عَنْ أَبِي هُرَيْرَةَ رَضيَ اللهُ عنهُ قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«إِذَا انْتَهَى أَحَدُكُمْ إِلَى الْمَجْلِسِ فَلْيُسَلِّمْ، فَإِذَا أَرَادَ أَنْ يَقُومَ فَلْيُسَلِّمْ، فَلَيْسَتِ الْأُولَى بِأَحَقَّ مِنَ الْآخِرَةِ».
[حسن] - [رواه أبو داود والترمذي والنسائي في الكبرى وأحمد] - [سنن أبي داود: 5208]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮ್ಮಲ್ಲೊಬ್ಬನು ಒಂದು ಸಭೆಗೆ (ಮಜ್ಲಿಸ್) ತಲುಪಿದರೆ, ಅವನು ಸಲಾಮ್ ಹೇಳಲಿ. ಮತ್ತು ಅವನು (ಅಲ್ಲಿಂದ) ಎದ್ದು ಹೋಗಲು ಬಯಸಿದರೆ, ಸಲಾಮ್ ಹೇಳಲಿ. ಏಕೆಂದರೆ ಮೊದಲನೆಯದು ಕೊನೆಯದಕ್ಕಿಂತ ಹೆಚ್ಚು ಅರ್ಹವಾದುದಲ್ಲ."
[حسن] - [رواه أبو داود والترمذي والنسائي في الكبرى وأحمد] - [سنن أبي داود - 5208]
ಜನರು ಕುಳಿತಿರುವ ಸ್ಥಳಕ್ಕೆ ಬರುವವನು, ಅವರಿಗೆ ಸಲಾಮ್ ಹೇಳಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿರ್ದೇಶಿಸಿದ್ದಾರೆ. ಹಾಗೆಯೇ, ಅವನು ಅಲ್ಲಿಂದ ಎದ್ದು ಹೋಗಲು ಬಯಸಿದರೆ, ಅವನು ಅಲ್ಲಿರುವವರಿಗೆ ಸಲಾಮ್‌ನೊಂದಿಗೆ ವಿದಾಯ ಹೇಳಬೇಕು. ಏಕೆಂದರೆ ಬರುವಾಗ ಹೇಳುವ ಮೊದಲ ಸಲಾಮ್, ಹೊರಡುವಾಗ ಹೇಳುವ ಕೊನೆಯ ಸಲಾಮ್‌ಗಿಂತ ಹೆಚ್ಚು ಅರ್ಹವಾದುದಲ್ಲ.