عَنْ أَبِي ذَرٍّ، جُنْدُبِ بْنِ جُنَادَةَ، وَأَبِي عَبْدِ الرَّحْمَنِ، مُعَاذِ بْنِ جَبَلٍ رَضِيَ اللَّهُ عَنْهُمَا عَنْ رَسُولِ اللَّهِ صَلَّى اللهُ عَلَيْهِ وَسَلَّمَ قَالَ:
«اتَّقِ اللَّهَ حَيْثُمَا كُنْت، وَأَتْبِعْ السَّيِّئَةَ الْحَسَنَةَ تَمْحُهَا، وَخَالِقْ النَّاسَ بِخُلُقٍ حَسَنٍ».
[قال الترمذي: حديث حسن] - [رواه الترمذي] - [الأربعون النووية: 18]
المزيــد ...
ಅಬೂ ದರ್ ಜುಂದುಬ್ ಇಬ್ನ್ ಜುನಾದಾ, ಮತ್ತು ಅಬೂ ಅಬ್ದುರ್ರಹ್ಮಾನ್ ಮುಆದ್ ಇಬ್ನ್ ಜಬಲ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನೀನು ಎಲ್ಲೇ ಇದ್ದರೂ ಅಲ್ಲಾಹನನ್ನು ಭಯಪಡು. ಕೆಟ್ಟ ಕಾರ್ಯವನ್ನು ಮಾಡಿದರೆ, ಅದರ ನಂತರ ಒಳ್ಳೆಯ ಕಾರ್ಯವನ್ನು ಮಾಡು, ಅದು ಅದನ್ನು ಅಳಿಸಿಹಾಕುತ್ತದೆ. ಮತ್ತು ಜನರೊಂದಿಗೆ ಉತ್ತಮ ನಡತೆಯಿಂದ ವರ್ತಿಸು".
[قال الترمذي: حديث حسن] - [رواه الترمذي] - [الأربعون النووية - 18]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೂರು ವಿಷಯಗಳನ್ನು ಆದೇಶಿಸಿದ್ದಾರೆ: ಮೊದಲನೆಯದು: ಅಲ್ಲಾಹನ ಭಯ (ತಕ್ವಾ). ಅಂದರೆ, ಎಲ್ಲಾ ಸ್ಥಳಗಳಲ್ಲೂ, ಸಮಯಗಳಲ್ಲೂ ಮತ್ತು ಪರಿಸ್ಥಿತಿಗಳಲ್ಲೂ, ಖಾಸಗಿ ಜೀವನದಲ್ಲೂ, ಸಾರ್ವಜನಿಕ ಜೀವನದಲ್ಲೂ, ಆರೋಗ್ಯದಿಂದಿರುವಾಗಲೂ ಮತ್ತು ಅನಾರೋಗ್ಯದ ಸಂದರ್ಭದಲ್ಲೂ ಅಲ್ಲಾಹು ಆದೇಶಿಸಿದ ಕಡ್ಡಾಯ ಕರ್ತವ್ಯಗಳನ್ನು ನಿರ್ವಹಿಸುವುದು, ಮತ್ತು ಅವನು ನಿಷೇಧಿಸಿದ ವಿಷಯಗಳಿಂದ ದೂರವಿರುವುದು. ಎರಡನೆಯದು: ಒಂದು ಕೆಟ್ಟ ಕಾರ್ಯವನ್ನು ಮಾಡಿದರೆ, ಅದರ ನಂತರ ನಮಾಝ್, ದಾನ, ಉಪಕಾರ, ಸಂಬಂಧ ಬೆಸೆಯುವುದು, ಪಶ್ಚಾತ್ತಾಪ ಮುಂತಾದ ಒಳ್ಳೆಯ ಕಾರ್ಯವನ್ನು ಮಾಡುವುದು. ಖಂಡಿತವಾಗಿಯೂ ಅದು ಕೆಟ್ಟ ಕಾರ್ಯವನ್ನು ಅಳಿಸಿಹಾಕುತ್ತದೆ. ಮೂರನೆಯದು: ಜನರೊಂದಿಗೆ ಉತ್ತಮ ನಡತೆಯಿಂದ ವರ್ತಿಸುವುದು. ಅಂದರೆ, ಅವರ ಮುಖ ನೋಡಿ ಮುಗುಳ್ನಗುವುದು, ಮೃದುವಾಗಿ, ಸೌಮ್ಯವಾಗಿ ವರ್ತಿಸುವುದು, ಒಳಿತನ್ನು ಮಾಡುವುದು ಮತ್ತು ತೊಂದರೆ ನೀಡದಿರುವುದು.