عن أَبِي أُمَامَةَ إِياسِ بنِ ثَعْلَبَةَ الحَارِثِيِّ رضي الله عنه أَنَّ رَسُولَ اللهِ صَلَّى اللهُ عَلَيْهِ وَسَلَّمَ قَالَ:
«مَنِ اقْتَطَعَ حَقَّ امْرِئٍ مُسْلِمٍ بِيَمِينِهِ، فَقَدْ أَوْجَبَ اللهُ لَهُ النَّارَ، وَحَرَّمَ عَلَيْهِ الْجَنَّةَ» فَقَالَ لَهُ رَجُلٌ: وَإِنْ كَانَ شَيْئًا يَسِيرًا يَا رَسُولَ اللهِ؟ قَالَ: «وَإِنْ قَضِيبًا مِنْ أَرَاكٍ».
[صحيح] - [رواه مسلم] - [صحيح مسلم: 137]
المزيــد ...
ಅಬೂ ಉಮಾಮ ಇಯಾಸ್ ಬಿನ್ ಸಅಲಬ ಅಲ್-ಹಾರಿಸಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಆಣೆ ಹಾಕಿ ಒಬ್ಬ ಮುಸಲ್ಮಾನನ ಹಕ್ಕನ್ನು ಕಸಿದುಕೊಳ್ಳುತ್ತಾನೋ, ಅಲ್ಲಾಹು ಅವನಿಗೆ ನರಕವನ್ನು ಕಡ್ಡಾಯಗೊಳಿಸುತ್ತಾನೆ ಮತ್ತು ಸ್ವರ್ಗವನ್ನು ನಿಷಿದ್ಧಗೊಳಿಸುತ್ತಾನೆ." ಆಗ ಒಬ್ಬ ವ್ಯಕ್ತಿ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಅದು ಅಲ್ಪ ಪ್ರಮಾಣದ್ದಾಗಿದ್ದರೂ ಸಹ?" ಅವರು ಹೇಳಿದರು: "ಹೌದು, ಅದು ಅರಾಕ್ ಮರದ ಒಂದು ಸಣ್ಣ ಕಡ್ಡಿಯಾಗಿದ್ದರೂ ಸಹ."
[صحيح] - [رواه مسلم] - [صحيح مسلم - 137]
ತಿಳಿದೂ ಸಹ ಸುಳ್ಳು ಆಣೆ ಮಾಡುವುದರ ವಿರುದ್ಧ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಸಿದ್ದಾರೆ. ಅದೇಕೆಂದರೆ ಅದು ಒಬ್ಬ ಮುಸಲ್ಮಾನನ ಹಕ್ಕನ್ನು ಕಸಿದುಕೊಳ್ಳುವುದಕ್ಕೆ ಕಾರಣವಾಗುತ್ತದೆ. ನರಕಕ್ಕೆ ಅರ್ಹನಾಗುವುದು ಮತ್ತು ಸ್ವರ್ಗದಿಂದ ವಂಚಿತನಾಗುವುದು ಅದಕ್ಕಿರುವ ಪ್ರತಿಫಲವಾಗಿದೆ. ಅಷ್ಟೇ ಅಲ್ಲದೆ, ಅದು ಮಹಾಪಾಪಗಳಲ್ಲಿ ಒಂದಾಗಿದೆ. ಆಗ ಒಬ್ಬ ವ್ಯಕ್ತಿ ಕೇಳಿದರು: ಓ ಅಲ್ಲಾಹನ ಸಂದೇಶವಾಹಕರೇ, ಆಣೆ ಮಾಡಲಾದ ವಿಷಯವು ಸಣ್ಣ ಪ್ರಮಾಣದ್ದಾಗಿದ್ದರೂ ಸಹ (ಇದೇ ಶಿಕ್ಷೆ ನೀಡಲಾಗುವುದೇ)? ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಹೌದು, ಅದು ಅರಾಕ್ ಮರದಿಂದ ತೆಗೆದ ಸಣ್ಣ ಮಿಸ್ವಾಕ್ ಕಡ್ಡಿಯಾಗಿದ್ದರೂ ಸಹ.