عَنْ حَكِيمِ بْنِ حِزَامٍ رَضِيَ اللَّهُ عَنْهُ، قَالَ:
قُلْتُ: يَا رَسُولَ اللَّهِ، أَرَأَيْتَ أَشْيَاءَ كُنْتُ أَتَحَنَّثُ بِهَا فِي الجَاهِلِيَّةِ مِنْ صَدَقَةٍ أَوْ عَتَاقَةٍ، وَصِلَةِ رَحِمٍ، فَهَلْ فِيهَا مِنْ أَجْرٍ؟ فَقَالَ النَّبِيُّ صَلَّى اللهُ عَلَيْهِ وَسَلَّمَ: «أَسْلَمْتَ عَلَى مَا سَلَفَ مِنْ خَيْرٍ».
[صحيح] - [متفق عليه] - [صحيح البخاري: 1436]
المزيــد ...
ಹಕೀಮ್ ಬಿನ್ ಹಿಝಾಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಅಜ್ಞಾನ ಕಾಲದಲ್ಲಿ ನಾನು ದಾನ ಧರ್ಮ, ಗುಲಾಮ ವಿಮೋಚನೆ, ಕುಟುಂಬ ಸಂಬಂಧ ಜೋಡಿಸುವುದು ಮುಂತಾದ ಸತ್ಕರ್ಮಗಳನ್ನು ಮಾಡುತ್ತಿದ್ದೆ. ಅದಕ್ಕಾಗಿ ನನಗೆ ಏನಾದರೂ ಪ್ರತಿಫಲ ದೊರೆಯುವುದೇ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀನು ಹಿಂದೆ ಮಾಡಿದ ಒಳಿತುಗಳೊಂದಿಗೇ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವೆ."
[صحيح] - [متفق عليه] - [صحيح البخاري - 1436]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸತ್ಯನಿಷೇಧಿಯಾಗಿದ್ದ ಒಬ್ಬ ವ್ಯಕ್ತಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರೆ, ಅವನು ಸತ್ಯನಿಷೇಧಿಯಾಗಿದ್ದಾಗ ಮಾಡಿದ ದಾನ ಧರ್ಮ, ಗುಲಾಮ ವಿಮೋಚನೆ, ಕುಟುಂಬ ಸಂಬಂಧ ಜೋಡಿಸುವುದು ಮುಂತಾದ ಸತ್ಕರ್ಮಗಳಿಗೆ ಪ್ರತಿಫಲವನ್ನು ಪಡೆಯುತ್ತಾನೆ.