عن سعد بن أبي وقاص رضي الله عنه قال: سمعت رسول الله صلى الله عليه وسلم يقول:
«إِنَّ اللهَ يُحِبُّ الْعَبْدَ التَّقِيَّ الْغَنِيَّ الْخَفِيَّ».
[صحيح] - [رواه مسلم] - [صحيح مسلم: 2965]
المزيــد ...
ಸಅದ್ ಬಿನ್ ಅಬೂ ವಕ್ಕಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳ, ಸ್ವಾವಲಂಬಿಯಾದ ಮತ್ತು ಗಮನ ಸೆಳೆಯಲು ಬಯಸದ ದಾಸನನ್ನು ಪ್ರೀತಿಸುತ್ತಾನೆ."
[صحيح] - [رواه مسلم] - [صحيح مسلم - 2965]
ಸರ್ವಶಕ್ತನಾದ ಅಲ್ಲಾಹು ತನ್ನ ಕೆಲವು ದಾಸರನ್ನು ಪ್ರೀತಿಸುತ್ತಾನೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಾರೆ
ಅವನು ದೇವಭಯವುಳ್ಳವರನ್ನು ಪ್ರೀತಿಸುತ್ತಾನೆ: ದೇವಭಯವುಳ್ಳವರು ಎಂದರೆ ಅವನ ಆಜ್ಞೆಗಳನ್ನು ಪಾಲಿಸುವವರು ಮತ್ತು ಅವನು ವಿರೋಧಿಸಿದ ವಿಷಯಗಳಿಂದ ದೂರ ಸರಿಯುವವರು.
ಅವನು ಸ್ವಾವಲಂಬಿಯನ್ನು ಪ್ರೀತಿಸುತ್ತಾನೆ: ಸ್ವಾವಲಂಬಿ ಎಂದರೆ ಜನರನ್ನು ಅವಲಂಬಿಸದೆ ಕೇವಲ ಅಲ್ಲಾಹನನ್ನು ಮಾತ್ರ ಅವಲಂಬಿಸಿ, ಅಗತ್ಯಕ್ಕಾಗಿ ಅವನ ಹೊರತು ಇತರ ಯಾರ ಕಡೆಗೂ ತಿರುಗದವನು.
ಅವನು ಗಮನ ಸೆಳೆಯಲು ಬಯಸದವನನ್ನು ಪ್ರೀತಿಸುತ್ತಾನೆ: ಗಮನ ಸೆಳೆಯಲು ಬಯಸದವನು ಎಂದರೆ ವಿನಮ್ರನು, ಅಲ್ಲಾಹನನ್ನು ಆರಾಧಿಸುವವನು, ತನಗೆ ಪ್ರಯೋಜನ ನೀಡುವ ಕಾರ್ಯಗಳನ್ನು ಮಾತ್ರ ಮಾಡುವವನು, ಇತರರು ತನ್ನನ್ನು ಗುರುತಿಸಬೇಕು, ಪ್ರಶಂಸಿಸಬೇಕು ಮತ್ತು ತನ್ನ ಬಗ್ಗೆ ಮಾತನಾಡಬೇಕು ಎಂದು ಬಯಸದವನು.