عَنْ عِيَاضِ بْنِ حِمَارٍ أَخِي بَنِي مُجَاشِعٍ رَضيَ اللهُ عنه قَالَ: قَامَ فِينَا رَسُولُ اللهِ صَلَّى اللهُ عَلَيْهِ وَسَلَّمَ ذَاتَ يَوْمٍ خَطِيبًا، فَقَالَ: وَسَاقَ الْحَدِيثَ وَفِيهِ:
«وَإِنَّ اللهَ أَوْحَى إِلَيَّ أَنْ تَوَاضَعُوا حَتَّى لَا يَفْخَرَ أَحَدٌ عَلَى أَحَدٍ، وَلَا يَبْغِي أَحَدٌ عَلَى أَحَدٍ».
[صحيح] - [رواه مسلم] - [صحيح مسلم: 2865]
المزيــد ...
ಬನೂ ಮುಜಾಶಿಅ್ ಗೋತ್ರದ ಇಯಾದ್ ಇಬ್ನ್ ಹಿಮಾರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಂದು ದಿನ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ಮಧ್ಯೆ ಎದ್ದು ನಿಂತು ಪ್ರವಚನ ನೀಡಿದರು. ಅವರು ಹೇಳಿದರು: (ಮತ್ತು ಅವರು ಹದೀಸ್ ಅನ್ನು ಮುಂದುವರಿಸಿದರು, ಅದರಲ್ಲಿ ಇದೂ ಇತ್ತು):
"ಖಂಡಿತವಾಗಿಯೂ ನೀವು ಪರಸ್ಪರ ವಿನಯ ತೋರುವುದು ಕಡ್ಡಾಯವೆಂದು ಅಲ್ಲಾಹು ನನಗೆ 'ವಹೀ' (ದೈವಿಕ ಸಂದೇಶ) ನೀಡಿದ್ದಾನೆ. ಎಲ್ಲಿಯವರೆಗೆಂದರೆ, ಯಾರೊಬ್ಬನೂ ಇನ್ನೊಬ್ಬನ ಮೇಲೆ ಜಂಭ ಕೊಚ್ಚಿಕೊಳ್ಳಬಾರದು, ಮತ್ತು ಯಾರೊಬ್ಬನೂ ಇನ್ನೊಬ್ಬನ ಮೇಲೆ ಅತಿಕ್ರಮಣ ಮಾಡಬಾರದು."
[صحيح] - [رواه مسلم] - [صحيح مسلم - 2865]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಾಬಿಗಳ ಮಧ್ಯೆ ನಿಂತು ಪ್ರವಚನ ನೀಡಿದರು. ಅವರು ಹೇಳಿದ ಮಾತುಗಳಲ್ಲಿ ಇದೂ ಒಂದಾಗಿತ್ತು: ಖಂಡಿತವಾಗಿಯೂ ಜನರು ತಮ್ಮ ನಡುವೆ ವಿನಯ ತೋರುವುದು ಕಡ್ಡಾಯವಾಗಿದೆ ಎಂದು ಅಲ್ಲಾಹು ಅವರಿಗೆ (ಪ್ರವಾದಿಗೆ) 'ವಹೀ' ನೀಡಿದ್ದಾನೆ. ಅದೇನೆಂದರೆ, ಸೃಷ್ಟಿಗಳ ಮುಂದೆ ರೆಕ್ಕೆಗಳನ್ನು ತಗ್ಗಿಸುವುದು ಮತ್ತು ಮೃದುವಾಗಿ ವರ್ತಿಸುವುದು. ಅಂದರೆ, ಯಾರೊಬ್ಬನೂ ತನ್ನ ವಂಶ, ಸಂಪತ್ತು ಅಥವಾ ಬೇರೆ ಯಾವುದರಿಂದಲೂ ಇನ್ನೊಬ್ಬನ ಮೇಲೆ ಹಿರಿಮೆ, ಅಹಂಕಾರ ಮತ್ತು ಗೌರವವನ್ನು ಹೇಳಿಕೊಳ್ಳುತ್ತಾ ಜಂಭಪಡಬಾರದು, ಮತ್ತು ಯಾರೊಬ್ಬನೂ ಇನ್ನೊಬ್ಬನ ಮೇಲೆ ಅನ್ಯಾಯ ಅಥವಾ ದೌರ್ಜನ್ಯ ಮಾಡಬಾರದು.