಅವನ ಫಿತ್ನಾ ಆಗಿರುತ್ತದೆ. ಏಕೆಂದರೆ ಅಲ್ಲಾಹು ಅವನಿಗೆ ಕೆಲವು ಅದ್ಭುತಗಳನ್ನು ಮಾಡುವ ಶಕ್ತಿಯನ್ನು ನೀಡಿದ್ದು, ಅದರಿಂದಾಗಿ ಅವನ ಹಿಂಬಾಲಕರು ಮರುಳಾಗುತ್ತಾರೆ. ಏಕೆಂದರೆ ಸೂರ ಕಹ್ಫ್‌ನ ಆರಂಭ ಭಾಗದಲ್ಲಿ ದಜ್ಜಾಲ್ ಜನರನ್ನು ಪರೀಕ್ಷಿಸುವ ವಿಷಯಗಳಿಗಿಂತಲೂ ದೊಡ್ಡ ಅದ್ಭುತಗಳು ಮತ್ತು ದೃಷ್ಟಾಂತಗಳಿವೆ. ಯಾರು ಅದನ್ನು ಆಳವಾಗಿ ಅಧ್ಯಯನ ಮಾಡುತ್ತಾರೋ ಅವರು ದಜ್ಜಾಲ್‌ನಿಂದ ಪರೀಕ್ಷಿಸಲ್ಪಡುವುದಿಲ್ಲ. ಇನ್ನೊಂದು ವರದಿಯಲ್ಲಿ ಹೀಗಿದೆ: ಸೂರಾ ಕಹ್ಫ್‌ನ ಕೊನೆಯ ಹತ್ತು ವಚನಗಳು. ಅಂದರೆ "ಸತ್ಯನಿಷೇಧಿಗಳು ಸ್ವೀಕರಿಸಬಹುದೆಂದು ಭಾವಿಸಿದ್ದಾರೆಯೇ..." ಎಂಬಲ್ಲಿಂದ ಪ್ರಾರಂಭವಾಗುವ ವಚನಗಳು.

ಹದೀಸಿನ ಪ್ರಯೋಜನಗಳು

  1. ಸೂರ ಕಹ್ಫ್‌ನ ಶ್ರೇಷ್ಠತೆಯನ್ನು ವಿವರಿಸಲಾಗಿದೆ ಮತ್ತು ಅದರ ಆರಂಭದ ಅಥವಾ ಕೊನೆಯ ವಚನಗಳು ದಜ್ಜಾಲ್‌ನ ಪಿತ್ನಾದಿಂದ ರಕ್ಷಿಸುತ್ತವೆ ಎಂದು ತಿಳಿಸಲಾಗಿದೆ.
  2. ದಜ್ಜಾಲ್‌ನ ಬಗ್ಗೆ ತಿಳಿಸಲಾಗಿದೆ ಮತ್ತು ಅವನಿಂದ ರಕ್ಷಿಸಿಕೊಳ್ಳುವ ಮಾರ್ಗವನ್ನು ವಿವರಿಸಲಾಗಿದೆ.
  3. ಸೂರ ಕಹ್ಫ್ ಅನ್ನು ಸಂಪೂರ್ಣವಾಗಿ ಕಂಠಪಾಠ ಮಾಡಲು ಪ್ರೋತ್ಸಾಹಿಸಲಾಗಿದೆ. ಅದು ಸಾಧ್ಯವಾಗದಿದ್ದರೆ ಮೊದಲ ಮತ್ತು ಕೊನೆಯ ಹತ್ತು ವಚನಗಳನ್ನು ಕಂಠಪಾಠ ಮಾಡಬೇಕಾಗಿದೆ.
  4. ಇದರ ಕಾರಣವನ್ನು ವಿವರಿಸುತ್ತಾ ಕುರ್ತುಬಿ ಹೇಳುತ್ತಾರೆ: "ಹೀಗೆ ಹೇಳಲಾಗಿದೆ: ಗುಹಾನಿವಾಸಿಗಳ ಕಥೆಯಲ್ಲಿ ಅನೇಕ ಅದ್ಭುತಗಳು ಮತ್ತು ದೃಷ್ಟಾಂತಗಳು ಇರುವುದರಿಂದ, ಯಾರು ಅದರ ಬಗ್ಗೆ ತಿಳಿದಿರುತ್ತಾರೋ ಅವರು ದಜ್ಜಾಲ್‌ನ ಬಗ್ಗೆ ಅಚ್ಚರಿಪಡುವುದಿಲ್ಲ. ಅವನು ಅವರನ್ನು ಭಯಪಡಿಸುವುದೂ ಇಲ್ಲ. ಆದ್ದರಿಂದ ಅವರು ಅವನ ಪರೀಕ್ಷೆಗೆ ತುತ್ತಾಗುವುದೂ ಇಲ್ಲ. ಹೀಗೂ ಹೇಳಲಾಗಿದೆ: "ಅವನ (ಅಲ್ಲಾಹನ) ಕಡೆಯ ಕಠಿಣ ಶಿಕ್ಷೆಯ ಬಗ್ಗೆ ಎಚ್ಚರಿಕೆ ನೀಡಲು" ಎಂಬ ಅಲ್ಲಾಹನ ವಚನದಲ್ಲಿ ಹೇಳಿರುವ ಶಿಕ್ಷೆಯ ಕಠೋರತೆ ಮತ್ತು ಅದರ ದೈವಿಕತೆಯಿಂದಾಗಿದೆ. ಇದು ದಜ್ಜಾಲ್‌ನಿಂದ ಸಂಭವಿಸುವ ದೇವತಾವಾದ, ಅವನ ಪ್ರಾಬಲ್ಯ ಮತ್ತು ಅವನ ಪರೀಕ್ಷೆಯ ಗಂಭೀರತೆಗೆ ಹೊಂದಿಕೊಳ್ಳುತ್ತದೆ. ಈ ಕಾರಣದಿಂದಲೇ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅವನ ಬಗ್ಗೆ ಎಚ್ಚರಿಕೆ ನೀಡಿದರು ಮತ್ತು ಅವನ ಪರೀಕ್ಷೆಯಿಂದ ಅಲ್ಲಾಹನಲ್ಲಿ ಅಭಯ ಯಾಚಿಸಿದರು. ಆದ್ದರಿಂದ ಹದೀಸ್‌ನ ಅರ್ಥ ಹೀಗಿರಬಹುದು: "ಯಾರು ಈ ವಚನಗಳನ್ನು ಪಠಿಸುತ್ತಾರೋ, ಅವುಗಳನ್ನು ಆಳವಾಗಿ ಅಧ್ಯಯನ ಮಾಡುತ್ತಾರೋ ಮತ್ತು ಅವುಗಳ ಅರ್ಥವನ್ನು ತಿಳಿದಿರುತ್ತಾರೋ ಅವರು ಅವನ ಬಗ್ಗೆ ಎಚ್ಚರಿಕೆ ವಹಿಸುತ್ತಾರೆ ಮತ್ತು ಅವನಿಂದ ಸುರಕ್ಷಿತವಾಗಿರುತ್ತಾರೆ."
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ الأسامية الأمهرية الهولندية الغوجاراتية الدرية الرومانية المجرية الموري المالاجاشية الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು