+ -

عن أبي هريرة رضي الله عنه:
أَنَّ رَجُلًا قَالَ لِلنَّبِيِّ صَلَّى اللهُ عَلَيْهِ وَسَلَّمَ: أَوْصِنِي، قَالَ: «لَا تَغْضَبْ» فَرَدَّدَ مِرَارًا قَالَ: «لَا تَغْضَبْ».

[صحيح] - [رواه البخاري] - [صحيح البخاري: 6116]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಒಬ್ಬ ವ್ಯಕ್ತಿ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನಗೆ ಹಿತವಚನ ನೀಡಿರಿ." ಅವರು ಹೇಳಿದರು: "ಕೋಪಗೊಳ್ಳಬೇಡಿ." ಆ ವ್ಯಕ್ತಿ ಹಲವು ಬಾರಿ ಅದೇ ಪ್ರಶ್ನೆ ಕೇಳಿದಾಗಲೂ ಪ್ರವಾದಿಯವರು ಹೇಳಿದರು: "ಕೋಪಗೊಳ್ಳಬೇಡಿ."

[صحيح] - [رواه البخاري] - [صحيح البخاري - 6116]

ವಿವರಣೆ

ಸಹಾಬಿಗಳಲ್ಲಿ (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಒಬ್ಬರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಉಪಕಾರವಾಗುವ ಏನಾದರೊಂದು ವಿಷಯವನ್ನು ತಿಳಿಸಬೇಕೆಂದು ವಿನಂತಿಸಿದಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರೊಡನೆ "ಕೋಪಗೊಳ್ಳಬೇಡಿ" ಎಂದು ಹೇಳಿದರು. ಇದರ ಅರ್ಥ: ಕೋಪಕ್ಕೆ ಕಾರಣವಾಗುವ ಎಲ್ಲಾ ವಿಷಯಗಳಿಂದಲೂ ದೂರವಿರುವುದು, ಕೋಪ ಬಂದರೆ ಮನಸ್ಸನ್ನು ನಿಯಂತ್ರಿಸುವುದು, ಮತ್ತು ಕೋಪದಿಂದ ಕೊಲ್ಲುವುದು, ಥಳಿಸುವುದು, ನಿಂದಿಸುವುದು ಮುಂತಾದವುಗಳಿಗೆ ಮುಂದಾಗದಿರುವುದು.
ಆ ವ್ಯಕ್ತಿ ಪುನಃ ಪುನಃ ಹಿತವಚನ ನೀಡಬೇಕೆಂದು ಹೇಳಿದಾಗಲೂ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) "ಕೋಪಗೊಳ್ಳಬೇಡಿ." ಎಂದು ಹೇಳುವುದರ ಹೊರತು ಬೇರೇನೂ ಹೇಳಲಿಲ್ಲ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಜರ್ಮನ್ ಜಪಾನೀ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الطاجيكية الكينياروندا الرومانية المجرية التشيكية الموري المالاجاشية الإيطالية الأورومو الولوف البلغارية الأذربيجانية الأوزبكية الأوكرانية الجورجية اللينجالا المقدونية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಈ ಹದೀಸಿನಲ್ಲಿ ಕೋಪ ಮತ್ತು ಅದರ ಕಾರಣಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಏಕೆಂದರೆ ಅದು ಎಲ್ಲಾ ಕೆಡುಕುಗಳನ್ನೂ ಒಳಗೊಂಡಿದೆ. ಅದರಿಂದ ದೂರವಿರುವುದು ಎಲ್ಲಾ ರೀತಿಯ ಒಳಿತುಗಳಿಗೆ ಕಾರಣವಾಗುತ್ತದೆ.
  2. ಅಲ್ಲಾಹು ನಿಷೇಧಿಸಿದ ಕಾರ್ಯಗಳನ್ನು ಯಾರಾದರೂ ಮಾಡುವಾಗ ಕೋಪಗೊಳ್ಳುವುದು ಪ್ರಶಂಸನೀಯವಾಗಿದೆ.
  3. ಕೇಳುಗನು ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ಅದರ ಮಹತ್ವವನ್ನು ತಿಳಿದುಕೊಳ್ಳಲು ಅಗತ್ಯ ಸಂದರ್ಭಗಳಲ್ಲಿ ಅದನ್ನು ಪುನರಾವರ್ತಿಸಬೇಕೆಂದು ಈ ಹದೀಸ್ ತಿಳಿಸುತ್ತದೆ.
  4. ವಿದ್ವಾಂಸರಿಂದ ಹಿತವಚನ ಪಡೆಯುವುದರ ಶ್ರೇಷ್ಠತೆಯನ್ನು ಈ ಹದೀಸ್ ತಿಳಿಸುತ್ತದೆ.
ಇನ್ನಷ್ಟು