عَنْ وَائِلٍ الْحَضْرَمِيِّ قَالَ: سَأَلَ سَلَمَةُ بْنُ يَزِيدَ الْجُعْفِيُّ رضي الله عنه رَسُولَ اللهِ صَلَّى اللهُ عَلَيْهِ وَسَلَّمَ، فَقَالَ:
يَا نَبِيَّ اللهِ، أَرَأَيْتَ إِنْ قَامَتْ عَلَيْنَا أُمَرَاءُ يَسْأَلُونَا حَقَّهُمْ وَيَمْنَعُونَا حَقَّنَا، فَمَا تَأْمُرُنَا؟ فَأَعْرَضَ عَنْهُ، ثُمَّ سَأَلَهُ، فَأَعْرَضَ عَنْهُ، ثُمَّ سَأَلَهُ فِي الثَّانِيَةِ أَوْ فِي الثَّالِثَةِ، فَجَذَبَهُ الْأَشْعَثُ بْنُ قَيْسٍ، وَقَالَ: «اسْمَعُوا وَأَطِيعُوا، فَإِنَّمَا عَلَيْهِمْ مَا حُمِّلُوا، وَعَلَيْكُمْ مَا حُمِّلْتُمْ».
[صحيح] - [رواه مسلم] - [صحيح مسلم: 1846]
المزيــد ...
ವಾಇಲ್ ಹದ್ರಮೀ ರಿಂದ ವರದಿ. ಅವರು ಹೇಳಿದರು: ಸಲಮ ಬಿನ್ ಯಝೀದ್ ಜುಅಫಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು:
"ಓ ಅಲ್ಲಾಹನ ಪ್ರವಾದಿಯವರೇ! ನಮ್ಮ ಮೇಲೆ ಆಡಳಿತಗಾರರು ಆಡಳಿತ ನಡೆಸಿ ಅವರು ಅವರ ಹಕ್ಕುಗಳನ್ನು ಕೇಳಿ ಪಡೆದು ನಮ್ಮ ಹಕ್ಕುಗಳನ್ನು ನಿರಾಕರಿಸಿದರೆ, ನೀವು ನಮಗೆ ಏನು ಮಾಡಲು ಆದೇಶಿಸುತ್ತೀರಿ?" ಪ್ರವಾದಿಯವರು ಅವರನ್ನು ನಿರ್ಲಕ್ಷಿಸಿದರು. ಅವರು ಪುನಃ ಕೇಳಿದರು. ಪ್ರವಾದಿಯವರು ಪುನಃ ಅವರನ್ನು ನಿರ್ಲಕ್ಷಿಸಿದರು. ಅವರು ಎರಡನೇ ಅಥವಾ ಮೂರನೇ ಬಾರಿಗೆ ಕೇಳಿದರು. ಆಗ ಅಶ್‌ಅಸ್ ಬಿನ್ ಕೈಸ್ ಅವರನ್ನು ತನ್ನತ್ತ ಸೆಳೆದರು. ಆಗ ಪ್ರವಾದಿಯವರು ಹೇಳಿದರು: "ನೀವು ಅವರ ಮಾತನ್ನು ಕೇಳಿರಿ ಮತ್ತು ಅನುಸರಿಸಿರಿ. ಅವರ ಹೊಣೆಗಾರಿಕೆಗಳು ಅವರಿಗೆ ಮತ್ತು ನಿಮ್ಮ ಹೊಣೆಗಾರಿಕೆಗಳು ನಿಮಗೆ."
[صحيح] - [رواه مسلم] - [صحيح مسلم - 1846]
ಜನರು ತಮ್ಮ ಮಾತನ್ನು ಕೇಳಬೇಕು ಮತ್ತು ತಮ್ಮನ್ನು ಅನುಸರಿಸಬೇಕು ಎಂಬ ತಮ್ಮ ಹಕ್ಕುಗಳನ್ನು ಕೇಳಿ ಪಡೆದು, ಜನರ ನಡುವೆ ನ್ಯಾಯ ಪಾಲಿಸುವುದು, ಯುದ್ಧಾರ್ಜಿತ ಸೊತ್ತನ್ನು ಪಾಲು ಮಾಡುವುದು, ವಿವಾದಗಳನ್ನು ಬಗೆಹರಿಸುವುದು ಮುಂತಾದ ಜನರ ಹಕ್ಕುಗಳನ್ನು ನಿರಾಕರಿಸುವ ಕೆಲವು ಆಡಳಿತಗಾರರ ಬಗ್ಗೆ, ಅವರೊಡನೆ ಹೇಗೆ ವರ್ತಿಸಬೇಕೆಂದು ನೀವು ನಮಗೆ ಆಜ್ಞಾಪಿಸುತ್ತೀರಿ ಎಂದು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾಯಿತು.
ಆದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆ ಪ್ರಶ್ನೆಯನ್ನು ನಿರ್ಲಕ್ಷಿಸಿದರು. ಬಹುಶಃ ಅವರಿಗೆ ಈ ಪ್ರಶ್ನೆ ಹಿಡಿಸಲಿಲ್ಲವೆಂದು ಕಾಣುತ್ತದೆ. ಆದರೆ, ಆ ವ್ಯಕ್ತಿ ಇದೇ ಪ್ರಶ್ನೆಯನ್ನು ಎರಡನೇ ಅಥವಾ ಮೂರನೇ ಬಾರಿಗೆ ಕೇಳಿದರು. ಆಗ ಅಶ್‌ಅಸ್ ಬಿನ್ ಕೈಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರಶ್ನೆ ಕೇಳಿದ ವ್ಯಕ್ತಿಯನ್ನು ತನ್ನತ್ತ ಸೆಳೆದು, ಮೌನವಾಗುವಂತೆ ಸೂಚಿಸಿದರು.
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು: "ನೀವು ಅವರ ಮಾತನ್ನು ಕೇಳಿರಿ ಮತ್ತು ಅವರ ಆಜ್ಞೆಯನ್ನು ಅನುಸರಿಸಿರಿ. ನ್ಯಾಯ ಪಾಲಿಸುವುದು, ಪ್ರಜೆಗಳಿಗೆ ಅವರ ಹಕ್ಕುಗಳನ್ನು ನೀಡುವುದು ಮುಂತಾದ ಅವರು ಕಡ್ಡಾಯವಾಗಿ ನಿರ್ವಹಿಸಬೇಕಾದ ಹೊಣೆಗಾರಿಕೆಗಳು ಅವರಿಗೆ. ಅದೇ ರೀತಿ, ಅನುಸರಿಸುವುದು, ಹಕ್ಕುಗಳನ್ನು ನೆರವೇರಿಸುವುದು, ಆಪತ್ತಿನ ಸಂದರ್ಭದಲ್ಲಿ ತಾಳ್ಮೆ ತೋರುವುದು ಮುಂತಾದ ನಿಮ್ಮ ಹೊಣೆಗಾರಿಕೆಗಳು ನಿಮಗೆ."