عن أبي سعيد الخدري رضي الله عنه أن رسول الله صلى الله عليه وسلم قال:
«لَا ضَرَرَ وَلَا ضِرَارَ، مَنْ ضَارَّ ضَرَّهُ اللَّهُ، وَمَنْ شَاقَّ شَقَّ اللَّهُ عَلَيْهِ».
[صحيح بشواهده] - [رواه الدارقطني] - [سنن الدارقطني: 3079]
المزيــد ...
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"(ವಿನಾಕಾರಣ) ತೊಂದರೆ ಕೊಡಬಾರದು ಮತ್ತು (ಪ್ರತೀಕಾರ ರೂಪದಲ್ಲೂ) ತೊಂದರೆ ಕೊಡಬಾರದು. ಯಾರು ತೊಂದರೆ ಕೊಡುತ್ತಾನೋ ಅವನಿಗೆ ಅಲ್ಲಾಹು ತೊಂದರೆ ಕೊಡುತ್ತಾನೆ. ಯಾರು ಕಷ್ಟಗೊಳಿಸುತ್ತಾನೋ ಅವನಿಗೆ ಅಲ್ಲಾಹು ಕಷ್ಟಗೊಳಿಸುತ್ತಾನೆ."
[صحيح بشواهده] - [رواه الدارقطني] - [سنن الدارقطني - 3079]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸ್ವಯಂ ತನಗೂ ಇತರರಿಗೂ ಉಂಟಾಗುವ ತೊಂದರೆಗಳ ಎಲ್ಲಾ ವಿಧಗಳನ್ನೂ, ರೂಪಗಳನ್ನೂ ತಡೆಗಟ್ಟುವುದು ಕಡ್ಡಾಯವಾಗಿದೆ ಮತ್ತು ಯಾವುದೇ ವ್ಯಕ್ತಿಯೂ ತನಗಾಗಲಿ ಅಥವಾ ಇತರರಿಗಾಗಲಿ ತೊಂದರೆ ಕೊಡುವುದು ಧರ್ಮಸಮ್ಮತವಲ್ಲ.
ಅದೇ ರೀತಿ, ಯಾರಾದರೂ ತೊಂದರೆ ಕೊಟ್ಟರೆ ಅದಕ್ಕೆ ಪ್ರತಿಯಾಗಿ ಅವನಿಗೆ ತೊಂದರೆ ಕೊಡುವುದು ಧರ್ಮಸಮ್ಮತವಲ್ಲ. ಏಕೆಂದರೆ, ತೊಂದರೆಯನ್ನು ತೊಂದರೆಯಿಂದ ನಿವಾರಿಸಲಾಗುವುದಿಲ್ಲ. ಆದರೆ ಹದ್ದು ಮೀರದ ರೀತಿಯಲ್ಲಿರುವ ಪ್ರತೀಕಾರ ಶಿಕ್ಷೆಗಳು ಇದಕ್ಕೆ ಹೊರತಾಗಿವೆ.
ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಿಗೆ ತೊಂದರೆ ಕೊಡುವವನಿಗೆ ತೊಂದರೆ ಉಂಟಾಗುತ್ತದೆ ಮತ್ತು ಜನರಿಗೆ ಕಷ್ಟ ಕೊಡುವವನು ಕಷ್ಟವನ್ನು ಅನುಭವಿಸುತ್ತಾನೆ ಎಂದು ಎಚ್ಚರಿಕೆ ನೀಡುತ್ತಾರೆ.