عَنْ عَائِشَةَ أُمِّ المؤْمنينَ رَضيَ اللهُ عنها قَالَت:
قُلْتُ لِلنَّبِيِّ صَلَّى اللهُ عَلَيْهِ وَسَلَّمَ: حَسْبُكَ مِنْ صَفِيَّةَ كَذَا وَكَذَا، -قَالَ أَحدُ الرُّوَاةِ: تَعْنِي قَصِيرَةً- فَقَالَ: «لَقَدْ قُلْتِ كَلِمَةً لَوْ مُزِجَتْ بِمَاءِ الْبَحْرِ لَمَزَجَتْهُ» قَالَتْ: وَحَكَيْتُ لَهُ إِنْسَانًا، فَقَالَ: «مَا أُحِبُّ أَنِّي حَكَيْتُ إِنْسَانًا وَأَنَّ لِي كَذَا وَكَذَا».
[صحيح] - [رواه أبو داود والترمذي وأحمد] - [سنن أبي داود: 4875]
المزيــد ...
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ನಾನು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದೆ: "ಸಫಿಯ್ಯಳ ಬಗ್ಗೆ ನಿಮಗೆ ಇಷ್ಟು ಸಾಕು, ಅಂದರೆ ಅವಳು ಹೀಗೆ ಹೀಗೆ ಇದ್ದಾಳೆ." (ವರದಿಗಾರರಲ್ಲಿ ಒಬ್ಬರು ಹೇಳಿದರು: ಇದರರ್ಥ 'ಅವಳು ಕುಳ್ಳಗಿದ್ದಾಳೆ' ಎಂದು). ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀನು ಖಂಡಿತವಾಗಿಯೂ ಒಂದು ಶಬ್ದವನ್ನು ಹೇಳಿದ್ದೀಯೆ, ಅದನ್ನು ಸಮುದ್ರದ ನೀರಿನೊಂದಿಗೆ ಬೆರೆಸಿದರೆ, ಅದು ಅದನ್ನು ಕಲುಷಿತಗೊಳಿಸುವುದು." ಆಯಿಷಾ (ಅಲ್ಲಾಹು ಆಕೆಯ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: "ನಾನು ಅವರ ಮುಂದೆ ಒಬ್ಬ ವ್ಯಕ್ತಿಯನ್ನು (ಅವಮಾನಿಸುವ ರೀತಿಯಲ್ಲಿ) ಅನುಕರಿಸಿ ತೋರಿಸಿದೆ." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನಗೆ ಇಷ್ಟಿಷ್ಟು (ಪ್ರಾಪಂಚಿಕ ಲಾಭ) ಸಿಕ್ಕರೂ ಸಹ, ನಾನು ಒಬ್ಬ ವ್ಯಕ್ತಿಯನ್ನು (ಅವಮಾನಿಸುವ ರೀತಿಯಲ್ಲಿ) ಅನುಕರಿಸುವುದನ್ನು ಇಷ್ಟಪಡುವುದಿಲ್ಲ."
[صحيح] - [رواه أبو داود والترمذي وأحمد] - [سنن أبي داود - 4875]
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಆಕೆಯ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಸಫಿಯ್ಯಳ - ಅಂದರೆ ಸತ್ಯವಿಶ್ವಾಸಿಗಳ ಮಾತೆ (ಅಲ್ಲಾಹು ಆಕೆಯ ಬಗ್ಗೆ ಸಂಪ್ರೀತನಾಗಲಿ) - ದೈಹಿಕ ದೋಷಗಳಲ್ಲಿ ಅವಳು ಕುಳ್ಳಗಿದ್ದಾಳೆ ಎಂಬುದು ನಿಮಗೆ ಸಾಕು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನೀನು ಖಂಡಿತವಾಗಿಯೂ ಒಂದು ಶಬ್ದವನ್ನು ಹೇಳಿದ್ದೀಯೆ, ಅದನ್ನು ಸಮುದ್ರದ ನೀರಿನೊಂದಿಗೆ ಬೆರೆಸಿದ್ದರೆ, ಅದು ಅದನ್ನು ಸ್ವಾಮ್ಯಕ್ಕೊಳಪಡಿಸಿ, ಬದಲಾಯಿಸಿ, ಕೆಡಿಸುತ್ತಿತ್ತು. ಆಯಿಷಾ (ಅಲ್ಲಾಹು ಆಕೆಯ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ಮತ್ತು ನಾನು ಒಬ್ಬ ವ್ಯಕ್ತಿಯನ್ನು ಕೀಳಾಗಿಸುವ ಉದ್ದೇಶದಿಂದ ಅವನಂತೆ ಮಾಡಿ ತೋರಿಸಿದೆ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅವನ ದೋಷದ ಬಗ್ಗೆ ಮಾತನಾಡುವುದು, ಅಥವಾ ಅವನನ್ನು ಅನುಕರಿಸುವುದು, ಅಥವಾ ಅವನು ಮಾಡುವಂತೆ ಮಾಡುವುದು, ಅಥವಾ ಅವನ ಮಾತನಾಡುವಂತೆ ಅವಮಾನಿಸುವ ರೀತಿಯಲ್ಲಿ ಮಾತನಾಡುವುದು, ಅದಕ್ಕಾಗಿ ನನಗೆ ಪ್ರಪಂಚದ ಬಹಳಷ್ಟು ವಸ್ತುಗಳನ್ನು ನೀಡಲಾದರೂ ಸಹ ನನಗೆ ಸಂತೋಷವನ್ನು ನೀಡುವುದಿಲ್ಲ.