+ -

عَنْ عَبْدِ اللهِ بْنِ بُسْرٍ رضي الله عنه أَنَّ رَجُلاً قَالَ: يَا رَسُولَ اللهِ إِنَّ شَرَائِعَ الإِسْلاَمِ قَدْ كَثُرَتْ عَلَيَّ، فَأَخْبِرْنِي بِشَيْءٍ أَتَشَبَّثُ بِهِ، قَالَ:
«لاَ يَزَالُ لِسَانُكَ رَطْبًا مِنْ ذِكْرِ اللَّهِ».

[صحيح] - [رواه الترمذي وابن ماجه وأحمد] - [سنن الترمذي: 3375]
المزيــد ...

ಅಬ್ದುಲ್ಲಾಹ್ ಇಬ್ನ್ ಬುಸ್ರ್(ರ) ರಿಂದ ವರದಿ. ಒಬ್ಬ ವ್ಯಕ್ತಿ ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಇಸ್ಲಾಮಿನ ನಿಯಮಗಳು ನನಗೆ ಹೆಚ್ಚಾಗಿವೆ. ಆದ್ದರಿಂದ ನಾನು ಬಿಗಿಯಾಗಿ ಹಿಡಿದುಕೊಳ್ಳಬಹುದಾದ ಒಂದು ವಿಷಯವನ್ನು ನನಗೆ ತಿಳಿಸಿಕೊಡಿ." ಅವರು ಹೇಳಿದರು:
"ನಿಮ್ಮ ನಾಲಗೆಯು ಅಲ್ಲಾಹನ ಸ್ಮರಣೆಯಿಂದ ಸದಾ ಒದ್ದೆಯಾಗಿರಲಿ."

[صحيح] - [رواه الترمذي وابن ماجه وأحمد] - [سنن الترمذي - 3375]

ವಿವರಣೆ

ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು, ಐಚ್ಛಿಕ ಆರಾಧನೆಗಳು ಹೆಚ್ಚಾದ ಕಾರಣ ಅವುಗಳನ್ನು ನಿರ್ವಹಿಸಲು ತನಗೆ ಸಾಧ್ಯವಾಗುವುದಿಲ್ಲವೆಂದು ದೂರಿಕೊಂಡರು. ನಂತರ ಅವರು, ಹೆಚ್ಚು ಪ್ರತಿಫಲವನ್ನು ಹೊಂದಿರುವ ಮತ್ತು ಸರಳವಾಗಿರುವ, ತನಗೆ ಮಾಡಲು ಸಾಧ್ಯವಾಗುವ ಮತ್ತು ಬಿಗಿಯಾಗಿ ಹಿಡಿದುಕೊಳ್ಳಬಹುದಾದ ಒಂದು ಕಾರ್ಯದ ಬಗ್ಗೆ ತಿಳಿಸಿಕೊಡಬೇಕೆಂದು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ)ವಿನಂತಿಸಿದರು.
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆ ವ್ಯಕ್ತಿಯೊಂದಿಗೆ, ಅವರ ನಾಲಗೆಯು ಎಲ್ಲಾ ಸಮಯ ಮತ್ತು ಎಲ್ಲಾ ಪರಿಸ್ಥಿತಿಗಳಲ್ಲಿ ತಸ್ಬೀಹ್, ತಹ್ಮೀದ್‌, ಇಸ್ತಿಗ್ಫಾರ್, ದುಆ ಮುಂತಾದ ಅಲ್ಲಾಹನ ಸ್ಮರಣೆಗಳ ಮೂಲಕ ಸದಾ ಹಸಿಯಾಗಿ, ಅಲುಗಾಡುತ್ತಾ ಇರಬೇಕೆಂದು ಸೂಚಿಸಿದರು.

ಹದೀಸಿನ ಪ್ರಯೋಜನಗಳು

  1. ನಿರಂತರ ಅಲ್ಲಾಹನನ್ನು ಸ್ಮರಿಸುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.
  2. ಪ್ರತಿಫಲದ ಮಾರ್ಗಗಳನ್ನು ಸುಲಭಗೊಳಿಸಿದ್ದು ಅಲ್ಲಾಹನ ಅತಿದೊಡ್ಡ ಔದಾರ್ಯಗಳಲ್ಲಿ ಒಂದಾಗಿದೆ.
  3. ಒಳಿತು ಮತ್ತು ಸತ್ಕಾರ್ಯಗಳನ್ನು ನಿರ್ವಹಿಸುವ ವಿಷಯದಲ್ಲಿ ಜನರ ಶ್ರೇಷ್ಠತೆಯಲ್ಲಿ ಹೆಚ್ಚು-ಕಡಿಮೆಯಿರುತ್ತದೆ.
  4. ತಸ್ಬೀಹ್, ತಹ್ಮೀದ್‌, ತಹ್ಲೀಲ್, ತಕ್ಬೀರ್‌ ಮುಂತಾದ ಅಲ್ಲಾಹನ ಸ್ಮರಣೆಗಳನ್ನು ಹೃದಯ ಸಾನಿಧ್ಯತೆಯೊಂದಿಗೆ ಹೆಚ್ಚು ಹೆಚ್ಚಾಗಿ ನಿರ್ವಹಿಸುವುದು ಹಲವಾರು ಐಚ್ಛಿಕ ಸತ್ಕರ್ಮಗಳ ಸ್ಥಾನವನ್ನು ಹೊಂದಿದೆ.
  5. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಶ್ನೆ ಕೇಳುವವರಿಗೆ ಸಂಪೂರ್ಣ ಪರಿಗಣನೆ ನೀಡುತ್ತಿದ್ದರು. ಏಕೆಂದರೆ ಅವರು ಪ್ರತಿಯೊಬ್ಬರಿಗೂ ಸೂಕ್ತ ರೀತಿಯಲ್ಲಿ ಉತ್ತರ ನೀಡುತ್ತಿದ್ದರು.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಥಾಯ್ ಜರ್ಮನ್ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية الليتوانية الدرية الصربية الطاجيكية الكينياروندا الرومانية المجرية التشيكية الموري المالاجاشية الأورومو الولوف الأذربيجانية الأوزبكية الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು