عَنِ ابْنِ عَبَّاسٍ رضي الله عنهما:
أَنَّ نَبِيَّ اللهِ صَلَّى اللهُ عَلَيْهِ وَسَلَّمَ كَانَ يَقُولُ عِنْدَ الْكَرْبِ: «لَا إِلَهَ إِلَّا اللهُ الْعَظِيمُ الْحَلِيمُ، لَا إِلَهَ إِلَّا اللهُ رَبُّ الْعَرْشِ الْعَظِيمِ، لَا إِلَهَ إِلَّا اللهُ رَبُّ السَّمَاوَاتِ وَرَبُّ الْأَرْضِ وَرَبُّ الْعَرْشِ الْكَرِيمِ».
[صحيح] - [متفق عليه] - [صحيح مسلم: 2730]
المزيــد ...
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಅಲ್ಲಾಹನ ಪ್ರವಾದಿಯು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಕಷ್ಟದ ಸಮಯದಲ್ಲಿ ಹೀಗೆ ಹೇಳುತ್ತಿದ್ದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹವಾದ ಬೇರೆ ದೇವರಿಲ್ಲ, ಅವನು ಪರಮ ಶ್ರೇಷ್ಠನು ಮತ್ತು ಸಹನಶೀಲನು. ಅಲ್ಲಾಹನ ಹೊರತು ಆರಾಧನೆಗೆ ಅರ್ಹವಾದ ಬೇರೆ ದೇವರಿಲ್ಲ, ಅವನು ಭವ್ಯ ಸಿಂಹಾಸನದ ಒಡೆಯನು. ಅಲ್ಲಾಹನ ಹೊರತು ಆರಾಧನೆಗೆ ಅರ್ಹವಾದ ಬೇರೆ ದೇವರಿಲ್ಲ, ಅವನು ಆಕಾಶಗಳ ಒಡೆಯನು, ಭೂಮಿಯ ಒಡೆಯನು ಮತ್ತು ಉದಾತ್ತ ಅರ್ಶ್ (ಸಿಂಹಾಸನ) ನ ಒಡೆಯನು."
[صحيح] - [متفق عليه] - [صحيح مسلم - 2730]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತೀವ್ರ ಸಂಕಟ ಮತ್ತು ದುಃಖದ ಸಮಯದಲ್ಲಿ ಹೀಗೆ ಹೇಳುತ್ತಿದ್ದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹವಾದ ಬೇರೆ ದೇವರಿಲ್ಲ." ಅಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ನೈಜ ದೇವರು ಯಾರೂ ಇಲ್ಲ. "ಪರಮ ಶ್ರೇಷ್ಠನು" ಅಂದರೆ ಗೌರವ ಮತ್ತು ಸ್ಥಾನದಲ್ಲಿ. ಹಾಗೆಯೇ ಅವನ ಸಾರ, ಗುಣಲಕ್ಷಣಗಳು ಮತ್ತು ಕ್ರಿಯೆಗಳಲ್ಲೂ ಅವನು ಪರಮ ಶ್ರೇಷ್ಠನಾಗಿದ್ದಾನೆ. "ಸಹನಶೀಲನು" ಅಂದರೆ ಪಾಪಿಗೆ ಶಿಕ್ಷೆ ನೀಡಲು ಆತುರಪಡದವನು. ಬದಲಿಗೆ, ಅವನು ಅದನ್ನು ವಿಳಂಬ ಮಾಡುತ್ತಾನೆ. ಕೆಲವೊಮ್ಮೆ ಶಿಕ್ಷಿಸುವ ಸಾಮರ್ಥ್ಯವಿದ್ದೂ ಸಹ ಅವನು ಆತನನ್ನು ಕ್ಷಮಿಸಬಹುದು. ಏಕೆಂದರೆ ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. "ಅಲ್ಲಾಹನ ಹೊರತು ಆರಾಧನೆಗೆ ಅರ್ಹವಾದ ಬೇರೆ ದೇವರಿಲ್ಲ, ಅವನು ಭವ್ಯ ಸಿಂಹಾಸನದ ಒಡೆಯನು." ಅಂದರೆ ಭವ್ಯ ಸಿಂಹಾಸನದ ಸೃಷ್ಟಿಕರ್ತನು. "ಅಲ್ಲಾಹನ ಹೊರತು ಆರಾಧನೆಗೆ ಅರ್ಹವಾದ ಬೇರೆ ದೇವರಿಲ್ಲ, ಅವನು ಆಕಾಶಗಳ ಮತ್ತು ಭೂಮಿಯ ಒಡೆಯನು." ಅಂದರೆ, ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನು ಹಾಗೂ ಅವುಗಳಲ್ಲಿರುವ ಎಲ್ಲಾ ವಸ್ತುಗಳ ಮಾಲೀಕನು, ವ್ಯವಸ್ಥಾಪಕನು ಮತ್ತು ಅದರಲ್ಲಿರುವ ಎಲ್ಲವನ್ನೂ ತಾನು ಬಯಸಿದ ರೀತಿಯಲ್ಲಿ ನಿಯಂತ್ರಿಸುವವನು. "ಅವನು ಉದಾತ್ತ ಸಿಂಹಾಸನದ ಒಡೆಯನು." ಅಂದರೆ ಉದಾತ್ತ ಸಿಂಹಾಸನದ ಸೃಷ್ಟಿಕರ್ತನು.