عَنِ ابنِ مَسعُودٍ رَضِيَ اللَّهُ عَنْهُ قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«لَا يَحِلُّ دَمُ امْرِئٍ مُسْلِمٍ إِلَّا بِإِحْدَى ثَلَاثٍ: الثَّيِّبُ الزَّانِي، وَالنَّفْسُ بِالنَّفْسِ، وَالتَّارِكُ لِدِينِهِ المُفَارِقُ لِلْجَمَاعَةِ».
[صحيح] - [متفق عليه] - [صحيح مسلم: 1676]
المزيــد ...
ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಒಬ್ಬ ಮುಸ್ಲಿಂ ವ್ಯಕ್ತಿಯ ರಕ್ತವು (ಅವನ ಪ್ರಾಣ ತೆಗೆಯುವುದು) ಮೂರು (ಕಾರಣಗಳಲ್ಲಿ) ಒಂದರಿಂದ ಹೊರತು ಹಲಾಲ್ ಆಗುವುದಿಲ್ಲ: ವಿವಾಹಿತ ವ್ಯಭಿಚಾರಿ, ಪ್ರಾಣಕ್ಕೆ ಪ್ರತಿಯಾಗಿ ಪ್ರಾಣ (ಕೊಲೆಗೆ ಪ್ರತೀಕಾರ), ಮತ್ತು ತನ್ನ ಧರ್ಮವನ್ನು ತೊರೆದು ಜಮಾಅತ್ (ಮುಸ್ಲಿಂ ಸಮುದಾಯ) ದಿಂದ ಬೇರ್ಪಟ್ಟವನು".
[صحيح] - [متفق عليه] - [صحيح مسلم - 1676]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಮುಸ್ಲಿಮನ ರಕ್ತವು (ಮುಸ್ಲಿಮನನ್ನು ಕೊಲೆ ಮಾಡುವುದು) ಹರಾಮ್ (ನಿಷಿದ್ಧ) ಆಗಿದೆ, ಅವನು ಮೂರು ವಿಷಯಗಳಲ್ಲಿ ಒಂದನ್ನು ಮಾಡಿದರೆ ಹೊರತು: ಮೊದಲನೆಯದು: ಸರಿಯಾದ ಕರಾರಿನ ಮೂಲಕ ವಿವಾಹಿತನಾಗಿದ್ದೂ ಸಹ ಯಾರು ವ್ಯಭಿಚಾರದ ಅಶ್ಲೀಲ ಕೃತ್ಯದಲ್ಲಿ ತೊಡಗುತ್ತಾನೋ, ಅವನನ್ನು ಕಲ್ಲೆಸೆದು ಕೊಲ್ಲುವುದು ಹಲಾಲ್ (ಧರ್ಮಸಮ್ಮತ) ಆಗುತ್ತದೆ. ಎರಡನೆಯದು: ಯಾರು ನಿರಪರಾಧಿ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ, ಕೊಲ್ಲಲು ಯಾವುದೇ ಹಕ್ಕಿಲ್ಲದೆ ಕೊಲ್ಲುತ್ತಾನೋ, ಅವನನ್ನು (ಪ್ರತೀಕಾರದ) ಶರತ್ತುಗಳೊಂದಿಗೆ ಕೊಲ್ಲಲಾಗುತ್ತದೆ. ಮೂರನೆಯದು: ಮುಸ್ಲಿಂ ಸಮುದಾಯದಿಂದ ಹೊರಹೋದವನು; ಒಂದೋ ಧರ್ಮಪರಿತ್ಯಾಗಿಯಾಗಿ ಇಸ್ಲಾಂ ಧರ್ಮವನ್ನೇ ಸಂಪೂರ್ಣವಾಗಿ ತ್ಯಜಿಸುವ ಮೂಲಕ ಹೊರಹೋದವನು, ಅಥವಾ ಧರ್ಮ ಪರಿತ್ಯಾಗ ಮಾಡದೆ, ಅದರ (ಧರ್ಮದ) ಕೆಲವು ಭಾಗಗಳನ್ನು ತ್ಯಜಿಸುವ ಮೂಲಕ (ಸಮುದಾಯದಿಂದ) ಬೇರ್ಪಡುವವನು, ಉದಾಹರಣೆಗೆ ದಂಗೆಕೋರರು, ದರೋಡೆಕೋರರು, ಮತ್ತು ಖವಾರಿಜ್‌ಗಳ ಪೈಕಿ ಯುದ್ಧ ಮಾಡುವವರು ಮುಂತಾದವರು.