+ -

عَنْ أَنَسِ بْنِ مَالِكٍ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«إِنَّ اللهَ لَا يَظْلِمُ مُؤْمِنًا حَسَنَةً، يُعْطَى بِهَا فِي الدُّنْيَا وَيُجْزَى بِهَا فِي الْآخِرَةِ، وَأَمَّا الْكَافِرُ فَيُطْعَمُ بِحَسَنَاتِ مَا عَمِلَ بِهَا لِلَّهِ فِي الدُّنْيَا، حَتَّى إِذَا أَفْضَى إِلَى الْآخِرَةِ، لَمْ تَكُنْ لَهُ حَسَنَةٌ يُجْزَى بِهَا».

[صحيح] - [رواه مسلم] - [صحيح مسلم: 2808]
المزيــد ...

ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಶ್ಚಯವಾಗಿಯೂ, ಒಳಿತಿನ ವಿಷಯದಲ್ಲಿ ಅಲ್ಲಾಹು ಸತ್ಯವಿಶ್ವಾಸಿಗೆ ಅನ್ಯಾಯ ಮಾಡುವುದಿಲ್ಲ. ಒಳಿತು ಮಾಡಿದ್ದಕ್ಕಾಗಿ ಅವನಿಗೆ ಇಹಲೋಕದಲ್ಲಿ (ಜೀವನೋಪಾಯವನ್ನು) ನೀಡಲಾಗುತ್ತದೆ ಮತ್ತು ಪರಲೋಕದಲ್ಲೂ ಪ್ರತಿಫಲ ನೀಡಲಾಗುತ್ತದೆ. ಆದರೆ ಸತ್ಯನಿಷೇಧಿಯು ಇಹಲೋಕದಲ್ಲಿ ಅಲ್ಲಾಹನ ಸಂಪ್ರೀತಿಗಾಗಿ ಮಾಡಿದ ಒಳಿತುಗಳಿಗಾಗಿ ಅವನಿಗೆ ಆಹಾರವನ್ನು ನೀಡಲಾಗುವುದು. ಹೀಗೆ ಅವನು ಪರಲೋಕಕ್ಕೆ ತಲುಪಿದಾಗ, ಪ್ರತಿಫಲ ನೀಡಲಾಗುವ ಯಾವುದೇ ಒಳಿತುಗಳು ಅವನಲ್ಲಿ ಉಳಿದಿರುವುದಿಲ್ಲ."

[صحيح] - [رواه مسلم] - [صحيح مسلم - 2808]

ವಿವರಣೆ

ಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸತ್ಯವಿಶ್ವಾಸಿಗಳ ಮೇಲೆ ಅಲ್ಲಾಹನಿಗಿರುವ ಮಹಾ ಉದಾರತೆಯನ್ನು, ಮತ್ತು ಸತ್ಯನಿಷೇಧಿಗಳೊಂದಿಗೆ ಅವನು ತೋರಿಸುವ ನ್ಯಾಯವನ್ನು ವಿವರಿಸುತ್ತಾರೆ. ಸತ್ಯವಿಶ್ವಾಸಿ ಮಾಡಿದ ಯಾವುದೇ ಸತ್ಕರ್ಮದ ಪ್ರತಿಫಲವು ಅವನಿಗೆ ನಷ್ಟವಾಗುವುದಿಲ್ಲ. ಬದಲಿಗೆ, ಪರಲೋಕದಲ್ಲಿ ಅವನಿಗೆ ಪ್ರತಿಫಲ ನೀಡಲಾಗುವುದರ ಜೊತೆಗೆ ಇಹಲೋಕದಲ್ಲೂ ಅವನು ತೋರಿದ ವಿಧೇಯತೆಗೆ ಅವನಿಗೆ ಪ್ರತಿಫಲವನ್ನು ನೀಡಲಾಗುತ್ತದೆ. ಪರಲೋಕದಲ್ಲಿ ಅವೆಲ್ಲದರ ಪ್ರತಿಫಲವನ್ನು ಅವನಿಗೆ ಸಂರಕ್ಷಿಸಿ ಇಡಲಾಗುವುದು. ಆದರೆ ಸತ್ಯನಿಷೇಧಿಯು ಇಹಲೋಕದಲ್ಲಿ ಮಾಡಿದ ಒಳಿತುಗಳಿಗೆ ಅಲ್ಲಾಹು ಇಹಲೋಕದಲ್ಲೇ ಪ್ರತಿಫಲವನ್ನು ನೀಡುವನು. ಹೀಗೆ ಅವನು ಪರಲೋಕಕ್ಕೆ ತಲುಪಿದರೆ ಅಲ್ಲಿ ಅವನಿಗೆ ನೀಡಲು ಯಾವುದೇ ಪ್ರತಿಫಲವು ಉಳಿದಿರುವುದಿಲ್ಲ. ಏಕೆಂದರೆ ಸತ್ಕರ್ಮಗಳಿಗೆ ಪರಲೋಕದಲ್ಲಿ ಪ್ರತಿಫಲ ಸಿಗಬೇಕಾದರೆ ಅದನ್ನು ಮಾಡುವ ವ್ಯಕ್ತಿ ಸತ್ಯವಿಶ್ವಾಸಿಯಾಗಿರಬೇಕು.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ಬೊಸ್ನಿಯನ್ ಸಿಂಹಳೀಯ ಹಿಂದಿ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಜರ್ಮನ್ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الطاجيكية الكينياروندا الرومانية المجرية التشيكية المالاجاشية الإيطالية الأورومو الأذربيجانية الأوزبكية الأوكرانية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಸತ್ಯನಿಷೇಧದಲ್ಲಿ ಸಾಯುವವನಿಗೆ ಅವನ ಕರ್ಮಗಳು ಪ್ರಯೋಜನ ನೀಡುವುದಿಲ್ಲ.
ಇನ್ನಷ್ಟು