عَنِ ابْنِ عَبَّاسٍ رَضِيَ اللهُ عَنْهُمَا:
أَنَّ نَاسًا مِنْ أَهْلِ الشِّرْكِ، كَانُوا قَدْ قَتَلُوا وَأَكْثَرُوا، وَزَنَوْا وَأَكْثَرُوا، فَأَتَوْا مُحَمَّدًا صَلَّى اللهُ عَلَيْهِ وَسَلَّمَ فَقَالُوا: إِنَّ الَّذِي تَقُولُ وَتَدْعُو إِلَيْهِ لَحَسَنٌ، لَوْ تُخْبِرُنَا أَنَّ لِمَا عَمِلْنَا كَفَّارَةً، فَنَزَلَ {وَالَّذِينَ لا يَدْعُونَ مَعَ اللهِ إِلَهًا آخَرَ وَلا يَقْتُلُونَ النَّفْسَ الَّتِي حَرَّمَ اللهُ إِلا بِالْحَقِّ وَلا يَزْنُونَ}[الفرقان: 68]، وَنَزَلَت: {قُلْ يَا عِبَادِيَ الَّذِينَ أَسْرَفُوا عَلَى أَنْفُسِهِمْ لا تَقْنَطُوا مِنْ رَحْمَةِ اللهِ} [الزمر: 53].
[صحيح] - [متفق عليه] - [صحيح البخاري: 4810]
المزيــد ...
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
"ಬಹಳಷ್ಟು ಕೊಲೆಗಳನ್ನು ಮಾಡಿದ ಮತ್ತು ಬಹಳಷ್ಟು ವ್ಯಭಿಚಾರಗಳನ್ನು ಮಾಡಿದ ಕೆಲವು ಬಹುದೇವವಿಶ್ವಾಸಿಗಳು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ನೀವು ಏನು ಹೇಳುತ್ತಿದ್ದೀರೋ ಮತ್ತು ಯಾವುದರ ಕಡೆಗೆ ಕರೆಯುತ್ತಿದ್ದೀರೋ ಅದು ಬಹಳ ಸುಂದರವಾಗಿದೆ. ನಾವು ಮಾಡಿದ ತಪ್ಪುಗಳಿಗೆ ಏನಾದರೂ ಪರಿಹಾರವಿದೆಯೇ ಎಂದು ತಿಳಿಸಿ." ಆಗ ಈ ವಚನವು ಅವತೀರ್ಣವಾಯಿತು: "ಯಾರು ಅಲ್ಲಾಹನ ಜೊತೆಗೆ ಬೇರೆ ದೇವರುಗಳನ್ನು ಕರೆದು ಪ್ರಾರ್ಥಿಸುವುದಿಲ್ಲವೋ, ಕಾನೂನುಬದ್ಧ ರೀತಿಯಲ್ಲೇ ಹೊರತು ಅಲ್ಲಾಹು (ಕೊಲ್ಲುವುದನ್ನು) ನಿಷೇಧಿಸಿದ ಜೀವವನ್ನು ಕೊಲ್ಲುವುದಿಲ್ಲವೋ ಮತ್ತು ವ್ಯಭಿಚಾರ ಮಾಡುವುದಿಲ್ಲವೋ." [ಫುರ್ಕಾನ್ 68] ಮತ್ತು ಈ ವಚನ ಅವತೀರ್ಣವಾಯಿತು: "ಹೇಳಿರಿ: ಸ್ವಯಂ ಅತಿರೇಕವೆಸಗಿದ ನನ್ನ ದಾಸರೇ! ಅಲ್ಲಾಹನ ದಯೆಯ ಬಗ್ಗೆ ನಿರಾಶರಾಗಬೇಡಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ಪಾಪಗಳನ್ನೂ ಕ್ಷಮಿಸುತ್ತಾನೆ. ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ." [ಝುಮರ್ 53].
[صحيح] - [متفق عليه] - [صحيح البخاري - 4810]
ಬಹಳಷ್ಟು ಕೊಲೆ ಮತ್ತು ವ್ಯಭಿಚಾರಗಳನ್ನು ಮಾಡಿದ ಕೆಲವು ಬಹುದೇವಾರಾಧಕರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ನೀವು ಕರೆಯುತ್ತಿರುವ ಇಸ್ಲಾಂ ಮತ್ತು ಅದರ ಬೋಧನೆಗಳು ಬಹಳ ಸುಂದರವಾಗಿವೆ. ಆದರೆ ನಾವು ಮಾಡಿದ ಬಹುದೇವಾರಾಧನೆ ಮತ್ತು ಮಹಾಪಾಪಗಳಿಗೆ ಪರಿಹಾರವಿದೆಯೇ?
ಆಗ ಎರಡು ವಚನಗಳು ಅವತೀರ್ಣವಾದವು. ಅಲ್ಲಾಹು ಜನರಿಂದ, ಅವರ ಪಾಪಗಳ ಹೆಚ್ಚಳ ಮತ್ತು ಗಂಭೀರತೆಯ ಹೊರತಾಗಿಯೂ, ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ಅವನು ಹೀಗೆ ಮಾಡದಿರುತ್ತಿದ್ದರೆ ಅವರು ತಮ್ಮ ಸತ್ಯನಿಷೇಧ ಮತ್ತು ಅತಿರೇಕದಲ್ಲಿ ಮುಂದುವರಿಯುತ್ತಿದ್ದರು ಮತ್ತು ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಿರಲಿಲ್ಲ.