عَنْ حُذَيْفَةَ رَضيَ اللهُ عنهُ عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«إِنَّهَا سَتَكُونُ أُمَرَاءُ يَكْذِبُونَ وَيَظْلِمُونَ، فَمَنْ صَدَّقَهُمْ بِكَذِبِهِمْ وَأَعَانَهُمْ عَلَى ظُلْمِهِمْ فَلَيْسَ مِنَّي، وَلَسْتُ مِنْهُ، وَلَا يَرِدُ عَلَيَّ الْحَوْضَ، وَمَنْ لَمْ يُصَدِّقْهُمْ بِكَذِبِهِمْ وَلَمْ يُعِنْهُمْ عَلَى ظُلْمِهِمْ فَهُوَ مِنِّي، وَأَنَا مِنْهُ، وَسَيَرِدُ عَلَيَّ الْحَوْضَ».
[صحيح] - [رواه أحمد] - [مسند أحمد: 23260]
المزيــد ...
ಹುದೈಫಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಖಂಡಿತವಾಗಿಯೂ (ಭವಿಷ್ಯದಲ್ಲಿ) ಸುಳ್ಳು ಹೇಳುವ ಮತ್ತು ಅನ್ಯಾಯ ಮಾಡುವ ಆಡಳಿತಗಾರರು ಬರುವರು. ಯಾರು ಅವರ ಸುಳ್ಳುಗಳನ್ನು ಸತ್ಯವೆಂದು ದೃಢೀಕರಿಸುತ್ತಾರೋ ಮತ್ತು ಅವರ ಅನ್ಯಾಯಕ್ಕೆ ಸಹಾಯ ಮಾಡುತ್ತಾರೋ, ಅವನು ನನ್ನವನಲ್ಲ ಮತ್ತು ನಾನು ಅವನವನಲ್ಲ. ಅವನು ನನ್ನ 'ಹೌದ್' (ಕೌಸರ್ ಸರೋವರ) ಬಳಿ ಬರುವುದಿಲ್ಲ. ಯಾರು ಅವರ ಸುಳ್ಳುಗಳನ್ನು ಸತ್ಯವೆಂದು ದೃಢೀಕರಿಸುವುದಿಲ್ಲವೋ ಮತ್ತು ಅವರ ಅನ್ಯಾಯಕ್ಕೆ ಸಹಾಯ ಮಾಡುವುದಿಲ್ಲವೋ, ಅವನು ನನ್ನವನು ಮತ್ತು ನಾನು ಅವನವನು. ಅವನು ನನ್ನ 'ಹೌದ್' ಬಳಿ ಬರುವನು".
[صحيح] - [رواه أحمد] - [مسند أحمد - 23260]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಅವರ ಮರಣದ ನಂತರ ಜನರ ಮೇಲೆ ಅಮೀರರು (ಆಡಳಿತಗಾರರು) ಅಧಿಕಾರಕ್ಕೆ ಬರುವರು. ಅವರು ಮಾತಿನಲ್ಲಿ ಸುಳ್ಳು ಹೇಳುತ್ತಾರೆ – ಅಂದರೆ ತಾವು ಮಾಡದನ್ನು ಹೇಳುತ್ತಾರೆ – ಮತ್ತು ಆಡಳಿತದಲ್ಲಿ ಅನ್ಯಾಯ ಮಾಡುತ್ತಾರೆ. ಯಾರು ಅವರ ಬಳಿಗೆ ಹೋಗಿ ಅವರ ಸುಳ್ಳುಗಳನ್ನು ಸತ್ಯವೆಂದು ದೃಢೀಕರಿಸುತ್ತಾರೋ, ಅಥವಾ ಅನ್ಯಾಯದ ಕೃತ್ಯದಲ್ಲಿ ಅಥವಾ ಮಾತಿನಲ್ಲಿ – ಉದಾಹರಣೆಗೆ ಅವರ ಸಾಮೀಪ್ಯವನ್ನು ಬಯಸಿ ಮತ್ತು ಅವರ ಬಳಿ ಇರುವುದನ್ನು ಆಶಿಸಿ ಅವರಿಗಾಗಿ ಫತ್ವಾ ನೀಡುವುದು – ಅವರಿಗೆ ಸಹಾಯ ಮಾಡುತ್ತಾನೋ, ನಾನು ಅವರಿಂದ ಮುಕ್ತನಾಗಿದ್ದೇನೆ. ಅವನು ನನ್ನವನಲ್ಲ, ಮತ್ತು ನಾನು ಅವನವನಲ್ಲ. ಅವನು (ಪುನರುತ್ಥಾನ) ದಿನದಂದು ನನ್ನ ಕೌಸರ್ ಸರೋವರದ ಬಳಿ ಬರುವುದಿಲ್ಲ. ಯಾರು ಅವರ ಬಳಿಗೆ ಹೋಗುವುದಿಲ್ಲವೋ, ಅವರ ಸುಳ್ಳುಗಳನ್ನು ಸತ್ಯವೆಂದು ದೃಢೀಕರಿಸುವುದಿಲ್ಲವೋ ಮತ್ತು ಅವರ ಅನ್ಯಾಯಕ್ಕೆ ಸಹಾಯ ಮಾಡುವುದಿಲ್ಲವೋ, ಅವನು ನನ್ನವನು, ಮತ್ತು ನಾನು ಅವನವನು. ಅವನು (ಪುನರುತ್ಥಾನ) ದಿನದಂದು ನನ್ನ ಹೌದ್ ಬಳಿ ಬರುವನು.