+ -

عَنْ حَارِثَةَ بْنِ وَهْبٍ الخُزَاعِيِّ رضي الله عنه قَالَ: سَمِعْتُ النَّبِيَّ صَلَّى اللهُ عَلَيْهِ وَسَلَّمَ يَقُولُ:
«أَلاَ أُخْبِرُكُمْ بِأَهْلِ الجَنَّةِ؟ كُلُّ ضَعِيفٍ مُتَضَعِّفٍ، لَوْ أَقْسَمَ عَلَى اللَّهِ لَأَبَرَّهُ، أَلاَ أُخْبِرُكُمْ بِأَهْلِ النَّارِ: كُلُّ عُتُلٍّ جَوَّاظٍ مُسْتَكْبِرٍ».

[صحيح] - [متفق عليه] - [صحيح البخاري: 4918]
المزيــد ...

ಹಾರಿಸ ಬಿನ್ ವಹ್ಬ್ ಅಲ್-ಖುಝಾಈ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ನಾನು ನಿಮಗೆ ಸ್ವರ್ಗದ ಜನರ ಬಗ್ಗೆ ತಿಳಿಸಲೇ? ದುರ್ಬಲ ಎಂದು ಪರಿಗಣಿಸಲ್ಪಡುವ ಎಲ್ಲಾ ವಿನಮ್ರ ವ್ಯಕ್ತಿಗಳು. ಅವರು (ಏನಾದರೂ ಸಂಭವಿಸಬೇಕೆಂದು) ಅಲ್ಲಾಹನ ಮೇಲೆ ಆಣೆ ಮಾಡಿದರೆ, ಅಲ್ಲಾಹು ಅದನ್ನು ನೆರವೇರಿಸುತ್ತಾನೆ. ನಾನು ನಿಮಗೆ ನರಕದ ಜನರ ಬಗ್ಗೆ ತಿಳಿಸಲೇ? ಎಲ್ಲಾ ಕಠೋರ, ದುರಾಸೆ ಮತ್ತು ಅಹಂಕಾರಿಗಳಾದ ವ್ಯಕ್ತಿಗಳು."

[صحيح] - [متفق عليه] - [صحيح البخاري - 4918]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಸ್ವರ್ಗವಾಸಿಗಳ ಮತ್ತು ನರಕವಾಸಿಗಳ ಕೆಲವು ಗುಲಕ್ಷಣಗಳನ್ನು ತಿಳಿಸಿದ್ದಾರೆ.
ಸ್ವರ್ಗವಾಸಿಗಳಲ್ಲಿ ಹೆಚ್ಚಿನವರು ಯಾರೆಂದರೆ, "ದುರ್ಬಲ ಎಂದು ಪರಿಗಣಿಸಲ್ಪಡುವ ಎಲ್ಲಾ ವಿನಮ್ರ ವ್ಯಕ್ತಿಗಳು." ಅಂದರೆ, ವಿನಯಶೀಲ, ಸರ್ವಶಕ್ತನಾದ ಅಲ್ಲಾಹನಿಗೆ ವಿಧೇಯನಾದವನು, ಮತ್ತು ಅವನ ಮುಂದೆ ತನ್ನನ್ನು ತಗ್ಗಿಸಿಕೊಳ್ಳುವವನು. ಎಲ್ಲಿಯವರೆಗೆಂದರೆ, ಕೆಲವು ಜನರು ಅವನನ್ನು ದುರ್ಬಲ ಎಂದು ಪರಿಗಣಿಸಿ ತಿರಸ್ಕರಿಸುವಷ್ಟರ ಮಟ್ಟಿಗೆ. ಅಲ್ಲಾಹನ ಮುಂದೆ ತನ್ನನ್ನು ತಗ್ಗಿಸಿಕೊಳ್ಳುವ ಈ ವ್ಯಕ್ತಿ, ಅಲ್ಲಾಹನ ಔದಾರ್ಯವನ್ನು ಆಶಿಸಿ ಅಲ್ಲಾಹನ ಮೇಲೆ ಆಣೆ ಮಾಡಿದರೆ, ಅಲ್ಲಾಹು ಅದನ್ನು ನೆರವೇರಿಸುತ್ತಾನೆ, ಅವನು ಯಾವುದಕ್ಕಾಗಿ ಆಣೆ ಮಾಡಿದನೋ ಅದನ್ನು ಅವನಿಗೆ ನೀಡುತ್ತಾನೆ ಮತ್ತು ಅವನ ಬೇಡಿಕೆ ಹಾಗೂ ಪ್ರಾರ್ಥನೆಗೆ ಉತ್ತರಿಸುತ್ತಾನೆ.
ನರಕವಾಸಿಗಳಲ್ಲಿ ಹೆಚ್ಚಿನವರು ಯಾರೆಂದರೆ, ಎಲ್ಲಾ "ಕಠೋರ ವ್ಯಕ್ತಿಗಳು" ಅಂದರೆ, ಒರಟು, ಕರ್ಕಶ, ಮತ್ತು ತೀವ್ರವಾಗಿ ವಾದಿಸುವವನು. ಅಥವಾ ಒಳಿತಿಗೆ ಮಣಿಯದೆ ಅಶ್ಲೀಲವಾಗಿ ವರ್ತಿಸುವವನು. "ದುರಾಸೆಯ ವ್ಯಕ್ತಿ" ಅಂದರೆ ಅಹಂಕಾರಿ, ದುರಾಸೆಯ ವ್ಯಕ್ತಿ, ದೊಡ್ಡ ಗಾತ್ರದ ದೇಹವನ್ನು ಹೊಂದಿರುವವನು, ಅಹಂಭಾವದಿಂದ ನಡೆಯುವವನು ಮತ್ತು ಕೆಟ್ಟ ನಡವಳಿಕೆಯವನು. "ಅಹಂಕಾರಿ ವ್ಯಕ್ತಿ" ಅಂದರೆ, ಸತ್ಯವನ್ನು ತಿರಸ್ಕರಿಸುವವನು ಮತ್ತು ಇತರರನ್ನು ಕೀಳಾಗಿ ಕಾಣುವವನು.

ಹದೀಸಿನ ಪ್ರಯೋಜನಗಳು

  1. ಸ್ವರ್ಗದ ಜನರ ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗಿದೆ ಮತ್ತು ನರಕದ ಜನರ ಗುಣಲಕ್ಷಣಗಳ ವಿರುದ್ಧ ಎಚ್ಚರಿಕೆ ನೀಡಲಾಗಿದೆ.
  2. ಅಲ್ಲಾಹನಿಗೆ ವಿನಮ್ರತೆ ತೋರುವುದು ಎಂದರೆ ಅವನ ಆದೇಶ-ನಿಷೇಧಗಳಿಗೆ ತಲೆಬಾಗುವುದು ಹಾಗೂ ಅವುಗಳಿಗೆ ವಿಧೇಯವಾಗಿರುವುದು. ಜನರಿಗೆ ವಿನಮ್ರತೆ ತೋರುವುದು ಎಂದರೆ ಅಹಂಕಾರ ಪಡದಿರುವುದು.
  3. ಇಬ್ನ್ ಹಜರ್ ಹೇಳಿದರು: ಇದರ ಅರ್ಥವೇನೆಂದರೆ, ಸ್ವರ್ಗವಾಸಿಗಳಲ್ಲಿ ಹೆಚ್ಚಿನವರು ಈ ಗುಣಲಕ್ಷಣಗಳಿರುವ ಜನರು. ಹಾಗೆಯೇ ನರಕವಾಸಿಗಳಲ್ಲಿ ಹೆಚ್ಚಿನವರು ಆ ಗುಣಲಕ್ಷಣಗಳಿರುವ ಜನರು. ಈ ಎರಡು ವಿಧದ ಜನರಲ್ಲಿ ಎಲ್ಲರೂ ಇದೇ ಗುಣಲಕ್ಷಣಗಳಿರುವವರು ಎಂದು ಇದರ ಅರ್ಥವಲ್ಲ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الهولندية الغوجاراتية النيبالية المجرية الجورجية المقدونية
ಅನುವಾದಗಳನ್ನು ತೋರಿಸಿ
ಇನ್ನಷ್ಟು