عَنْ عُبَادَةَ بْنِ الصَّامِتِ رَضيَ اللهُ عنهُ قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«الذَّهَبُ بِالذَّهَبِ، وَالْفِضَّةُ بِالْفِضَّةِ، وَالْبُرُّ بِالْبُرِّ، وَالشَّعِيرُ بِالشَّعِيرِ، وَالتَّمْرُ بِالتَّمْرِ، وَالْمِلْحُ بِالْمِلْحِ، مِثْلًا بِمِثْلٍ، سَوَاءً بِسَوَاءٍ، يَدًا بِيَدٍ، فَإِذَا اخْتَلَفَتْ هَذِهِ الْأَصْنَافُ، فَبِيعُوا كَيْفَ شِئْتُمْ، إِذَا كَانَ يَدًا بِيَدٍ».
[صحيح] - [رواه مسلم] - [صحيح مسلم: 1587]
المزيــد ...
ಉಬಾದ ಬಿನ್ ಸಾಮಿತ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಚಿನ್ನವನ್ನು ಚಿನ್ನಕ್ಕೆ, ಬೆಳ್ಳಿಯನ್ನು ಬೆಳ್ಳಿಗೆ, ಗೋಧಿಯನ್ನು ಗೋಧಿಗೆ, ಬಾರ್ಲಿಯನ್ನು ಬಾರ್ಲಿಗೆ, ಖರ್ಜೂರವನ್ನು ಖರ್ಜೂರಕ್ಕೆ, ಉಪ್ಪನ್ನು ಉಪ್ಪಿಗೆ, ಸಮಾನವಾಗಿರುವ ವಸ್ತುವಿಗೆ, ಕೈಯಿಂದ ಕೈಗೆ (ಮಾರಾಟ ಮಾಡಬೇಕು). ಈ ವರ್ಗಗಳು ಬೇರೆ ಬೇರೆಯಾಗಿದ್ದರೆ, ಅದು ಕೈಯಿಂದ ಕೈಗೆ ಆಗಿದ್ದರೆ ನೀವು ಇಚ್ಛಿಸುವಂತೆ ಮಾರಾಟ ಮಾಡಬಹುದು."
[صحيح] - [رواه مسلم] - [صحيح مسلم - 1587]
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಬಡ್ಡಿ ಸಂಬಂಧಿತ ಆರು ವಸ್ತುಗಳ ಸರಿಯಾದ ಮಾರಾಟ ವಿಧಾನವನ್ನು ವಿವರಿಸಿದ್ದಾರೆ. ಅವು ಚಿನ್ನ, ಬೆಳ್ಳಿ, ಗೋಧಿ, ಬಾರ್ಲಿ, ಖರ್ಜೂರ ಮತ್ತು ಉಪ್ಪು. ಇವು ಒಂದೇ ವರ್ಗದ್ದಾಗಿದ್ದರೆ, ಉದಾಹರಣೆಗೆ ಚಿನ್ನವನ್ನು ಚಿನ್ನಕ್ಕೆ ಮತ್ತು ಬೆಳ್ಳಿಯನ್ನು ಬೆಳ್ಳಿಗೆ ಮಾರಾಟ ಮಾಡುವುದು... ಆಗ ಎರಡು ಷರತ್ತುಗಳು ಅನ್ವಯವಾಗುತ್ತವೆ: ಮೊದಲನೆಯದು: ತೂಕದಲ್ಲಿ ಸಮಾನವಾಗಿರುವುದು. ಅವು ಚಿನ್ನ ಮತ್ತು ಬೆಳ್ಳಿಯಂತಹ ತೂಕದಿಂದ ಮಾರಾಟವಾಗುವ ವಸ್ತುಗಳಾಗಿದ್ದರೆ. ಅಥವಾ ಅಳತೆಯಲ್ಲಿ ಸಮಾನವಾಗಿರುವುದು. ಅವು ಗೋಧಿ, ಬಾರ್ಲಿ, ಖರ್ಜೂರ ಮತ್ತು ಉಪ್ಪಿನಂತಹ ಅಳತೆಯಿಂದ ಮಾರಾಟವಾಗುವ ವಸ್ತುಗಳಾಗಿದ್ದರೆ. ಎರಡನೆಯದು: ಮಾರಾಟಗಾರನು ಬೆಲೆಯನ್ನು ಮತ್ತು ಖರೀದಿದಾರನು ವಸ್ತುವನ್ನು ಮಾರಾಟ ಒಪ್ಪಂದ ನಡೆದ ಸ್ಥಳದಲ್ಲಿಯೇ ಪಡೆದುಕೊಳ್ಳಬೇಕು. ಈ ವರ್ಗಗಳು ಬೇರೆ ಬೇರೆಯಾಗಿದ್ದರೆ, ಉದಾಹರಣೆಗೆ ಚಿನ್ನವನ್ನು ಬೆಳ್ಳಿಗೆ ಮತ್ತು ಖರ್ಜೂರವನ್ನು ಗೋಧಿಗೆ ಮಾರಾಟ ಮಾಡುವುದಾದರೆ, ಕೇವಲ ಒಂದು ಷರತ್ತು ಅನ್ವಯವಾಗುತ್ತದೆ. ಅಂದರೆ, ಮಾರಾಟದ ಒಪ್ಪಂದ ನಡೆದ ಸ್ಥಳದಲ್ಲಿಯೇ ಮಾರಾಟಗಾರನು ಬೆಲೆಯನ್ನು ಮತ್ತು ಖರೀದಿದಾರನು ವಸ್ತುವನ್ನು ಪಡೆದುಕೊಳ್ಳುವುದು. ಇಲ್ಲದಿದ್ದರೆ, ಮಾರಾಟವು ಅಸಿಂಧುವಾಗುತ್ತದೆ ಮತ್ತು ಮಾರಾಟಗಾರ ಮತ್ತು ಖರೀದಿದಾರ ಇಬ್ಬರೂ ಸಮಾನವಾಗಿ ನಿಷಿದ್ಧ ಬಡ್ಡಿಯಲ್ಲಿ ಒಳಪಡುತ್ತಾರೆ.