عَنْ أَبِي سَعِيدٍ رَضِيَ اللَّهُ عَنْهُ قَالَ:
اعْتَكَفَ رَسُولُ اللَّهِ صَلَّى اللهُ عَلَيْهِ وَسَلَّمَ فِي المَسْجِدِ، فَسَمِعَهُمْ يَجْهَرُونَ بِالقِرَاءَةِ، فَكَشَفَ السِّتْرَ، فَقَالَ: «أَلَا إِنَّ كُلَّكُمْ مُنَاجٍ رَبَّهُ، فَلَا يُؤْذِيَنَّ بَعْضُكُمْ بَعْضًا، وَلَا يَرْفَعْ بَعْضُكُمْ عَلَى بَعْضٍ فِي القِرَاءَةِ»، أَوْ قَالَ: «فِي الصَّلَاةِ».

[صحيح] - [رواه أبو داود] - [سنن أبي داود: 1332]
المزيــد ...

ಅಬೂ ಸಈದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯಲ್ಲಿ ಈತಿಕಾಫ್ (ಆರಾಧನೆಗಾಗಿ ಮಸೀದಿಯಲ್ಲೇ ತಂಗುವುದು) ನಿರ್ವಹಿಸುತ್ತಿದ್ದರು. ಆಗ ಅವರು (ಜನರು) ಜೋರಾಗಿ (ಕುರ್‌ಆನ್) ಪಠಿಸುವುದನ್ನು ಕೇಳಿದರು. ತಕ್ಷಣ ಅವರು ಪರದೆಯನ್ನು ಸರಿಸಿ ಹೇಳಿದರು: "ಎಚ್ಚರ! ಖಂಡಿತವಾಗಿಯೂ ನೀವೆಲ್ಲರೂ ನಿಮ್ಮ ಪರಿಪಾಲಕನೊಂದಿಗೆ (ಅಲ್ಲಾಹನೊಂದಿಗೆ) ರಹಸ್ಯ ಸಂಭಾಷಣೆ ನಡೆಸುತ್ತಿದ್ದೀರಿ. ಆದ್ದರಿಂದ ನಿಮ್ಮಲ್ಲಿ ಒಬ್ಬರು ಇನ್ನೊಬ್ಬರಿಗೆ ತೊಂದರೆ ಕೊಡಬಾರದು. ಪಠಣದಲ್ಲಿ - ಅಥವಾ ನಮಾಝಿನಲ್ಲಿ - ನಿಮ್ಮಲ್ಲಿ ಒಬ್ಬರು ಇನ್ನೊಬ್ಬರಿಗಿಂತ ಜೋರಾಗಿ (ಸ್ವರ ಏರಿಸಿ) ಪಠಿಸಬಾರದು."

[صحيح] - [رواه أبو داود] - [سنن أبي داود - 1332]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಸಾಮೀಪ್ಯ ಪಡೆಯಲು ತಮ್ಮ ಮಸೀದಿಯ ಒಳಗಿನ ಒಂದು ಸಣ್ಣ ಗುಡಾರದಲ್ಲಿ ಈತಿಕಾಫ್ ಕುಳಿತಿದ್ದರು. ಆಗ ಸಹಾಬಾಗಳು ಬಹಳ ಜೋರಾಗಿ ಕುರ್‌ಆನ್ ಪಠಿಸುತ್ತಿರುವುದನ್ನು ಮತ್ತು ಅದರಿಂದ ಒಬ್ಬರಿಗೊಬ್ಬರು ತೊಂದರೆಯಾಗುತ್ತಿರುವುದನ್ನು ಕೇಳಿಸಿಕೊಂಡರು. ಆಗ ಅವರು ಗುಡಾರದ ಪರದೆಯನ್ನು ಸರಿಸಿ ಹಾಗೆ ಮಾಡಿದವರನ್ನು ಆಕ್ಷೇಪಿಸುತ್ತಾ ಹೇಳಿದರು: "ನೀವೆಲ್ಲರೂ ಕುರ್‌ಆನ್ ಪಠಣದ ಮೂಲಕ ನಿಮ್ಮ ಪರಿಪಾಲಕನೊಂದಿಗೆ ರಹಸ್ಯವಾಗಿ ಮಾತನಾಡುತ್ತಿದ್ದೀರಿ. ಆದ್ದರಿಂದ ಒಬ್ಬರು ಇನ್ನೊಬ್ಬರಿಗೆ ತೊಂದರೆ ಕೊಡಬಾರದು ಮತ್ತು ಪಠಣದಲ್ಲಿ ಅಥವಾ ನಮಾಝಿನಲ್ಲಿ ಒಬ್ಬರಿಗಿಂತ ಇನ್ನೊಬ್ಬರು ತಮ್ಮ ಸ್ವರವನ್ನು ಏರಿಸಬಾರದು."

ಹದೀಸಿನ ಪ್ರಯೋಜನಗಳು

  1. ಯಾರಿಗಾದರೂ ತೊಂದರೆಯಾಗುವಂತಿದ್ದರೆ, ಕುರ್‌ಆನ್ ಪಠಣದ ವೇಳೆ ಸ್ವರವನ್ನು ಏರಿಸುವುದನ್ನು (ಜೋರಾಗಿ ಓದುವುದನ್ನು) ನಿಷೇಧಿಸಲಾಗಿದೆ.
  2. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಂಗಾತಿಗಳಿಗೆ ಕುರ್‌ಆನ್ ಪಠಣದ ಶಿಷ್ಟಾಚಾರಗಳನ್ನು ಕಲಿಸಿಕೊಟ್ಟಿದ್ದರು.
ಅನುವಾದ: ಆಂಗ್ಲ ಇಂಡೋನೇಷಿಯನ್ ಬಂಗಾಳಿ ರಷ್ಯನ್ ಸಿಂಹಳೀಯ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ ಥಾಯ್ الأسامية الهولندية الغوجاراتية الدرية المجرية الجورجية المقدونية الخميرية البنجابية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು