+ -

عَنْ أَبِي سَعِيدٍ رضي الله عنه أَنَّ النَّبِيَّ صَلَّى اللهُ عَلَيْهِ وَسَلَّمَ قَالَ:
«مَا مِنْ مُسْلِمٍ يَدْعُو بِدَعْوَةٍ لَيْسَ فِيهَا إِثْمٌ، وَلَا قَطِيعَةُ رَحِمٍ، إِلَّا أَعْطَاهُ اللهُ بِهَا إِحْدَى ثَلَاثٍ: إِمَّا أَنْ تُعَجَّلَ لَهُ دَعْوَتُهُ، وَإِمَّا أَنْ يَدَّخِرَهَا لَهُ فِي الْآخِرَةِ، وَإِمَّا أَنْ يَصْرِفَ عَنْهُ مِنَ السُّوءِ مِثْلَهَا» قَالُوا: إِذنْ نُكْثِرُ، قَالَ: «اللهُ أَكْثَرُ».

[صحيح] - [رواه أحمد] - [مسند أحمد: 11133]
المزيــد ...

ಅಬೂ ಸಈದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾವುದೇ ಮುಸ್ಲಿಂ ಅಲ್ಲಾಹನಲ್ಲಿ ಪಾಪ ಅಥವಾ ರಕ್ತ ಸಂಬಂಧವನ್ನು ಮುರಿಯುವುದನ್ನು ಒಳಗೊಂಡಿರದ ಪ್ರಾರ್ಥನೆಯೊಂದಿಗೆ ಪ್ರಾರ್ಥಿಸಿದರೆ, ಅಲ್ಲಾಹು ಅವನಿಗೆ ಮೂರರಲ್ಲಿ ಒಂದನ್ನು ನೀಡದೇ ಇರುವುದಿಲ್ಲ: ಒಂದೋ ಅವನ ಪ್ರಾರ್ಥನೆಗೆ ಶೀಘ್ರದಲ್ಲೇ ಉತ್ತರಿಸುತ್ತಾನೆ, ಅಥವಾ ಅವನು ಅದನ್ನು ಪರಲೋಕದಲ್ಲಿ ಅವನಿಗಾಗಿ ಉಳಿಸುತ್ತಾನೆ, ಅಥವಾ ಅವನು ಅದಕ್ಕೆ ಸಮಾನವಾದ ಒಂದು ಕೆಡುಕನ್ನು ಅವನಿಂದ ನಿವಾರಿಸುತ್ತಾನೆ." ಸಹಚರರು ಹೇಳಿದರು: "ಹಾಗಾದರೆ ನಾವು ಹೆಚ್ಚಿಸಬೇಕು." ಪ್ರವಾದಿಯವರು ಹೇಳಿದರು: "ಅಲ್ಲಾಹು ಕೂಡ ಹೆಚ್ಚಿಸುವನು."

[صحيح] - [رواه أحمد] - [مسند أحمد - 11133]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಒಬ್ಬ ಮುಸ್ಲಿಂ ಅಲ್ಲಾಹನನ್ನು ಪ್ರಾರ್ಥಿಸುತ್ತಾ ಒಂದು ವಿಷಯವನ್ನು ಬೇಡಿದರೆ, ಮತ್ತು ಆ ವಿಷಯದಲ್ಲಿ ಪಾಪ ಮಾಡುವುದನ್ನು ಅಥವಾ ಅನ್ಯಾಯ ಮಾಡುವುದನ್ನು ನನಗೆ ಸುಲಭಗೊಳಿಸಿಕೊಡು ಮುಂತಾದ ಪಾಪದ ಪ್ರಾರ್ಥನೆಯಿಲ್ಲದಿದ್ದರೆ, ಹಾಗೆಯೇ ತನ್ನ ಮಕ್ಕಳು ಅಥವಾ ಸಂಬಂಧಿಕರ ವಿರುದ್ಧ ಪ್ರಾರ್ಥಿಸುವುದು ಮುಂತಾದ ರಕ್ತ ಸಂಬಂಧವನ್ನು ಮುರಿಯುವ ಬೇಡಿಕೆಯಿಲ್ಲದಿದ್ದರೆ, ಅಲ್ಲಾಹು ಅವನ ಪ್ರಾರ್ಥನೆಗೆ ಉತ್ತರವಾಗಿ ಮೂರು ವಿಷಯಗಳಲ್ಲಿ ಒಂದನ್ನು ನೀಡದೇ ಇರುವುದಿಲ್ಲ: ಒಂದೋ ಅವನು ಆತನ ಪ್ರಾರ್ಥನೆಗೆ ತ್ವರಿತವಾಗಿ ಉತ್ತರ ನೀಡಿ ಅವನು ಕೇಳಿದ್ದನ್ನು ಕೊಟ್ಟು ಬಿಡುತ್ತಾನೆ. ಅಥವಾ ಅಲ್ಲಾಹು ಪುನರುತ್ಥಾನದ ದಿನದಂದು ಅವನಿಗೆ ಉನ್ನತ ದರ್ಜೆಯನ್ನು ಅಥವಾ ದಯೆಯನ್ನು ಮತ್ತು ಅವನ ಪಾಪಗಳಿಗೆ ಕ್ಷಮೆಯನ್ನು ನೀಡುವ ಮೂಲಕ ಆ ಪ್ರಾರ್ಥನೆಗೆ ಉತ್ತರ ನೀಡುವುದನ್ನು ವಿಳಂಬ ಮಾಡುತ್ತಾನೆ. ಅಥವಾ ಅಲ್ಲಾಹು ಆ ಪ್ರಾರ್ಥನೆಗೆ ತಕ್ಕಂತೆ, ಇಹಲೋಕದಲ್ಲಿ ಅವನಿಗೆ ಸಂಭವಿಸಬಹುದಾದ ಒಂದು ಹಾನಿಯನ್ನು ತಡೆಯುತ್ತಾನೆ. ಆಗ ಸಹಚರರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಹಾಗಾದರೆ ಈ ಶ್ರೇಷ್ಠತೆಗಳಲ್ಲಿ ಒಂದನ್ನು ಪಡೆಯಲು ನಾವು ಹೆಚ್ಚು ಹೆಚ್ಚು ಪ್ರಾರ್ಥಿಸಬೇಕು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅಲ್ಲಾಹನ ಬಳಿ ಏನಿದೆಯೋ ಅದು ನೀವು ಕೇಳುವುದಕ್ಕಿಂತಲೂ ಹೆಚ್ಚು ಮತ್ತು ದೊಡ್ಡದಾಗಿದೆ. ಏಕೆಂದರೆ ಅವನ ಉಡುಗೊರೆಗಳು ಖಾಲಿಯಾಗುವುದಿಲ್ಲ ಮತ್ತು ಅದಕ್ಕೆ ಅಂತ್ಯವೂ ಇಲ್ಲ.

ಹದೀಸಿನ ಪ್ರಯೋಜನಗಳು

  1. ಮುಸಲ್ಮಾನನ ಪ್ರಾರ್ಥನೆಗೆ ಉತ್ತರ ದೊರೆಯುತ್ತದೆ. ಅದು ತಿರಸ್ಕೃತವಾಗುವುದಿಲ್ಲ. ಆದರೆ ಅದಕ್ಕೆ ಷರತ್ತುಗಳು ಮತ್ತು ಶಿಷ್ಟಾಚಾರಗಳಿವೆ. ಆದ್ದರಿಂದ, ಮನುಷ್ಯನು ಹೆಚ್ಚು ಹೆಚ್ಚು ಪ್ರಾರ್ಥಿಸಬೇಕು ಮತ್ತು ಉತ್ತರಕ್ಕಾಗಿ ಆತುರಪಡಬಾರದು.
  2. ಪ್ರಾರ್ಥನೆಗೆ ದೊರೆಯುವ ಉತ್ತರವು ಬೇಡಿಕೆಯು ಈಡೇರುವ ಮೂಲಕವೇ ಆಗಬೇಕೆಂದಿಲ್ಲ. ಕೆಲವೊಮ್ಮೆ ಆ ಪ್ರಾರ್ಥನೆಯ ಮೂಲಕ ಪಾಪಗಳು ಕ್ಷಮಿಸಲ್ಪಡುತ್ತವೆ, ಅಥವಾ ಅದನ್ನು ಪರಲೋಕದಲ್ಲಿ ಅವನಿಗಾಗಿ ತೆಗೆದಿಡಲಾಗುತ್ತದೆ.
  3. ಇಬ್ನ್ ಬಾಝ್ ಹೇಳಿದರು: "ನಿರಂತರವಾಗಿ ಪ್ರಾರ್ಥಿಸುವುದು, ಅಲ್ಲಾಹನ ಬಗ್ಗೆ ಒಳ್ಳೆಯ ಭಾವನೆಯನ್ನು ಹೊಂದಿರುವುದು ಮತ್ತು ಹತಾಶನಾಗದಿರುವುದು ಪ್ರಾರ್ಥನೆಗೆ ಉತ್ತರ ದೊರೆಯುವ ಪ್ರಮುಖ ಕಾರಣಗಳಾಗಿವೆ. ಆದ್ದರಿಂದ, ಅಲ್ಲಾಹನೊಂದಿಗೆ ನಿರಂತರವಾಗಿ ಪ್ರಾರ್ಥಿಸಬೇಕು, ಅವನ ಬಗ್ಗೆ ಒಳ್ಳೆಯ ಭಾವನೆಯನ್ನು ಹೊಂದಿರಬೇಕು ಮತ್ತು ಅವನು ವಿವೇಕಪೂರ್ಣನು ಮತ್ತು ಸರ್ವಜ್ಞನೆಂದು ತಿಳಿದಿರಬೇಕು. ಅಲ್ಲಾಹು ತನ್ನ ವಿವೇಕಯುತ ಉದ್ದೇಶಕ್ಕಾಗಿ ಉತ್ತರವನ್ನು ತ್ವರಿತಗೊಳಿಸಬಹುದು, ವಿವೇಕಯುತ ಉದ್ದೇಶಕ್ಕಾಗಿ ಅದನ್ನು ವಿಳಂಬಗೊಳಿಸಲೂಬಹುದು, ಅಥವಾ ಪ್ರಾರ್ಥಿಸಿದವನಿಗೆ ಅವನು ಬೇಡಿದ್ದಕ್ಕಿಂತಲೂ ಉತ್ತಮವಾದದ್ದನ್ನು ನೀಡಬಹುದು."
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ الأسامية الهولندية الغوجاراتية الرومانية المجرية الموري الجورجية
ಅನುವಾದಗಳನ್ನು ತೋರಿಸಿ
ಇನ್ನಷ್ಟು