عَنْ عَبْدِ اللَّهِ بْنِ مَسْعُودٍ رَضيَ اللهُ عنهُ قَالَ:
قَالَ لِي النَّبِيُّ صَلَّى اللهُ عَلَيْهِ وَسَلَّمَ: «اقْرَأْ عَلَيَّ»، قُلْتُ: يَا رَسُولَ اللَّهِ، أَأَقْرَأُ عَلَيْكَ، وَعَلَيْكَ أُنْزِلَ؟ قَالَ: «نَعَمْ» فَقَرَأْتُ سُورَةَ النِّسَاءِ حَتَّى أَتَيْتُ إِلَى هَذِهِ الآيَةِ: {فَكَيْفَ إِذَا جِئْنَا مِنْ كُلِّ أُمَّةٍ بِشَهِيدٍ، وَجِئْنَا بِكَ عَلَى هَؤُلاَءِ شَهِيدًا} [النساء: 41]، قَالَ: «حَسْبُكَ الآنَ» فَالْتَفَتُّ إِلَيْهِ، فَإِذَا عَيْنَاهُ تَذْرِفَانِ.
[صحيح] - [متفق عليه] - [صحيح البخاري: 5050]
المزيــد ...
ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನಗೆ ಹೇಳಿದರು: "ನನ್ನ ಮುಂದೆ ಪಠಿಸಿರಿ". ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ, ನಾನು ನಿಮ್ಮ ಮುಂದೆ ಪಠಿಸುವುದೇ? ಅದು (ಕುರ್‌ಆನ್) ಅವತೀರ್ಣವಾಗಿರುವುದು ನಿಮಗಲ್ಲವೇ?". ಅವರು ಹೇಳಿದರು: "ಹೌದು (ನಾನು ಬೇರೆಯವರಿಂದ ಅದನ್ನು ಕೇಳಲು ಇಷ್ಟಪಡುತ್ತೇನೆ)". ಆಗ ನಾನು ಸೂರ ಅನ್ನಿಸಾ ಪಠಿಸಿದೆ. ಕೊನೆಗೆ ನಾನು ಈ ವಚನಕ್ಕೆ ತಲುಪಿದೆ: “ನಾವು ಪ್ರತಿಯೊಂದು ಸಮುದಾಯದಿಂದ ಒಬ್ಬ ಸಾಕ್ಷಿಯನ್ನು ಕರೆತಂದಾಗ, ಮತ್ತು ಇವರ ಮೇಲೆ ಸಾಕ್ಷಿಯಾಗಿ ನಿಮ್ಮನ್ನು ಕರೆತಂದಾಗ (ಪರಿಸ್ಥಿತಿ) ಹೇಗಿರಬಹುದು?} [ಸೂರಃಅನ್ನಿಸಾ: 41]. ಆಗ ಅವರು ಹೇಳಿದರು: "ಈಗ ಸಾಕು (ನಿಲ್ಲಿಸು)". ನಾನು ಅವರ ಕಡೆಗೆ ತಿರುಗಿದೆನು, ಆಗ ಅವರ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿತ್ತು.
[صحيح] - [متفق عليه] - [صحيح البخاري - 5050]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಲ್ಲಿ ಕುರ್‌ಆನ್‌ನಿಂದ ಏನನ್ನಾದರೂ ಪಠಿಸಲು ಕೇಳಿದರು. ಆಗ ಅವರು ಹೇಳಿದರು: ಓ ಅಲ್ಲಾಹನ ಸಂದೇಶವಾಹಕರೇ, ನಾನು ನಿಮ್ಮ ಮುಂದೆ ಹೇಗೆ ಪಠಿಸಲಿ, ಅದು ನಿಮಗೆ ಅವತೀರ್ಣವಾದುದಲ್ಲವೇ?! ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಾನು ಅದನ್ನು ಬೇರೆಯವರಿಂದ ಕೇಳಲು ಇಷ್ಟಪಡುತ್ತೇನೆ. ಆಗ ಅವರು ಸೂರ ಅನ್ನಿಸಾ ಪಠಿಸಿದರು. ಅವರು ಸರ್ವೋನ್ನತನಾದ ಅಲ್ಲಾಹನ ಈ ವಚನಕ್ಕೆ ತಲುಪಿದಾಗ: “ನಾವು ಪ್ರತಿಯೊಂದು ಸಮುದಾಯದಿಂದ ಒಬ್ಬ ಸಾಕ್ಷಿಯನ್ನು ಕರೆತಂದಾಗ, ಮತ್ತು ಇವರ ಮೇಲೆ ಸಾಕ್ಷಿಯಾಗಿ ನಿಮ್ಮನ್ನು ಕರೆತಂದಾಗ (ಪರಿಸ್ಥಿತಿ) ಹೇಗಿರಬಹುದು?” ಅಂದರೆ, ನೀವು ನಿಮ್ಮ ಸಮುದಾಯಕ್ಕೆ ನಿಮ್ಮ ಪರಿಪಾಲಕನ ಸಂದೇಶವನ್ನು ತಲುಪಿಸಿದ್ದೀರಿ ಎಂಬುದಕ್ಕೆ ಸಾಕ್ಷಿಯಾಗಿ ನಾವು ನಿಮ್ಮನ್ನು ಕರೆತಂದಾಗ, ನಿಮ್ಮ ಮತ್ತು ನಿಮ್ಮ ಸಮುದಾಯದ ಪರಿಸ್ಥಿತಿ ಹೇಗಿರಬಹುದು? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಈಗ ಪಠಣವನ್ನು ನಿಲ್ಲಿಸು. ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ನಾನು ಅವರ ಕಡೆಗೆ ತಿರುಗಿದೆನು. ಆಗ ಆ ಸನ್ನಿವೇಶದ (ಮಹ್ಶರ್‌ನ) ಭಯದಿಂದ ಮತ್ತು ತಮ್ಮ ಸಮುದಾಯದ ಮೇಲಿನ ಕರುಣೆಯಿಂದ ಅವರ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿತ್ತು.