عَنْ مَعْقِلِ بْنِ يَسَارٍ رضي الله عنه أَنَّ رَسُولَ اللهِ صَلَّى اللهُ عَلَيْهِ وَسَلَّمَ قَالَ:
«الْعِبَادَةُ فِي الْهَرْجِ كَهِجْرَةٍ إِلَيَّ».
[صحيح] - [رواه مسلم] - [صحيح مسلم: 2948]
المزيــد ...
ಮಅಕಿಲ್ ಇಬ್ನ್ ಯಸಾರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅಶಾಂತಿಯ ಸಮಯದಲ್ಲಿ ಆರಾಧನೆ ಮಾಡುವುದು ಎಂದರೆ ನನ್ನ ಬಳಿಗೆ ಹಿಜ್ರ (ವಲಸೆ) ಮಾಡಿದಂತೆ."
[صحيح] - [رواه مسلم] - [صحيح مسلم - 2948]
ಗಲಭೆ, ಕೊಲೆ, ಅಶಾಂತಿ, ಮತ್ತು ಅರಾಜಕತೆಯ ಸಮಯದಲ್ಲಿ ಆರಾಧನೆ ಮಾಡುತ್ತಿರಲು ಮತ್ತು ಅದಕ್ಕೆ ಅಂಟಿಕೊಳ್ಳಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ. ಆ ಸಮಯದಲ್ಲಿ ಮಾಡುವ ಆರಾಧನೆಗೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹಿಜ್ರ (ವಲಸೆ) ಮಾಡಿದ್ದಕ್ಕೆ ಸಿಗುವ ಪ್ರತಿಫಲವು ದೊರೆಯುತ್ತದೆ. ಏಕೆಂದರೆ ಆ ಸಮಯದಲ್ಲಿ ಜನರು ಆರಾಧನೆಯ ಬಗ್ಗೆ ನಿರ್ಲಕ್ಷ್ಯರಾಗುತ್ತಾರೆ ಮತ್ತು ಇತರ ಕಾರ್ಯಗಳಲ್ಲಿ ಮಗ್ನರಾಗುತ್ತಾರೆ. ಕೆಲವು ಬೆರಳೆಣಿಕೆಯ ಜನರು ಮಾತ್ರ ತಮ್ಮನ್ನು ಆರಾಧನೆಗಳಿಗೆ ಅರ್ಪಿಸಿಕೊಳ್ಳುತ್ತಾರೆ.