عَنْ أَبِي هُرَيْرَةَ رَضِيَ اللَّهُ عَنْهُ قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«مِنْ حُسْنِ إِسْلَامِ المَرْءِ تَرْكُهُ مَا لَا يَعْنِيهِ».
[قال النووي: حديث حسن] - [رواه الترمذي وغيره] - [الأربعون النووية: 12]
المزيــد ...
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಒಬ್ಬ ವ್ಯಕ್ತಿಯ ಇಸ್ಲಾಂನ ಸೌಂದರ್ಯಗಳಲ್ಲಿ ಒಂದು ಏನೆಂದರೆ, ಅವನಿಗೆ ಸಂಬಂಧಿಸದ ವಿಷಯವನ್ನು ಅವನು ತ್ಯಜಿಸುವುದು".
[قال النووي: حديث حسن] - [رواه الترمذي وغيره] - [الأربعون النووية - 12]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಸ್ಪಷ್ಟಪಡಿಸುವುದೇನೆಂದರೆ, ಒಬ್ಬ ಮುಸ್ಲಿಮನ ಇಸ್ಲಾಂನ ಸೌಂದರ್ಯದ ಪರಿಪೂರ್ಣತೆ ಮತ್ತು ಅವನ ಈಮಾನ್‌ನ (ವಿಶ್ವಾಸದ) ಸಂಪೂರ್ಣತೆಗಳಲ್ಲಿ ಒಂದು ಏನೆಂದರೆ, ಅವನಿಗೆ ಸಂಬಂಧಿಸದ, ಅವನಿಗೆ ಹೊಂದಿಕೊಳ್ಳದ, ಅವನಿಗೆ ಮುಖ್ಯವಲ್ಲದ ಮತ್ತು ಅವನಿಗೆ ಪ್ರಯೋಜನ ನೀಡದ ಮಾತುಗಳು ಮತ್ತು ಕೆಲಸಗಳಿಂದ, ಅಥವಾ ಧಾರ್ಮಿಕ ಮತ್ತು ಲೌಕಿಕ ವಿಷಯಗಳಲ್ಲಿ ಅವನಿಗೆ ಸಂಬಂಧಿಸದ ವಿಷಯಗಳಿಂದ ದೂರವಿರುವುದು. ಏಕೆಂದರೆ, ಮನುಷ್ಯನಿಗೆ ಸಂಬಂಧಿಸದ ವಿಷಯಗಳಲ್ಲಿ ತೊಡಗುವುದು, ಬಹುಶಃ ಅವನಿಗೆ ಸಂಬಂಧಿಸಿದ ವಿಷಯಗಳಿಂದ ಅವನನ್ನು ವಿಮುಖಗೊಳಿಸಬಹುದು, ಅಥವಾ ಅವನು ಯಾವುದರಿಂದ ದೂರವಿರಬೇಕೋ ಅದರ ಕಡೆಗೆ ಅವನನ್ನು ಕೊಂಡೊಯ್ಯಬಹುದು. ಏಕೆಂದರೆ, ಮನುಷ್ಯನು ಪುನರುತ್ಥಾನ ದಿನದಂದು ತನ್ನ ಕರ್ಮಗಳ ಬಗ್ಗೆ ಉತ್ತರದಾಯಿಯಾಗಿದ್ದಾನೆ.