عن أنس بن مالك رضي الله عنه أن رسول الله صلى الله عليه وسلم قال:
«مَنْ أَحَبَّ أَنْ يُبْسَطَ لَهُ فِي رِزْقِهِ، وَيُنْسَأَ لَهُ فِي أَثَرِهِ، فَلْيَصِلْ رَحِمَهُ».
[صحيح] - [متفق عليه] - [صحيح البخاري: 5986]
المزيــد ...
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ಯಾರು ತನ್ನ ಜೀವನೋಪಾಯವು ವಿಶಾಲವಾಗಲು ಮತ್ತು ತನ್ನ ಆಯುಷ್ಯವು ದೀರ್ಘವಾಗಲು ಬಯಸುತ್ತಾನೋ ಅವನು ಕುಟುಂಬ ಸಂಬಂಧಗಳನ್ನು ಜೋಡಿಸಲಿ.”
[صحيح] - [متفق عليه] - [صحيح البخاري - 5986]
ಸಂಬಂಧಿಕರನ್ನು ಭೇಟಿಯಾಗುವುದು, ಅವರಿಗೆ ತನು ಮನ ಧನಗಳಿಂದ ಸಹಾಯ ಮಾಡುವುದು ಮುಂತಾದ ವಿಧಾನಗಳ ಮೂಲಕ ಕುಟುಂಬ ಸಂಬಂಧ ಜೋಡಿಸುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಪ್ರೋತ್ಸಾಹಿಸಿದ್ದಾರೆ ಮತ್ತು ಅದು ಜೀವನೋಪಾಯದ ವಿಶಾಲತೆಗೆ ಮತ್ತು ದೀರ್ಘಾಯುಷ್ಯಕ್ಕೆ ಕಾರಣವಾಗುತ್ತದೆಯೆಂದು ಹೇಳಿದ್ದಾರೆ.