عَنِ ابْنِ عُمَرَ رَضِيَ اللَّهُ عَنْهُمَا قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«لَنْ يَزَالَ المُؤْمِنُ فِي فُسْحَةٍ مِنْ دِينِهِ، مَا لَمْ يُصِبْ دَمًا حَرَامًا».
[صحيح] - [رواه البخاري] - [صحيح البخاري: 6862]
المزيــد ...
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ಸತ್ಯವಿಶ್ವಾಸಿಯು, ಎಲ್ಲಿಯವರೆಗೆ ನಿಷಿದ್ಧವಾದ ರಕ್ತವನ್ನು ಹರಿಸುವುದಿಲ್ಲವೋ (ಅನ್ಯಾಯವಾಗಿ ಕೊಲೆ ಮಾಡುವುದಿಲ್ಲವೋ), ಅಲ್ಲಿಯವರೆಗೆ ಅವನು ತನ್ನ ಧರ್ಮದಲ್ಲಿ ವಿಶಾಲತೆಯಲ್ಲಿಯೇ ಇರುತ್ತಾನೆ”.
[صحيح] - [رواه البخاري] - [صحيح البخاري - 6862]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸತ್ಯವಿಶ್ವಾಸಿಯು ಸದಾ ತನ್ನ ಸತ್ಕರ್ಮಗಳ ವಿಶಾಲತೆಯಲ್ಲಿ ಮತ್ತು ಅಲ್ಲಾಹನ ಕರುಣೆ, ಕ್ಷಮೆ ಹಾಗೂ ಮನ್ನಣೆಯ ನಿರೀಕ್ಷೆಯಲ್ಲಿರುತ್ತಾನೆ. ಆದರೆ, ಯಾವಾಗ ಅವನು ಕೊಲ್ಲಲು ನಿಷೇಧಿಸಲ್ಪಟ್ಟ ಮನುಷ್ಯನನ್ನು (ಅಂದರೆ ಯಾರನ್ನಾದರೂ ಅನ್ಯಾಯವಾಗಿ) ಕೊಲ್ಲುತ್ತಾನೋ, ಆಗ ಅವನ ಕರ್ಮಗಳು ಅವನ ಪಾಲಿಗೆ ಕಿರಿದಾಗುತ್ತವೆ. ಏಕೆಂದರೆ ಆ ಕರ್ಮಗಳು ಕೊಲೆಯ ಪಾಪ ಮತ್ತು ಅದರ ಗಂಭೀರ ಅಪರಾಧವನ್ನು ಸರಿದೂಗಿಸಲು ಸಾಕಾಗುವುದಿಲ್ಲ.